ಲಂಡನ್: ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ನಿವೃತ್ತಿಯಿಂದ ಹೊರ ಬಂದಿರುವ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಏಕದಿನದಲ್ಲಿ 182 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ರನ್ ದಾಖಲಿಸಿದರು. ಜೊತೆಗೆ ಈ ಮಾದರಿಯಲ್ಲಿ 3 ಸಾವಿರ ರನ್ ಗಳಿಸಿದರು.
-
History-making 📝
— England Cricket (@englandcricket) September 13, 2023 " class="align-text-top noRightClick twitterSection" data="
Record-breaking 💪
Unreal @benstokes38 🙌 pic.twitter.com/WlEGKnENhW
">History-making 📝
— England Cricket (@englandcricket) September 13, 2023
Record-breaking 💪
Unreal @benstokes38 🙌 pic.twitter.com/WlEGKnENhWHistory-making 📝
— England Cricket (@englandcricket) September 13, 2023
Record-breaking 💪
Unreal @benstokes38 🙌 pic.twitter.com/WlEGKnENhW
ಟೆಸ್ಟ್ ತಂಡದ ನಾಯಕನಾಗಿರುವ ಸ್ಟೋಕ್ಸ್ ಏಕದಿನ ತಂಡಕ್ಕೆ ನಿವೃತ್ತಿ ಘೋಷಿಸಿದ್ದರು. ವಿಶ್ವಕಪ್ ಮುಂದಿರುವ ಕಾರಣ ತಂಡ ನಿವೃತ್ತಿ ಹಿಂಪಡೆಯಲು ಕೋರಿತ್ತು. ಅದರಂತೆ ಮತ್ತೆ ಏಕದಿನ ತಂಡಕ್ಕೆ ವಾಪಸ್ ಆಗಿರುವ ಎಡಗೈ ಬ್ಯಾಟರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ತಾವು ವಿಶ್ವಕಪ್ಗೆ ರೆಡಿ ಎಂದು ಸಂದೇಶ ರವಾನಿಸಿದ್ದಾರೆ.
-
How good was that?
— England Cricket (@englandcricket) September 13, 2023 " class="align-text-top noRightClick twitterSection" data="
The highest individual ODI score for England.
Enjoy every second of him.
We are so lucky to be witnessing this 🙏 pic.twitter.com/ZfeFdwRmc0
">How good was that?
— England Cricket (@englandcricket) September 13, 2023
The highest individual ODI score for England.
Enjoy every second of him.
We are so lucky to be witnessing this 🙏 pic.twitter.com/ZfeFdwRmc0How good was that?
— England Cricket (@englandcricket) September 13, 2023
The highest individual ODI score for England.
Enjoy every second of him.
We are so lucky to be witnessing this 🙏 pic.twitter.com/ZfeFdwRmc0
ಇಂಗ್ಲೆಂಡ್ ಪರ ಅತ್ಯಧಿಕ: ಕಿವೀಸ್ ವಿರುದ್ಧದ 3ನೇ ಏಕದಿನದಲ್ಲಿ 15 ಬೌಂಡರಿ 9 ಸಿಕ್ಸರ್ಗಳ ಸಮೇತ 182 ರನ್ ಗಳಿಸಿದರು ಸ್ಟೋಕ್ಸ್ ಇಂಗ್ಲೆಂಡ್ ಪರವಾಗಿ ಗರಿಷ್ಠ ರನ್ ಗಳಿಸಿದ ಮೊದಲಿಗ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಜಾಸನ್ ರಾಯ್ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 180 ರನ್ ಗಳಿಸಿದ್ದರು. ಇದು ಈವರೆಗಿನ ಅತ್ಯಧಿಕ ರನ್ ಆಗಿತ್ತು. ಇದರ ಜೊತೆಗೆ 2016 ರಲ್ಲಿ ಪಾಕಿಸ್ತಾನ ವಿರುದ್ಧ ಅಲೆಕ್ಸ್ ಹೇಲ್ಸ್ 171, 1993 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಬಿನ್ ಸ್ಮಿತ್ 167, 2022 ರಲ್ಲಿ ನಾಯಕ ಜೋಸ್ ಬಟ್ಲರ್ ನೆದರ್ಲ್ಯಾಂಡ್ಸ್ ವಿರುದ್ಧ 162 ರನ್ ಗಳಿಸಿದ್ದರು.
-
They're still mates! 😅 ❤️
— England Cricket (@englandcricket) September 13, 2023 " class="align-text-top noRightClick twitterSection" data="
Stokesy's 182 edges past JRoy's 180 as the highest individual ODI score for England 🏏#ENGvNZ | #EnglandCricket pic.twitter.com/TmV55B9XFA
">They're still mates! 😅 ❤️
— England Cricket (@englandcricket) September 13, 2023
Stokesy's 182 edges past JRoy's 180 as the highest individual ODI score for England 🏏#ENGvNZ | #EnglandCricket pic.twitter.com/TmV55B9XFAThey're still mates! 😅 ❤️
— England Cricket (@englandcricket) September 13, 2023
Stokesy's 182 edges past JRoy's 180 as the highest individual ODI score for England 🏏#ENGvNZ | #EnglandCricket pic.twitter.com/TmV55B9XFA
ಜೊತೆಗೆ ವೈಯಕ್ತಿಕವಗಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ದಾಖಲಿಸಿದರು. 108 ಪಂದ್ಯಗಳಲ್ಲಿ 40.50 ರ ಸರಾಸರಿಯಲ್ಲಿ 96.36 ಸ್ಟ್ರೈಕ್ ರೇಟ್‌ನೊಂದಿಗೆ 3,159 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 22 ಅರ್ಧ ಶತಕಗಳಿವೆ. 3 ಸಾವಿರ ರನ್ ಗಡಿ ದಾಟಿದ ಇಂಗ್ಲೆಂಡ್ನ 19 ನೇ ಆಟಗಾರ ಎನಿಸಿಕೊಂಡರು.
ನಿವೃತ್ತಿ ಘೋಷಿಸಿ ಬಳಿಕ ಶತಕ: ಬೆನ್ ಸ್ಟೋಕ್ಸ್ ಏಕದಿನಕ್ಕೆ ನಿವೃತ್ತಿ ಘೋಷಿಸಿ, ಬಳಿಕ ಹಿಂಪಡೆದು ಶತಕ ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದರು. ಭಾರತದಲ್ಲಿ ಅಕ್ಟೋಬರ್ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಕೋರಿಕೆ ಮೇರೆಗೆ ಸ್ಟೋಕ್ಸ್ ತಮ್ಮ ನಿವೃತ್ತಿ ವಾಪಸ್ ಪಡೆದಿದ್ದಾರೆ.
-
1⃣8⃣2⃣ reasons to catch up on that simply incredible innings 😱
— England Cricket (@englandcricket) September 13, 2023 " class="align-text-top noRightClick twitterSection" data="
We put 3⃣6⃣8⃣ on the board 🏏💥
See the best of the action here 👇
">1⃣8⃣2⃣ reasons to catch up on that simply incredible innings 😱
— England Cricket (@englandcricket) September 13, 2023
We put 3⃣6⃣8⃣ on the board 🏏💥
See the best of the action here 👇1⃣8⃣2⃣ reasons to catch up on that simply incredible innings 😱
— England Cricket (@englandcricket) September 13, 2023
We put 3⃣6⃣8⃣ on the board 🏏💥
See the best of the action here 👇
ಪಂದ್ಯದಲ್ಲಿ ಸ್ಟೋಕ್ಸ್ 182, ಡೇವಿಡ್ ಮಲಾನ್ 99, ಜೋಸ್ ಬಟ್ಲರ್ 38 ರನ್ ನೆರವಿನಿಂದ ಇಂಗ್ಲೆಂಡ್ 368 ರನ್ ಗಳಿಸಿತು. ನ್ಯೂಜಿಲ್ಯಾಂಡ್ ಪರವಾಗಿ ಟ್ರೆಂಟ್ ಬೌಲ್ಟ್ 5, ಬೆನ್ ಲಿಸ್ಟರ್ 3 ವಿಕೆಟ್ ಕಿತ್ತರು. ಗುರಿ ಬೆನ್ನತ್ತಿದ ಕಿವೀಸ್ ಪರ ಗ್ಲೆನ್ ಫಿಲಿಪ್ಸ್ 72 ರನ್ ಗಳಿಸಿದ್ದೇ ತಂಡದ ಗರಿಷ್ಠವಾಗಿತ್ತು. ಬ್ಯಾಟರ್ಗಳ ವೈಫಲ್ಯದಿಂದ 187 ರನ್ಗೆ ಆಲೌಟ್ ಆಯಿತು. ಸರಣಿಯಲ್ಲಿ ಇಂಗ್ಲೆಂಡ್ 2-1 ರಲ್ಲಿ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ವಿಶ್ವಕಪ್ಗೆ ಅಫ್ಘಾನಿಸ್ತಾನ ತಂಡ ಪ್ರಕಟ.. ವಿರಾಟ್ಗೆ ಎದುರಾಗಲಿದ್ದಾರೆ ನವೀನ್ - ಉಲ್ - ಹಕ್