ETV Bharat / sports

ಕೌಂಟಿ ಕ್ರಿಕೆಟ್​​ನಲ್ಲಿ ಬೆನ್​ ಸ್ಟೋಕ್ಸ್​​ ಅಬ್ಬರ.. 88 ಎಸೆತಗಳಲ್ಲಿ 161ರನ್​,17 ಸಿಕ್ಸರ್​​​ ಬಾರಿಸಿದ ಟೆಸ್ಟ್​​ ಕ್ಯಾಪ್ಟನ್​!

ಇಂಗ್ಲೆಂಡ್​ ಟೆಸ್ಟ್​ ತಂಡದ ನೂತನ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​ ಕೌಂಟಿ ಕ್ರಿಕೆಟ್​ನಲ್ಲಿ ಅಬ್ಬರಿಸಿದ್ದು, ಒಂದೇ ಓವರ್​​ನಲ್ಲಿ ಬರೋಬ್ಬರಿ 34ರನ್​ಗಳಿಸಿದ್ದಾರೆ..

Ben Stokes broke the record
Ben Stokes broke the record
author img

By

Published : May 7, 2022, 5:21 PM IST

ಲಂಡನ್​ : ಜೋ ರೂಟ್​ ಟೆಸ್ಟ್​ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಆ ಜವಾಬ್ದಾರಿ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಹೆಗಲಿಗೆ ಬಿದ್ದಿದೆ. ಇದರ ಬೆನ್ನಲ್ಲೇ ಕೌಂಟಿ ಕ್ರಿಕೆಟ್​ನಲ್ಲಿ ಅಬ್ಬರಿಸಿರುವ ಈ ಪ್ಲೇಯರ್ ದಾಖಲೆಯ 17 ಸಿಕ್ಸರ್​ ಸಮೇತವಾಗಿ ಕೇವಲ 88 ಎಸೆತಗಳಲ್ಲಿ 161 ರನ್​ಗಳಿಕೆ ಮಾಡಿದ್ದಾರೆ. ವಿಶೇಷವೆಂದರೆ ಒಂದೇ ಓವರ್​​ನಲ್ಲಿ 34 ರನ್​​ಗಳಿಸಿದ್ದಾರೆ.

ವೋರ್ಸೆಸ್ಟರ್‌ಶೈರ್‌ ವಿರುದ್ಧ ನಡೆಯುತ್ತಿರುವ ಕೌಂಟಿ ಕ್ರಿಕೆಟ್​​ ಪಂದ್ಯದಲ್ಲಿ ಬೆನ್​​ ಸ್ಟೋಕ್ಸ್‌ ಅಬ್ಬರಿಸಿದ್ದಾರೆ. 8 ಬೌಂಡರಿ, 17 ಸಿಕ್ಸರ್​ ಸೇರಿದಂತೆ 161 ರನ್​​ಗಳಿಸಿದ್ದಾರೆ. ಇದರ ಜೊತೆಗೆ ಕೌಂಟಿ ಪಂದ್ಯವೊಂದರ ಇನ್ನಿಂಗ್ಸ್​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ.

ಒಂದೇ ಓವರ್​ನಲ್ಲಿ ಕ್ರಮವಾಗಿ 6,6,6,6,6,4 ರನ್ ಬಾರಿಸುವ ಮೂಲಕ ಅತಿವೇಗದ ಶತಕ(64 ಎಸೆತ) ಸಿಡಿಸಿ ದಾಖಲೆ ಬರೆದರು. ಈ ಮೂಲಕ 6 ವಿಕೆಟ್​ನಷ್ಟಕ್ಕೆ 580 ರನ್​ಗಳಿಸಿ, ಡಿಕ್ಲೇರ್ ಮಾಡಿಕೊಂಡಿದೆ.

2021ರ ಐಪಿಎಲ್​​ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿ ಗಾಯದ ಸಮಸ್ಯೆ ಕಾರಣ ಅರ್ಧಕ್ಕೆ ಹೊರ ನಡೆದಿದ್ದ ಬೆನ್‌ ಸ್ಟೋಕ್ಸ್‌, ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ 2022 ಟೂರ್ನಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. ಇದೀಗ ಕೌಂಟಿ ಕ್ರಿಕೆಟ್​ನಲ್ಲಿ ಮಿಂಚು ಹರಿಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​​ನಲ್ಲಿ ಮತ್ತೊಮ್ಮೆ ಮಿಂಚು ಹರಿಸಲು ಸಜ್ಜಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.