ETV Bharat / sports

ಆ್ಯಶಸ್​ ಮೊದಲ ಪಂದ್ಯದಲ್ಲಿ ಬೌಲಿಂಗ್​ ಮಾಡುಲು ಫಿಟ್​ ಆಗಿದ್ದೇನೆ: ಬೆನ್​ ಸ್ಟೋಕ್ಸ್​ - ಆ್ಯಶಸ್ ಸರಣಿ

ಮೊಳಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಇಂಗ್ಲೆಂಡ್​ ತಂಡದ ನಾಯಕ ಬೆನ್​ ಸ್ಟೋಕ್ಸ್ ಗುಣಮುಖರಾಗಿದ್ದು, ಆ್ಯಶಸ್​ನ ಮೊದಲ ಪಂದ್ಯದಲ್ಲಿ ಬೌಲಿಂಗ್​ ಮಾಡುವುದಾಗಿ ಘೋಷಿಸಿದ್ದಾರೆ. ​

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​
author img

By

Published : Jun 16, 2023, 1:11 PM IST

ಲಂಡನ್​: ಇಂದಿನಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಸರಣಿ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಈ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಮೊಳ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸ್ಟೋಕ್ಸ್ ಇದೀಗ ಗುಣಮುಖರಾಗಿದ್ದು, ಮೊದಲ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಲು ಫಿಟ್ ಆಗಿರುವುದಾಗಿ ಘೋಷಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಬೌಲಿಂಗ್ ಮಾಡದೇ ಹಿಂದೆ ಸರೆದಿದ್ದ ಸ್ಟೋಕ್ಸ್​ ತರಬೇತಿ ಸಮಯದಲ್ಲೂ ಮೊಣಕಾಲಿಗೆ ಬ್ಯಾಂಡೇಜ್ ಧರಿಸಿ ಅಭ್ಯಾಸ ಮಾಡಿದ್ಗದರು. ಗುರುವಾರ ಇಂಗ್ಲೆಂಡ್‌ನ ತರಬೇತಿ ಅವಧಿಯಲ್ಲಿ ಸ್ಟೋಕ್ಸ್ ಬ್ಯಾಟಿಂಗ್ ಮಾಡುವ ಬದಲು, ಬೌಲಿಂಗ್ ಕೋಚ್ ಡೇವಿಡ್ ಸಾಕರ್ ಅವರ ಸಮ್ಮುಖದಲ್ಲಿ ನಾಲ್ಕು ಓವರ್‌ಗಳ ಬೌಲಿಂಗ್ ಅಭ್ಯಾಸ ನಡೆಸಿದ್ದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೋಕ್ಸ್, 'ಕಳೆದ ಮೂರು ದಿನಗಳಿಂದ ನನ್ನ ನಂಬಿಕೆಗೆ ಉತ್ತಮವಾಗಿವೆ. ನಾನು ನಿತ್ಯ ಬೌಲಿಂಗ್ ಮಾಡುತ್ತಿದ್ದೆ ಮತ್ತು ನನ್ನ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಾನು ಬೌಲಿಂಗ್ ಮಾಡಲು ಹೆಚ್ಚು ಫಿಟ್​ ಅಗಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ವಾರ ಸ್ಕಾಟ್ಲೆಂಡ್‌ನಲ್ಲಿ ಡೇವಿಡ್ ಸಾಕರ್ ನನ್ನ ಬಳಿ ಒಂದು ಮಾತು ಹೇಳಿದ್ದರು. ನೀವು ನಾಲ್ಕನೇ ಅಥವಾ ಐದನೇ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡುವುದು ಉತ್ತಮ ಎಂದು ಹೇಳಿದ್ದರು. ಇದೀಗ ನಾನು ಉತ್ತಮವಾಗಿ ಬೌಲಿಂಗ್​ ಮಾಡಬಲ್ಲೆ ಎಂದು ಭಾವಿಸಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಪ್ರತಿ ಬಾರಿ ಮೈದಾನಕ್ಕೆ ಹೋದಾಗ ನಾನು ಬೌಲ್ ಮಾಡಲು ಬಯಸುತ್ತಿದ್ದೆ, ಆದರೆ, ನನ್ನ ದೇಹವು ತಡೆಯುತ್ತಿತ್ತು. ಪ್ರಸ್ತುತ ನಾನು ಬೌಲಿಂಗ್ ಮಾಡಲು ಫಿಟ್​ ಆಗಿದ್ದೇನೆ ಎಂದು ಸ್ಟೋಕ್ಸ್​ ಹೇಳಿದ್ದಾರೆ.

ಇಡೀ ಸರಣಿಯಲ್ಲಿ ಬೌಲಿಂಗ್ ಮಾಡುವುದು ಕಷ್ಟ. ಹಾಗಾಗಿ ನಾನು ತರಾತುರಿಯಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ ಏಕೆಂದರೆ ಇನ್ನೆರಡು ವಾರಗಳಲ್ಲಿ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ಬೌಲಿಂಗ್‌ನಲ್ಲಿ ನನಗೆ ಯಾವುದೇ ತೊಂದರೆಯಾಗುವುದಿಲ್ಲ​​ ಭಾವಿಸಿದ್ದೇನೆ. ಈ ಸರಣಿಯಲ್ಲಿ ಎಲ್ಲಾ ಬೌಲರ್‌ಗಳು 5 ಟೆಸ್ಟ್‌ಗಳಲ್ಲಿ ಆಡುವುದು ಕಷ್ಟ. ಹಾಗಾಗಿ ಎಲ್ಲ ಪಂದ್ಯಗಳನ್ನು ಆಡುವಂತೆ ತಯಾರಿ ನಡೆಸಲು ಸಹ ಆಟಗಾರರಿಗೆ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ. ಆದರೆ, ಸರಣಿ ಮುಂದುವರೆದಂತೆ ತಂಡದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಇಂಗ್ಲೆಂಡ್​ ನಾಯಕ ಸ್ಟೋಕ್ಸ್​ ಹೇಳಿದ್ದಾರೆ.

ಸ್ಟೋಕ್ಸ್ ಕಳೆದ ಏಪ್ರಿಲ್ ತಿಂಗಳಿನಿಂದ ಯಾವುದೇ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಏಕೈಕ ಓವರ್ ಬೌಲಿಂಗ್​ ಮಾಡಿದ್ದು, ಹೊರತುಪಡಿಸಿದರೆ ಉಳಿದ ಪಂದ್ಯಗಳಲ್ಲಿ ಬೌಲಿಂಗ್​ ಮಾಡಿರಲಿಲ್ಲ.

ಇದನ್ನೂ ಓದಿ: ಬಿಸಿಸಿಐ ಸ್ಥಾನವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.