ETV Bharat / sports

ರಾಜಸ್ಥಾನ ತಂಡ ಬಿಟ್ಟು ಇಂಗ್ಲೆಂಡ್​ಗೆ ಸ್ಟೋಕ್ಸ್​ ಪ್ರಯಾಣ.. ಸೋಮವಾರವೇ ಶಸ್ತ್ರಚಿಕಿತ್ಸೆ! - ಬೆನ್​ ಸ್ಟೋಕ್ಸ್​ ಗಾಯ

ಐಪಿಎಲ್​ನ ಮೊದಲ ಪಂದ್ಯದಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಆರ್​ಆರ್​ ಸ್ಟಾರ್​ ಆಲ್​ರೌಂಡರ್​ ಸ್ಟೋಕ್ಸ್​ ಇದೀಗ ಭಾರತ ಬಿಟ್ಟು ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದ್ದಾರೆ.

Ben stokes
Ben stokes
author img

By

Published : Apr 16, 2021, 5:03 PM IST

ಚೆನ್ನೈ: ರಾಜಸ್ಥಾನ ರಾಯಲ್ಸ್ ತಂಡದ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಇದೀಗ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸುವುದು ಕನ್ಫರ್ಮ್​ ಆಗಿದ್ದು, ನಾಳೆ ಬಯೋ ಬಬಲ್​ ತೊರೆದು ವಿಮಾನ ಎರಲಿದ್ದಾರೆ.

ಕಳೆದ ಸೋಮವಾರ ಪಂಜಾಬ್​ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್​ ಮಾಡುವಾಗ ಕೈಬೆರಳಿಗೆ ಗಾಯವಾಗಿ ಸ್ಟಾರ್​ ಆಲ್‌ರೌಂಡರ್​ ಬೆನ್​​ ಸ್ಟೋಕ್ಸ್​​ ಐಪಿಎಲ್​ನಿಂದ ಹೊರಬಿದ್ದಿದ್ದರು. ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಪ್ರಾಂಚೈಸಿ ಸ್ಟೋಕ್ಸ್​ ಮುಂದಿನ ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ತಂಡದೊಂದಿಗೆ ಉಳಿದುಕೊಂಡು ಮಹತ್ವದ ಮಾಹಿತಿ ಶೇರ್​ ಮಾಡಿಕೊಳ್ಳಲಿದ್ದಾರೆ ಎಂದಿತ್ತು.

ಇದನ್ನೂ ಓದಿ: ಅಶ್ವಿನ್​ಗೆ ಕೊನೆ ಓವರ್​ ನೀಡದಿರುವುದೇ ನಮ್ಮ ಸೋಲಿಗೆ ಕಾರಣವಾಯ್ತು: ಡೆಲ್ಲಿ ಕೋಚ್​​ ಪಾಂಟಿಂಗ್!

ಆದರೆ, ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ನಾಳೆ ಲಂಡನ್​ಗೆ ಪ್ರಯಾಣ ಬೆಳೆಸಲಿದ್ದು, ಸೋಮವಾರ ಕೈಬೆರಳಿನ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​​ ಕ್ರಿಕೆಟ್​ ಮಂಡಳಿ ಮಾಹಿತಿ ನೀಡಿದೆ. ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಮುಂದಿನ ಮೂರು ತಿಂಗಳ ಕಾಲ ಬೆನ್​​ ಸ್ಟೋಕ್ಸ್​​ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗುಳಿಯಲಿದ್ದು, ಟಿ -20 ವಿಶ್ವಕಪ್​ ವೇಳೆಗೆ ಅವರು ತಂಡಕ್ಕೆ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.