ಬ್ರಿಸ್ಬೇನ್: 5 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೊದಲ ಅ್ಯಶಸ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. 2ನೇ ದಿನದಾಟದಲ್ಲಿ ಫೀಲ್ಡಿಂಗ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
29ನೇ ಓವರ್ ವೇಳೆ ಬೌಂಡರಿಯತ್ತ ಹೋಗುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದ ವೇಳೆ ಬೆನ್ ಸ್ಟೋಕ್ಸ್ ಮಂಡಿ ನೋವಿಗೆ ತುತ್ತಾಗಿದ್ದಾರೆ. ಅವರು ಇಡೀ ದಿನ ಮೈದಾನದಲ್ಲಿ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದ ಕಾರಣ, ವೈದ್ಯಕೀಯ ಸಿಬ್ಬಂದಿ ತಂಡ ರಾತ್ರಿಯೇ ಅವರನ್ನು ಮೌಲ್ಯಮಾಪನ ಮಾಡಲಿದೆ ಎಂದು ಇಂಗ್ಲೆಂಡ್ ಬೌಲಿಂಗ್ ಕೋಚ್ ಜಾನ್ ಲೂಯಿಸ್ ಹೇಳಿದ್ದಾರೆಂದು ಇಎಸ್ಪಿಎನ್ ವರದಿ ಮಾಡಿದೆ.
ಪಂದ್ಯದ ಬಗ್ಗೆ ಮಾತನಾಡಿ, ಪಂದ್ಯದ ಕೊನೆಯ ಸೆಷನ್ವರೆಗೂ ಆಡುವುದಕ್ಕೆ ನಾವು ತಯಾರಿ ಮಾಡಿಕೊಂಡಿದ್ದೇವೆ. ಆಟಗಾರರೆಲ್ಲರೂ ನಾಳೆ ಮುಂದೆ ಬರುತ್ತಾರೆ ಎಂದು ನನಗೆ ತಿಳಿದಿದೆ. ಈ ಹಿಂದೆ ಅವರು ಇಂತಹ ಸಂದರ್ಭಗಳನ್ನು ಎದುರಿಸಿದ್ದಾರೆ. ತಮ್ಮನ್ನು ತಾವೂ ಹುರಿದುಂಬಿಸಿಕೊಂಡು ಪಂದ್ಯಕ್ಕೆ ಮರಳಲಿದ್ದಾರೆ ಎಂದು ಲೂಯಿಸ್ ಹೇಳಿದ್ದಾರೆ.
ಪಂದ್ಯಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಅತಿಥೇಯರ ಬೌಲಿಂಗ್ ದಾಳಿಗೆ ಸಿಲುಕಿ ಕೇಲವ 147 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ಇದಕ್ಕುತ್ತರವಾಗಿ 2ನೇ ದಿನ ಬ್ಯಾಟಿಂಗ್ ಮಾಡಿದ ಆಸೀಸ್ 7 ವಿಕೆಟ್ ಕಳೆದುಕೊಂಡು 343 ರನ್ಗಳಿಸಿದೆ. ಡೇವಿಡ್ ವಾರ್ನರ್ 94 ರನ್ಗಳಿಸಿದರೆ, ಟ್ರಾವಿಸ್ ಹೆಡ್ ಅಜೇಯ 112 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಆಸ್ಟ್ರೇಲಿಯಾ 196 ರನ್ಗಳ ಮೊದಲ ಇನ್ನಿಂಗ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ:ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್