ದುಬೈ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿ ರಿಲೀಸ್ ಆಗಿದ್ದು, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ನ್ಯೂಜಿಲ್ಯಾಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ನಂಬರ್ ಓನ್ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಬ್ಯಾಟಿಂಗ್ನಲ್ಲಿ ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಆಜಂ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಇಮಾಮ್ ಉಲ್ ಹಕ್ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾದ ರೆಸ್ಸಿ ವಂಡರ್ ಡುಸ್ಸೆನ್ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದರಿಂದ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಇಳಿಕೆಯಾಗಿದ್ದಾರೆ. ಉಳಿದಂತೆ 5ನೇ ಸ್ಥಾನದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಇದ್ದಾರೆ.
-
A new No.1!
— ICC (@ICC) July 20, 2022 " class="align-text-top noRightClick twitterSection" data="
A busy week in ODI cricket has led to a number of changes in the @MRFWorldwide ICC Men's Player Rankings.
Details 👇
">A new No.1!
— ICC (@ICC) July 20, 2022
A busy week in ODI cricket has led to a number of changes in the @MRFWorldwide ICC Men's Player Rankings.
Details 👇A new No.1!
— ICC (@ICC) July 20, 2022
A busy week in ODI cricket has led to a number of changes in the @MRFWorldwide ICC Men's Player Rankings.
Details 👇
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯಾ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಪಂತ್ ಸದ್ಯ 52ನೇ ಸ್ಥಾನದಲ್ಲಿದ್ದು,ಹಾರ್ದಿಕ್ ಪಾಂಡ್ಯ ಆಲ್ರೌಂಡರ್ಗ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ಏಕೈಕ ಬೌಲರ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಯಾವುದೇ ಪ್ಲೇಯರ್ಸ್ ಸ್ಥಾನ ಪಡೆದುಕೊಂಡಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ 7 ವಿಕೆಟ್ ಪಡೆದುಕೊಂಡಿರುವ ಯಜುವೇಂದ್ರ ಚಹಲ್ ಸದ್ಯ 16ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.