ETV Bharat / sports

ಬುಮ್ರಾ ಮಾರಕ ದಾಳಿ: ದಕ್ಷಿಣ ಆಫ್ರಿಕಾವನ್ನು 209ಕ್ಕೆ ನಿಯಂತ್ರಿಸಿದ ಭಾರತ; 13 ರನ್​ಗಳ ಮುನ್ನಡೆ​ - ಜಸ್ಪ್ರೀತ್ ಬುಮ್ರಾ

ಭಾರತದ 223 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 16ಕ್ಕೆ1 ವಿಕೆಟ್​ ಕಳೆದುಕೊಂಡಿತ್ತು. 2ನೇ ದಿನವಾದ ಇಂದು ಕೀಗನ್ ಪೀಟರ್ಸನ್​ ಏಕಾಂಗಿ ಹೋರಾಟದ ಅರ್ಧಶತಕದ ಹೊರತಾಗಿಯೂ 210ರನ್​ಗಳಿಸಲಷ್ಟೇ ಶಕ್ತವಾಯಿತು.

India vs South Africa test
ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್
author img

By

Published : Jan 12, 2022, 8:51 PM IST

Updated : Jan 13, 2022, 4:21 PM IST

ಕೇಪ್​ಟೌನ್​: ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಮತ್ತು ಇತರೆ ಬೌಲರ್​ಗಳ ನೆರವಿನಿಂದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 210 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ 13 ರನ್​ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ಭಾರತದ 223 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 16ಕ್ಕೆ1 ವಿಕೆಟ್​ ಕಳೆದುಕೊಂಡಿತ್ತು. 2ನೇ ದಿನವಾದ ಇಂದು ಕೀಗನ್ ಪೀಟರ್ಸನ್​ ಏಕಾಂಗಿ ಹೋರಾಟದ ಅರ್ಧಶತಕದ ಹೊರತಾಗಿಯೂ 210 ರನ್​ಗಳಿಸಲಷ್ಟೇ ಶಕ್ತವಾಯಿತು.

ನಿನ್ನೆ 8 ರನ್​ಗಳಿಸಿ 2ನೇ ದಿನ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ಮಾರ್ಕ್ರಮ್​ 2ನೇ ದಿನದ 2ನೇ ಎಸೆತದಲ್ಲೇ ಬುಮ್ರಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಇನ್ನು ನೈಟ್​ ವಾಚ್​ಮನ್​ ಆಗಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಕೇಶವ್ ಮಹಾರಾಜ್​ 45 ಎಸೆತಗಳಲ್ಲಿ 4 ಬೌಂಡರಿ ಸಹಿತ 25 ರನ್​ಗಳಿಸಿ ಉಮೇಶ್ ಯಾದವ್​ಗೆ ವಿಕೆಟ್ ಒಪ್ಪಿಸಿದರು.

ಆದರೆ 4ನೇ ವಿಕೆಟ್​ಗೆ ಜೊತೆಯಾದ ಕೀಗನ್ ಪೀಟರ್ಸನ್​ ಮತ್ತು ವ್ಯಾನ್ ಡರ್ ಡಸೆನ್ 67 ರನ್​​ಗಳ ಜೊತೆಯಾಟ ನೀಡಿ ಕುಸಿಯುತ್ತಿದ್ದ ತಂಡಕ್ಕೆ ಚೇತರಿಕೆ ನೀಡಿದರು. ವ್ಯಾನ್ ಡರ್​ ಡಸೆನ್​ 54 ಎಸೆತಗಲಲ್ಲಿ 24 ರನ್​ಗಳಿಸಿ ಯಾದವ್​ಗೆ 2ನೇ ಬಲಿಯಾದರು.

ಡಸೆನ್​ ವಿಕೆಟ್ ಪತನದ ನಂತರ ಬಂದ ಬವುಮಾ(28) ಪೀಟರ್ಸನ್ ಜೊತೆ ಸೇರಿ 47 ರನ್​ ಸೇರಿಸಿದರು. ಆದರೆ ಶಮಿ ಬೌಲಿಂಗ್​ನಲ್ಲಿ ಬವುಮಾ ಔಟಾಗುತ್ತಿದ್ದಂತೆ ಹರಿಣಗಳ ಪತನ ಶುರುವಾಯಿತು. ಅದೇ ಓವರ್​ನಲ್ಲಿ ವಿಕೆಟ್ ಕೀಪರ್ ಕೈಲ್‌ ವೆರಿನ್‌ ಕೂಡ ಡಕ್​ಔಟ್ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಪೀಟರ್ಸನ್​​ 166 ಎಸೆತಗಳಲ್ಲಿ​ 72 ರನ್​ ಸಿಡಿಸಿ ಬುಮ್ರಾ ಬೌಲಿಂಗ್​ನಲ್ಲಿ ಪೂಜಾರಾಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು.

ಬಾಲಂಗೋಚಿಗಳಾದ ರಬಾಡ(15), ಒಲಿವಿಯರ್​ ಅಜೇಯ 10 ರನ್​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಇದಕ್ಕು ಮೊದಲು ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ವಿರಾಟ್​ ಕೊಹ್ಲಿ ಅವರ ಏಕಾಂಗಿ ಆಟದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 77.3 ಓವರ್​ಗಳಲ್ಲಿ ಆಲೌಟ್ ಆಗಿತ್ತು.

ಇದನ್ನೂ ಓದಿ:ಬ್ಯಾಟಿಂಗ್​​ನಲ್ಲಿ ಮಿಸ್​​, ಫೀಲ್ಡಿಂಗ್​ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ

Last Updated : Jan 13, 2022, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.