ಸೌತಾಂಪ್ಟನ್: 2 ವರ್ಷಗಳ ಕಾಲದ ನಡೆದ ಟೆಸ್ಟ್ ಚಾಂಪಿಯನ್ಶಿಪ್ ಲೀಗ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಗ್ರ 2 ಸ್ಥಾನ ಪಡೆದು ಫೈನಲ್ ಪ್ರವೇಶಿಸಿವೆ. ಜೂನ್ 18ರಂದು ಎರಡು ತಂಡಗಳು ಚೊಚ್ಚಲ WTC ಟ್ರೋಫಿಗಾಗಿ ಕಾದಾಡಲಿವೆ. ಭಾರತ ಗೆದ್ದರೆ ಎಲ್ಲಾ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಗೆದ್ದರೆ ಅವರ ಮೊಟ್ಟ ಮೊದಲ ಐಸಿಸಿ ಟ್ರೋಫಿ ಇದಾಗಲಿದೆ.
ಟೆಸ್ಟ್ ಕ್ರಿಕೆಟ್ ಮಾತ್ರ ಆಡುವ ಪೂಜಾರ ತಮ್ಮ ಪಾಲಿಗೆ ಇದೇ ವಿಶ್ವಕಪ್ ಇದ್ದಂತೆ ಎಂದಿದ್ದು, ಇಂದು ಭಾರತ ಅಗ್ರ ತಂಡಗಳನ್ನು ಹಿಂದಿಕ್ಕಿ ಫೈನಲ್ ಪ್ರವೇಶಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದಕ್ಕೆಲ್ಲಾ ಭಾರತೀಯ ಪ್ರಚಂಡ ಬೌಲಿಂಗ್ ದಾಳಿಯೇ ಕಾರಣ ಎಂದು ಬೌಲರ್ಗಳಿಗೆ ಕ್ರೆಡಿಟ್ ನೀಡಿದ್ದಾರೆ.
"ವೈಯಕ್ತಿಕವಾಗಿ ಈ ಪ್ರಶಸ್ತಿ ನನಗೆ ತುಂಬಾ ದೊಡ್ಡದು. ನಾವು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಿದ್ದೇವೆ. ಇದಕ್ಕಾಗಿ ನಾವು ಕಠಿಣ ಪರಿಶ್ರಮವಹಿಸಿದ್ದೇವೆ. ಇದು ನಮಗೆ 50 ಓವರ್ಗಳ ಮತ್ತು 20 ಓವರ್ಗಳ ವಿಶ್ವಕಪ್ ಫೈನಲ್ ಇದ್ದಂತೆ. ಟೆಸ್ಟ್ ಕ್ರಿಕೆಟ್ ಉಳಿಯುವುದು ಮುಖ್ಯವಾಗಿದೆ, ಈ WTC ಯಿಂದ ಪ್ರತಿಯೊಂದು ಪಂದ್ಯ ಮತ್ತು ಸರಣಿಯೂ ಮಹತ್ವದಾಗುವಂತೆ ಮಾಡುತ್ತಿದೆ. ನಾವು ಈ ಪ್ರಶಸ್ತಿ ಗೆದ್ದರೆ ಸಾಕಷ್ಟು ಯುವಕರು ಟೆಸ್ಟ್ ಮಾದರಿಯಲ್ಲಿ ಆಡಲು ಬಯಸುತ್ತಾರೆ. ಮತ್ತು ಮುಂದಿನ ಆವೃತ್ತಿಯ ಫೈನಲ್ನಲ್ಲಿ ಆಡಲು ಬಯಸುತ್ತಾರೆ" ಎಂದು ಪೂಜಾರ ಹೇಳಿದ್ದಾರೆ.
ಭಾರತೀಯ ಬೌಲಿಂಗ್ ದಾಳಿಯ ಬಗ್ಗೆ ಕೇಳಿದಾಗ, ನಾವು ಇಂದು ಫೈನಲ್ ಪ್ರವೇಶಿಸಲು ಅವರೇ ಕಾರಣ ಎಂದು ತಿಳಿಸಿದ್ದಾರೆ,
"ನಮ್ಮ ಬೌಲರ್ಗಳು, ಅದರಲ್ಲೂ ವೇಗದ ಬೌಲರ್ಗಳೇ WTC ಫೈನಲ್ ಪ್ರವೇಶಿಸಲು ಪ್ರಮುಖ ಕಾರಣ. ಅವರು ಯಾವುದೇ ಪಿಚ್ನಲ್ಲಾದರೂ 20 ವಿಕೆಟ್ ಪಡೆಯಲು ಸಮರ್ಥರಾಗಿದ್ದಾರೆ. ಅವರು ನಿರಂತರ ಬೆಳವಣಿಯನ್ನು ನೋಡಲು ನಾನು ತುಂಬಾ ಇಷ್ಟಪಡುತ್ತೇನೆ. ನಾವು ತಂಡದಲ್ಲಿ ಸಾಕಷ್ಟು ಬ್ಯಾಕಪ್ ಆಯ್ಕೆಗಳನ್ನು ಹೊಂದಿದ್ದೇವೆ. ಪ್ರತಿಯೊಬ್ಬರು ಹೊಸ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದಾರೆ "ಎಂದು ಪೂಜಾರ ಭಾರತೀಯ ಬೌಲರ್ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಈ ಕಾರಣದಿಂದ ಸೌತಾಂಪ್ಟನ್ನಲ್ಲಿ ಅಶ್ವಿನ್-ಜಡೇಜಾ ಇಬ್ಬರೂ ಆಡ್ಬೇಕು : ಸುನೀಲ್ ಗವಾಸ್ಕರ್