ಅಬು ಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ಕಟ್ಟುನಿಟ್ಟಿನ ಬೌಲಿಂಗ್ ದಾಳಿಯ ಮುಂದೆ ತಬ್ಬಿಬ್ಬಾದ ರಾಜಸ್ಥಾನ ರಾಯಲ್ಸ್ ತಂಡ 155 ರನ್ಗಳ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಲಾಗದೇ 33 ರನ್ಗಳ ಸೋಲು ಕಂಡಿದೆ.
ಅಬು ಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತನ್ನ 20 ಓವರ್ಗಳ ಕೋಟಾದಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ಗಳಿಸಿತ್ತು. ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್ಗಳ ನೆರವಿನಿಂದ 43 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು. ಇವರಿಗೆ ಸಾಥ್ ನೀಡಿದ್ದ ಪಂತ್ 24 ಮತ್ತು ಹೆಟ್ಮಾಯಿರ್ 28 ರನ್ಗಳಿಸಿದ್ದರು.
-
Winners are grinners! ☺️@DelhiCapitals seal a comfortable win over #RR in Match 36 of the #VIVOIPL. 👍 👍#DCvRR
— IndianPremierLeague (@IPL) September 25, 2021 " class="align-text-top noRightClick twitterSection" data="
Scorecard 👉 https://t.co/SKdByWvPFO pic.twitter.com/xltkDgWv5V
">Winners are grinners! ☺️@DelhiCapitals seal a comfortable win over #RR in Match 36 of the #VIVOIPL. 👍 👍#DCvRR
— IndianPremierLeague (@IPL) September 25, 2021
Scorecard 👉 https://t.co/SKdByWvPFO pic.twitter.com/xltkDgWv5VWinners are grinners! ☺️@DelhiCapitals seal a comfortable win over #RR in Match 36 of the #VIVOIPL. 👍 👍#DCvRR
— IndianPremierLeague (@IPL) September 25, 2021
Scorecard 👉 https://t.co/SKdByWvPFO pic.twitter.com/xltkDgWv5V
155 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್ಗಳಿಸಿ 33 ರನ್ಗಳ ಸೋಲು ಕಂಡಿತು. ಸಂಜು ಸಾಮ್ಸನ್ 53 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 70 ರನ್ಗಳಿಸಿದರಾದರೂ ಇತರೆ ಬ್ಯಾಟ್ಸ್ಮನ್ಗಳ ವೈಫಲ್ಯತೆಯಿಂದ ತಂಡದ ಸೋಲಿಗೆ ಕಾರಣವಾಯಿತು.
ಆರಂಭಿಕರ ವೈಫಲ್ಯ;
ಲೂಯಿಸ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಮೊದಲ ಓವರ್ನಲ್ಲೇ ಆವೇಶ್ ಖಾನ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟಾದರು. ನಂತರದ ಓವರ್ನಲ್ಲಿ ಯುವ ಆರಂಭಿಕ ಬ್ಯಾಟ್ಸ್ಮನ್ ಜೈಸ್ವಾಲ್ ಕೂಡ ಅದೇ ಮಾದರಿಯಲ್ಲಿ ನಾರ್ಟ್ಜ್ಗೆ(ನೋಕಿಯಾ) ವಿಕೆಟ್ ಒಪ್ಪಿಸಿದರು.
ನಂತರ ಬಂದ ಡೇವಿಡ್ ಮಿಲ್ಲರ್(7), ಮಹಿಪಾಲ್ ಲೋಮ್ರೋರ್(19), ರಿಯಾನ್ ಪರಾಗ್(2), ರಾಹುಲ್ ತೆವಾಟಿಯಾ(9) ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಅದ್ಭುತ ಬೌಲಿಂಗ್ ದಾಳಿ ನಡೆಸಿದ ಎನ್ರಿಚ್ ನಾರ್ಟ್ಜ್ 18ಕ್ಕೆ 2, ರವಿಚಂದ್ರನ್ ಅಶ್ವಿನ್ 20ಕ್ಕೆ 1, ರಬಾಡ 26ಕ್ಕೆ1, ಆವೇಶ್ ಖಾನ್ 29ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನ ಮೂಲಕ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿತು.
ಇದನ್ನು ಓದಿ:ಈ ವರ್ಷ ರದ್ದಾಗಿರುವ ಭಾರತ - ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ 2022ಕ್ಕೆ ಮರು ಆಯೋಜನೆ: ವರದಿ