ETV Bharat / sports

ಪಾಕಿಸ್ತಾನ ಅಂಧರಿಗೆ ಸಿಕ್ತು ವೀಸಾ ಅನುಮೋದನೆ: ವಿಶ್ವಕಪ್​ ಆಡಲು ಭಾರತಕ್ಕೆ ಪ್ರಯಾಣ

ಪಾಕಿಸ್ತಾನ ಅಂಧರ ಕ್ರಿಕೆಟ್​ ತಂಡಕ್ಕೆ ಕೇಂದ್ರ ಗೃಹ ಸಚಿವಾಲಯ ವೀಸಾ ಅನುಮೋದನೆ ನೀಡಿದ್ದು, 5 ರಿಂದ 17ರ ವರೆಗೆ ನಡೆಯಲಿರುವ ಅಂಧರ ಟಿ 20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಸ್ಪರ್ಧಿಸಲಿದೆ.

author img

By

Published : Dec 7, 2022, 12:35 PM IST

blind-world-cup-pakistan-players-get-visa-approval
ಪಾಕಿಸ್ತಾನ ಅಂಧರಿಗೆ ಸಿಕ್ತು ವಿಸಾ: ವಿಶ್ವಕಪ್​ ಆಡಲು ಭಾರತಕ್ಕೆ ಪ್ರಯಾಣ

ನವದೆಹಲಿ: ಡಿಸೆಂಬರ್ 5 ರಿಂದ 17 ಭಾರತದಲ್ಲಿ ನಡೆಯಲಿರುವ ಅಂಧರ ಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ 34 ಆಟಗಾರರಿಗೆ ಮತ್ತು ಅಧಿಕಾರಿಗಳಿಗೆ ವೀಸಾ ನೀಡಲು ಕೇಂದ್ರ ಗೃಹ ಸಚಿವಾಲಯ ಅನುಮೋದಿಸಿದೆ. ಅಂಧರ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ 34 ಆಟಗಾರರು ಮತ್ತು ಅಧಿಕಾರಿಗಳಿಗೆ ವೀಸಾ ನೀಡಲು ಗೃಹ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನುಮೋದನೆಗೂ ಮುನ್ನ ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿ, ಭಾರತ ವಿದೇಶಾಂಗ ಸಚಿವಾಲಯದಿಂದ ಪಾಕ್​ ತಂಡಕ್ಕೆ ಅನುಮತಿ ಸಿಕ್ಕಿಲ್ಲ. ಈ ದುರದೃಷ್ಟಕರ ಘಟನೆಯಿಂದಾಗಿ ಪಾಕಿಸ್ತಾನದ ಅಂಧರ ಕ್ರಿಕೆಟ್ ತಂಡ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ. ತಾರತಮ್ಯದ ಕ್ರಮಕ್ಕಾಗಿ ವಿಶ್ವ ಅಂಧರ ಕ್ರಿಕೆಟ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಭವಿಷ್ಯದಲ್ಲಿ ಭಾರತವು ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸದಂತೆ ಭಾರತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ವಿಶ್ವ ಅಂಧರ ಕ್ರಿಕೆಟ್‌ನಿಂದ ಒತ್ತಾಯಿಸುತ್ತೇವೆ ಎಂದು ದೂರಿತ್ತು.

ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎರಡನೇ ಸ್ಥಾನ ಪಡೆದಿತ್ತು. ಪಾಕಿಸ್ತಾನ ತಂಡಕ್ಕೆ ಅನುಮೋದನೆ ದೊರೆತ ನಂತರ ಈಗ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ನೇಪಾಳ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 12 ದಿನ ಕಪ್​ಗಾಗಿ ಸೆಣಸಲಿದೆ. ಪಂದ್ಯಗಳು ಫರಿದಾಬಾದ್, ದೆಹಲಿ, ಮುಂಬೈ, ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ: ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್​ ಆಯ್ಕೆ: ಗೆಲ್ಲುವ ಒತ್ತಡದಲ್ಲಿ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.