ETV Bharat / sports

ಕ್ರಿಕೆಟ್​ ದಂತಕತೆ ಡಾನ್ ಬ್ರಾಡ್ಮನ್​ರ 'ತ್ರಿಶತಕ ದಾಖಲೆ'ಯ ಬ್ಯಾಟ್ ಹರಾಜಿಗೆ - ಮ್ಯೂಸಿಯಂನಲ್ಲಿದ್ದ ಬ್ಯಾಟ್​ ಹರಾಜು ಹಾಕಲು ನಿರ್ಧಾರ

ಕ್ರಿಕೆಟ್​ ದಂತಕತೆ ಡಾನ್​ ಬ್ರಾಡ್ಮನ್​ ಆ್ಯಶಸ್ ಸರಣಿಯಲ್ಲಿ ದಾಖಲೆಯ 2 ಬಾರಿ ತ್ರಿಶತಕ ಸಿಡಿಸಿದ ಬ್ಯಾಟ್​ ಅನ್ನು ಇದೀಗ ಹರಾಜಿಗೆ ಇಡಲಾಗಿದೆ..

bradmans history
ಡಾನ್​ ಬ್ರಾಡ್ಮನ್
author img

By

Published : Dec 8, 2021, 5:06 PM IST

ಮೆಲ್ಬೋರ್ನ್ : ಕ್ರಿಕೆಟ್​ ದಂತಕತೆ ಡಾನ್​ ಬ್ರಾಡ್ಮನ್​ ಆ್ಯಶಸ್ ಸರಣಿಯಲ್ಲಿ ದಾಖಲೆಯ 2 ಬಾರಿ ತ್ರಿಶತಕ ಸಿಡಿಸಿದ ಬ್ಯಾಟ್​ ಅನ್ನು ಇದೀಗ ಹರಾಜಿಗೆ ಇಡಲಾಗಿದೆ. 1999ರಿಂದ ಆಸ್ಟ್ರೇಲಿಯಾದ ಸದರ್ನ್​ ಹೈಲ್ಯಾಂಡ್​ನಲ್ಲಿನ ಬ್ರಾಡ್ಮನ್​ ಮ್ಯೂಸಿಯಂನಲ್ಲಿ ಈ ಬ್ಯಾಟ್​ ಅನ್ನು ಸಂರಕ್ಷಣೆ ಮಾಡಲಾಗುತ್ತಿದೆ.

ಡೊನಾಲ್ಡ್​ ಬ್ಯಾಡ್ಮನ್​ ಅವರು 1934ರಲ್ಲಿ ನಡೆದ ಆ್ಯಶಸ್​ ಸರಣಿಯಲ್ಲಿ ಎರಡು ಬಾರಿ 300ಕ್ಕೂ ಅಧಿಕ ರನ್​ಗಳನ್ನು ಇದೇ ಬ್ಯಾಟ್​ನಿಂದ ಬಾರಿಸಿದ್ದರು. ಅಲ್ಲದೇ, ಇದೇ ಸರಣಿಯಲ್ಲಿ ಸಹ ಆಟಗಾರ ಬಿಲ್​ ಪೊನ್ಸ್​ಪೋರ್ಡ್ ಜೊತೆ ಸೇರಿ 451ರನ್​ ಬಾರಿಸಿ ಅತ್ಯಧಿಕ ಜೊತೆಯಾಟದ ದಾಖಲೆ ನಿರ್ಮಿಸಿದ್ದರು.

ಬ್ಯಾಟ್​ ಮೇಲೆ ಉಲ್ಲೇಖಿವಾಗಿರುವ ಡಾನ್ ಬ್ರಾಡ್ಮನ್​ರ ರನ್​ ದಾಖಲೆ
ಬ್ಯಾಟ್​ ಮೇಲೆ ಉಲ್ಲೇಖವಾಗಿರುವ ಡಾನ್ ಬ್ರಾಡ್ಮನ್​ರ ರನ್​ ದಾಖಲೆ

ಹರಾಜಿಗಿಡಲಾದ ಬ್ಯಾಟ್​ ಮೇಲೆ ಸ್ವತಃ ಬ್ರಾಡ್ಮನ್​ ಅವರೇ ತಾವು ಬಾರಿಸಿದ ದಾಖಲೆ ರನ್​ಗಳನ್ನು ಅದರ ಮೇಲೆ ಬರೆದಿದ್ದಾರೆ. ಬ್ರಾಡ್ಮನ್​ರ ಈ ವಿಶೇಷ ಬ್ಯಾಟ್​ ಅನ್ನು ಹರಾಜಿಗೆ ಇಡಲಾಗಿದ್ದು, ಇದಕ್ಕೆ ಬೆಲೆ ನಿಗದಿ ಮಾಡಿಲ್ಲ. ಇದರ ಮೇಲೆ ಯಾವುದೇ ತಕರಾರು ಕೂಡ ಇಲ್ಲ ಎಂದು ಮ್ಯೂಸಿಯಂ ಕಾರ್ಯನಿರ್ವಾಹಕ ನಿರ್ದೇಶಕಿ ರಿನಾ ಹೋರ್​ ತಿಳಿಸಿದ್ದಾರೆ.

ಇದನ್ನೂ ಓದಿ: ICC Test Rankings :11ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಕನ್ನಡಿಗ ಮಯಾಂಕ್​​, ಬೌಲಿಂಗ್​​ ವಿಭಾಗದಲ್ಲಿ ಅಶ್ವಿನ್​​​ಗೆ 2ನೇ ಸ್ಥಾನ

ಈ ಹಿಂದೆಯೂ ಕೂಡ ಬ್ರಾಡ್ಮನ್​ರ ಮತ್ತೊಂದು ಬ್ಯಾಟ್​ ಅನ್ನು ಹರಾಜಿಗಿಡಲಾಗಿತ್ತು. ಈ ವೇಳೆ ಅದು 110,000 ಆಸ್ಟ್ರೇಲಿಯನ್​ ಡಾಲರ್​ಗೆ ಮಾರಾಟ ಕಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.