ETV Bharat / sports

ಬೆಂಗಳೂರಿನಲ್ಲಿ ರಣಜಿ ನಾಕೌಟ್ ಪಂದ್ಯಗಳು: ಕರ್ನಾಟಕಕ್ಕೆ ಯುಪಿ ಎದುರಾಳಿ

author img

By

Published : Apr 28, 2022, 8:28 PM IST

ಇಂಡಿಯನ್ ಪ್ರೀಮಿಯರ್ ಲೀಗ್​ ಮುಗಿದ ನಂತರ ರಣಜಿ ಟ್ರೋಫಿ ಪುನರಾರಂಭಗೊಳ್ಳಲಿದೆ. ಈ ಟೂರ್ನಿಗೆ ಕ್ವಾರಂಟೈನ್ ಅವಶ್ಯಕತೆಯಿಲ್ಲ. ಆದರೆ ಆಟಗಾರರು ಬಯೋಬಬಲ್​ನಲ್ಲಿ ಇರಬೇಕಾಗುತ್ತದೆ. ಮತ್ತು ಬೆಂಗಳೂರಿಗೆ ಆಗಮಿಸುವ ಮುನ್ನ ಎಂದು ಆರ್​ಟಿಪಿಸಿಆರ್​ ನೆಗೆಟಿವ್​ ಒಪ್ಪಿಸಬೇಕೆಂದು ತಿಳಿಸಿದೆ.

Bengaluru to host Ranji Trophy knockout matches
ರಣಜಿ ಟ್ರೋಫಿ ನಾಕೌಟ್ ಪಂದ್ಯ

ಬೆಂಗಳೂರು: 2021-22ರ ರಣಜಿ ಟ್ರೋಫಿಯ ನಾಕೌಟ್​ ಪಂದ್ಯಗಳು ಜೂನ್​ 4 ರಿಂದ 8ರವರೆಗೆ ಬೆಂಗಳೂರಿನ ಆತಿಥ್ಯದಲ್ಲಿ ನಡೆಯಲಿವೆ. ಕರ್ನಾಟಕ ತಂಡ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ ಮುಗಿದ ನಂತರ ರಣಜಿ ಟ್ರೋಫಿ ಪುನರಾರಂಭಗೊಳ್ಳಲಿದೆ. ಈ ಟೂರ್ನಿಗೆ ಕ್ವಾರಂಟೈನ್ ಅವಶ್ಯಕತೆಯಿಲ್ಲ, ಆದರೆ ಆಟಗಾರರು ಬಯೋಬಬಲ್​ನ ಇಲ್ಲಿರಬೇಕಾಗುತ್ತದೆ. ಬೆಂಗಳೂರಿಗೆ ಆಗಮಿಸುವ ಮುನ್ನ ಎಂದು ಆರ್​ಟಿಪಿಸಿಆರ್​ ನೆಗೆಟಿವ್​ ಒಪ್ಪಿಸಬೇಕೆಂದು ತಿಳಿಸಿದೆ.

ನಾಲ್ಕು ಕ್ವಾರ್ಟರ್​ ಫೈನಲ್​ ಜೂನ್ 4ರಿಂದ 8 ರವರೆಗೆ ನಡೆಯಲಿದ್ದು, ಮೊದಲ ಕ್ವಾರ್ಟರ್ ಫೈನಲ್​​ನಲ್ಲಿ ಬೆಂಗಾಲ್ ತಂಡ ಜಾರ್ಖಂಡ್​ ತಂಡವನ್ನು ಎದುರಿಸಲಿದೆ. 2ನೇ ಕ್ವಾರ್ಟರ್​ ಫೈನಲ್​ನಲ್ಲಿ 41 ಬಾರಿಯ ರಣಜಿ ಚಾಂಪಿಯನ್​ ಮುಂಬೈ ಮತ್ತು ಉತ್ತರಾಖಂಡ, 3ನೇ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶ ಹಾಗೂ ಪಂಜಾಬ್ ಮತ್ತು ಮಧ್ಯಪ್ರದೇಶ ತಂಡಗಳು 4ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿವೆ.

ಜೂನ್​ 12 ರಿಂದ 16ರವರೆಗೆ ಸೆಮಿಫೈನಲ್​ ಪಂದ್ಯಗಳು ಮತ್ತು ಜೂನ್ 20 ರಿಂದ 24 ರವರೆಗೆ ಫೈನಲ್ ಪಂದ್ಯ ನಡೆಯಲಿವೆ. ಬೆಂಗಳೂರು ಮತ್ತು ಆಲೂರಿನಲ್ಲಿ ಈ ಪಂದ್ಯಗಳು ನಡೆಯಲಿವೆ. ಬಿಸಿಸಿಐ ಕೋವಿಡ್​ 19 ಭೀತಿಯ ನಡುವೆಯೂ 2 ಹಂತಗಳಲ್ಲಿ ವಿವಿಧ ನಗರಗಳಲ್ಲಿ ಗುಂಪು ಹಂತದ ಪಂದ್ಯಗಳು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಆಯೋಜಿಸಿತ್ತು.

ಇದನ್ನೂ ಓದಿ:ಆಲ್​ರೌಂಡರ್ ಬೆನ್​ ಸ್ಟೋಕ್ಸ್​ಗೆ​ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.