ನವದೆಹಲಿ: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟೀಂ ಇಂಡಿಯಾ ಜೊತೆ ಬಾಂಗ್ಲಾದೇಶ ಪ್ರವಾಸದಲ್ಲಿರುವ ಅವರು ಸಹ ಆಟಗಾರರೊಂದಿಗೆ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ ಆಗಿ ವೃತ್ತಿ ಜೀವನ ಆರಂಭಿಸಿದ ಶಿಖರ್ ಧವನ್ ತಂಡದಲ್ಲಿ ಆರಂಭಿಕರಾಗಿ ಗುರುತಿಸಿಕೊಂಡರು. ಆರಂಭಿಕರಾಗಿ ಭಾರತಕ್ಕೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಸ್ವಲ್ಪ ತಡವಾಗಿಯೇ ಪಾದಾರ್ಪಣೆ ಮಾಡಿದರೂ ರೋಹಿತ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿ ತಮ್ಮದೇ ಛಾಪು ಮೂಡಿಸಿದ್ದಾರೆ.
-
2⃣6⃣7⃣ international matches 👍
— BCCI (@BCCI) December 5, 2022 " class="align-text-top noRightClick twitterSection" data="
1⃣0⃣8⃣5⃣6⃣ international runs 👌
2013 ICC Champions Trophy-winner 🏆
Here's wishing @SDhawan25 a very happy birthday! 🎂 👏#TeamIndia pic.twitter.com/wOBToFjzj7
">2⃣6⃣7⃣ international matches 👍
— BCCI (@BCCI) December 5, 2022
1⃣0⃣8⃣5⃣6⃣ international runs 👌
2013 ICC Champions Trophy-winner 🏆
Here's wishing @SDhawan25 a very happy birthday! 🎂 👏#TeamIndia pic.twitter.com/wOBToFjzj72⃣6⃣7⃣ international matches 👍
— BCCI (@BCCI) December 5, 2022
1⃣0⃣8⃣5⃣6⃣ international runs 👌
2013 ICC Champions Trophy-winner 🏆
Here's wishing @SDhawan25 a very happy birthday! 🎂 👏#TeamIndia pic.twitter.com/wOBToFjzj7
ಟೀಮ್ ಇಂಡಿಯಾದ ವೇಗದ ಬ್ಯಾಟರ್ ಮತ್ತು ಸ್ಟಾರ್ ಓಪನರ್ ಶಿಖರ್ ಧವನ್ 5 ಡಿಸೆಂಬರ್ 1985 ರಂದು ದೆಹಲಿಯಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಮೊದಲ ಏಕದಿನ ಪಂದ್ಯದಲ್ಲಿ ಡಕ್ ಔಟ್ ಆಗಿದ್ದರು. ಟೆಸ್ಟ್ನಲ್ಲಿ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 2023ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ನ ಸಾರಥ್ಯವನ್ನು ಶಿಖರ್ಗೆ ನೀಡಲಾಗಿತ್ತು. 2013ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು 2019 ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ ಐಪಿಎಲ್ನಲ್ಲಿ ಆಡಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವೀಟ್ ಮಾಡಿ ಗಬ್ಬರ್ ಸಿಂಗ್ಗೆ ಶುಭಾಶಯ ಕೋರಿದೆ.
ಇದನ್ನೂ ಓದಿ: ಎಡಗೈ ಆಟಗಾರನಂತೆ ಬ್ಯಾಟ್ ಬೀಸಿದ ರೂಟ್ : ಪಾಕ್ ಗೆಲುವಿಗೆ 263ರನ್ ಬಾಕಿ