ನವದೆಹಲಿ : ಭಾರತದಲ್ಲಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಾಗುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಸಾವೀಗೀಡಾಗುತ್ತಿದ್ದಾರೆ.
ಕೆಲವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಇನ್ನೂ ಕೆಲವರಿಗೆ ಆಸ್ಪತ್ರೆ ಸೇರಲೂ ಸಾಧ್ಯವಾಗದೇ ಸಂಕಟಪಡುತ್ತಿದ್ದಾರೆ. ಭಾರತೀಯ ಸ್ಥಿತಿಯನ್ನು ಕಂಡು ಮರುಗಿರುವ ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಒಂದು ಬಿಟಿಸಿ(ಸುಮಾರು 41 ಲಕ್ಷರೂ) ದೇಣಿಗೆಯಾಗಿ ನೀಡಿದ್ದಾರೆ.
ಸೋಮವಾರವಷ್ಟೇ ಆಸ್ಟ್ರೇಲಿಯಾ ಮತ್ತು ಕೆಕೆಆರ್ ವೇಗಿ ಪ್ಯಾಟ್ ಕಮ್ಮಿನ್ಸ್ ಆಕ್ಸಿಜನ್ ಕೊರತೆ ನೀಗಿಸಿ ಎಂದು ಪಿಎಂ ಕೇರ್ಸ್ ನಿಧಿಗೆ 50 ಸಾವಿರ ಡಾಲರ್(37 ಲಕ್ಷ ರೂ) ದೇಣಿಗೆ ನೀಡಿ ಭಾರತೀಯರ ಹೃದಯ ಗೆದ್ದಿದ್ದರು.
ಇದೀಗ ಭಾರತೀಯರು ಹೆಚ್ಚು ಪ್ರೀತಿಸುವ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಕೂಡ ಒಂದು ಬಿಟ್ ಕಾಯಿನ್( ಸುಮಾರು 41 ಲಕ್ಷ ರೂ.) ಕ್ರಿಪ್ಟೋ ಪರಿಹಾರ ನಿಧಿಯ ಮೂಲಕ ನೀಡುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಇಂದು ಘೋಷಿಸಿದ್ದಾರೆ.
-
Well done @patcummins30 🙏🏻 pic.twitter.com/iCeU6933Kp
— Brett Lee (@BrettLee_58) April 27, 2021 " class="align-text-top noRightClick twitterSection" data="
">Well done @patcummins30 🙏🏻 pic.twitter.com/iCeU6933Kp
— Brett Lee (@BrettLee_58) April 27, 2021Well done @patcummins30 🙏🏻 pic.twitter.com/iCeU6933Kp
— Brett Lee (@BrettLee_58) April 27, 2021
ಭಾರತ ಸದಾ ನನ್ನ ಎರಡನೇ ಮನೆ ಇದ್ದಂತೆ. ನನ್ನ ವೃತ್ತಿಪರ ವೃತ್ತಿಜೀವನದ ಅವಧಿಯಲ್ಲಿ ಮತ್ತು ನಿವೃತ್ತಿಯ ನಂತರವೂ ಈ ದೇಶದ ಜನರಿಂದ ನಾನು ಪಡೆದ ಪ್ರೀತಿ ಮತ್ತು ವಾತ್ಸಲ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಬ್ರೆಟ್ ಲೀ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಸ್ತುತ ಈ ಸಾಂಕ್ರಾಮಿಕದಿಂದ ಇಲ್ಲಿನ ಜನರು ನರಳುತ್ತಿರುವುದನ್ನು ನೋಡಿದರೆ ತುಂಬಾ ದುಃಖವಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ನಾನು ಕ್ರಿಪ್ಟೋ ರಿಲೀಫ್ ಫಂಡ್ ಮೂಲಕ 1ಬಿಟಿಸಿ(ಬಿಟ್ ಕಾಯಿನ್) ಭಾರತದಾದ್ಯಂತ ಇರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವುದಕ್ಕಾಗಿ ದೇಣಿಗೆ ನೀಡುತ್ತಿದ್ದೇನೆ" ಎಂದು ಲೀ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದು ನಾವೆಲ್ಲರೂ ಒಂದಾಗಬೇಕಾದ ಸಮಯ ಮತ್ತು ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ನೆರವಾಗಬೇಕಾಗಿದೆ. ಈ ಸಂದರ್ಭದಲ್ಲಿ ಹಗಲು ರಾತ್ರಿಯನ್ನದೇ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೊದಲ ಕ್ರಿಕೆಟಿಗನಿಗನಾಗಿ ಭಾರತೀಯರಿಗೆ ದೇಣಿಗೆ ನೀಡಿದ ಪ್ಯಾಟ್ ಕಮ್ಮಿನ್ಸ್ಗೆ 'ನಿನ್ನೆ ನೀವು ಒಳ್ಳೆಯ ಕೆಲಸ ಮಾಡಿದ್ದೀರಾ' ಎಂದು ಅಭಿನಂಧನೆ ಸಲ್ಲಿಸಿದ್ದಾರೆ.
ಇದನ್ನು ಓದಿ: ಭಾರತೀಯರಿಗಾಗಿ ಮಿಡಿದ ಮನ.. 'ಪಿಎಂ ಕೇರ್ಸ್ ಫಂಡ್'ಗೆ 37 ಲಕ್ಷ ರೂ. ದೇಣಿಗೆ ನೀಡಿದ ಕಮ್ಮಿನ್ಸ್