ಮುಂಬೈ: ಭಾರತ ತಂಡದ ಸ್ವಿಂಗ್ ಸ್ಪೆಷಲಿಸ್ಟ್ ಆಗಿರುವ ಭುವನೇಶ್ವರ್ ಕುಮಾರ್ಗೆ ಮೇಲಿಂದ ಮೇಲೆ ಕಾಡುವ ಗಾಯದ ಸಮಸ್ಯೆಗಳಿಂದ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಡದಿರಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಭುವಿ ಇದನ್ನು ಅಧಿಕೃತವಾಗಿ ಎಲ್ಲೂ ಹೇಳಿಲ್ಲ.
ಬಿಸಿಸಿಐ ಇತ್ತೀಚೆಗೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಘೋಷಿಸಿತ್ತು. ಅದರಲ್ಲಿ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಕೈಬಿಡಲಾಗಿತ್ತು. ಪಾಂಡ್ಯ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಅವರನ್ನು ಟೆಸ್ಟ್ ತಂಡದಿಂದ ಹೊರಗಿಡಲಾಗಿತ್ತು. ಆದರೆ, ವಿಶ್ವದ ಸ್ವಿಂಗ್ ಸ್ಪೆಷಲಿಸ್ಟ್ ಬೌಲರ್ಗಳಲ್ಲಿ ಒಬ್ಬರಾಗಿರುವ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡದಿದ್ದರೂ ಎಲ್ಲರ ಹುಬ್ಬೇರಿಸಿತ್ತು. ಬಿಸಿಸಿಐ ನಡೆಯನ್ನು ಕೆಲವು ಪ್ರಶ್ನಿಸಿದ್ದರು.
ಆದರೆ, ಭುವಿ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯದಿರುವುದಕ್ಕೆ ಅಸಲಿ ಕಾರಣ ಹೊರಬಿದ್ದಿದೆ. ಮುಂಚೂಣಿ ಮಾಧ್ಯಮದ ವರದಿ ಪ್ರಕಾರ, ಭುವನೇಶ್ವರ್ ಕುಮಾರ್ ದೀರ್ಘ ಸ್ವರೂಪದ ಕ್ರಿಕೆಟ್ನಲ್ಲಿ ಆಡುವುದಕ್ಕೆ ಆಸಕ್ತಿ ಹೊಂದಿಲ್ಲ ಎಂಬುದು ತಿಳಿದುಬಂದಿದೆ. ಸೀಮಿತ ಓವರ್ಗಳಲ್ಲಿ ತಂಡಕ್ಕೆ ಮರಳಿರುವ ಭುವಿಗೆ ಟೆಸ್ಟ್ ಆಡುವ ಉತ್ಸಾಹ ಉಳಿದಿಲ್ಲ. ಹಾಗಾಗಿ ಅವರು ಟಿ20 ಮತ್ತು ಏಕದಿನ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂಬುದನ್ನು ಅವರ ಆಪ್ತ ಮೂಲ ತಿಳಿಸಿದೆ.
ಭುವನೇಶ್ವರ್ ಕುಮಾರ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಸತತ 2 ವರ್ಷಗಳಲ್ಲಿ ಮೂರು ವಿಶ್ವಕಪ್ ಬರುತ್ತಿದೆ. ಹಾಗಾಗಿ ಸೀಮಿತ ಮಾದರಿಯಲ್ಲಿ ಖಾಯಂ ಆಗಿ ಆಡುವ ಆಲೋಚನೆಯಲ್ಲಿರಬಹುದು ಎನ್ನಲಾಗುತ್ತಿದೆ.
ಆದರೆ ಭುವನೇಶ್ವರ್ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ತಾವೂ ಟೆಸ್ಟ್ ಕ್ರಿಕೆಟ್ಗೆ ಸಿದ್ಧತೆ ನಡೆಸುತ್ತಿದ್ದೇನೆ. ನನ್ನ ಮೊದಲ ಆಧ್ಯತೆ ಟೆಸ್ಟ್ ಕ್ರಿಕೆಟ್ ಎಂದಿದ್ದರು. ಆದರೆ ಇದೀಗ ಅವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಉತ್ಸಾಹ ಇಲ್ಲ ಎನ್ನುವ ಗಾಳಿ ಸುದ್ದಿಗೆ ಅವರೇ ಸ್ಪಷ್ಟನೇ ನೀಡಬೇಕಿದೆ.
ಇದನ್ನು ಓದಿ:ಕನ್ನಡತಿ ವೇದಾ ವಿಚಾರದಲ್ಲಿ ಬಿಸಿಸಿಐ ನಡೆ ಖಂಡಿಸಿದ ಆಸೀಸ್ ಮಾಜಿ ಕ್ರಿಕೆಟರ್ ಸ್ಥಾಲೇಕರ್