ಹೈದರಾಬಾದ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಾದ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಬಿಸಿಸಿಐ ಎಷ್ಟು ದೊಡ್ಡ ಆರ್ಥಿಕ ಸಂಸ್ಥೆ ಎಂದು ಕೇಳಿದರೆ ಒಮ್ಮೆಗೆ ಅಚ್ಚರಿಗೆ ಒಳಗಾಗುವುದಂತೂ ಖಂಡಿತಾ. ಏಕೆಂದರೆ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಸ್ಟ್ರೇಲಿಯಾ. ಈ ಕ್ರಿಕೆಟ್ ಆಸ್ಟ್ರೇಲಿಯಾಕ್ಕಿಂತ ಬಿಸಿಸಿಐನ ಆದಾಯ ಶೇ 28 ಪ್ರತಿಶತ ಹೆಚ್ಚು ಎಂದು ವರದಿಯಾಗಿದೆ. ಕಳೆದ ತಿಂಗಳು ಬಿಸಿಸಿಐ ಒಟ್ಟು ಆಸ್ತಿ 2.25 ಶತಕೋಟಿ ಯುಎಸ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 18,700 ಕೋಟಿ ರೂ ಆಗುತ್ತದೆ.
ಭಾರತದಲ್ಲಿ ಕ್ರಿಕೆಟ್ ಅನ್ನು ಒಂದು ಧರ್ಮ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಎಂಬಷ್ಟು ಕ್ರೇಜ್ ಜನರಲ್ಲಿದೆ. ಇದಕ್ಕೆ ಈ ವರ್ಷ ನಡೆದ ವಿಶ್ವಕಪ್, ಈ ಬಾರಿ ಅಭಿಮಾನಿಗಳು ಮೈದಾನಕ್ಕೆ ಹೋಗಿ ವೀಕ್ಷಿಸಿದ ಅಂಕಿ ಅಂಶವೇ ಇದಕ್ಕೆ ಸಾಕ್ಷಿ. ದೇಶದ ಕ್ರೀಡಾ ಪ್ರೇಮಿಗಳಲ್ಲಿ ಶೇಕಡಾ 90ರಷ್ಟು ಜನ ಕ್ರಿಕೆಟ್ ಪ್ರೇಮಿಗಳಾಗಿದ್ದಾರೆ. ಹೀಗಾಗಿ ಇಲ್ಲಿ ನಡೆಯುವ ಎಲ್ಲ ರೀತಿಯ ಕ್ರಿಕೆಟ್ ಆಟಗಳಿಗೆ ಹೆಚ್ಚಿನ ಜನಪ್ರಿಯತೆಯೂ ದೊರೆಯುತ್ತದೆ.
ವರಿದಿಯೊಂದರ ಪ್ರಕಾರ ಕ್ರಿಕೆಟ್ ಆಸ್ಟ್ರೇಲಿಯಾ ಎರಡನೇ ಶ್ರೀಮಂತ ರಾಷ್ಟ್ರವಾಗಿದೆ. ಆಸ್ಟ್ರೇಲಿಯಾದ ಆದಾಯ ಅಂದಾಜು ರೂ 660 ಕೋಟಿ (US $ 79 ಮಿಲಿಯನ್) ಎಂದು ಹೇಳಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ನಡುವಿನ ಆದಾಯದಲ್ಲಿ ಅಜ ಗಜಾಂತರ ಇದೆ . ಟಾಪ್ 10 ಮಂಡಳಿಗಳ ಒಟ್ಟು ನಿವ್ವಳ ಮೌಲ್ಯದ ಶೇ. 85.88 ರಷ್ಟು ಬಿಸಿಸಿಐಯದ್ದೇ ಇದೆ. ಹೀಗಾಗಿ ಪ್ರಸ್ತುತ ಕ್ರಿಕೆಟ್ ಸಂಸ್ಥೆಗಳಲ್ಲಿ ಬಿಸಿಸಿಐ ಬಾಸ್ ಆಗಿ ಮೆರೆಯುತ್ತಿದೆ.
ಭಾರತದ ವಿರುದ್ಧ ಆಡುವುದೇ ಲಾಭಕ್ಕಾಗಿ: ಇಷ್ಟು ಶ್ರೀಮಂತ ಸಂಸ್ಥೆಯ ವಿರುದ್ಧ ಸರಣಿಗಳನ್ನು ಆಡುವುದರಿಂದ ಎದುರಾಳಿ ತಂಡಕ್ಕೂ ಲಾಭಗಳಾಗುತ್ತದೆ. ಡಿಸೆಂಬರ್ 10 ರಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಒಂದು ತಿಂಗಳ ಕಾಲ ಟೀಮ್ ಇಂಡಿಯಾ ಅಲ್ಲಿ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸದಿಂದ ಹರಿಣಗಳ ರಾಷ್ಟ್ರ US $ 68.7 ಮಿಲಿಯನ್ ಗಳಿಸುವ ನಿರೀಕ್ಷೆಯಿದೆ. ಇದು ಪ್ರತಿ ಪಂದ್ಯಕ್ಕೆ US$8.6 ಮಿಲಿಯನ್ ಅಥವಾ ಒಂದು ದಿನದಲ್ಲಿ US$2.29 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಸದ್ಯ ವರದಿ ಪ್ರಕಾರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಶ್ರೀಮಂತಿಕೆಯ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಲೀಗ್ ಮತ್ತು ದೇಶಿ ಕ್ರಿಕೆಟ್ಗೆ ಮಹತ್ವ: ಬಿಸಿಸಿಐನ ಆದಾಯದ ಬಹುಪಾಲು ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೇ ಬರುತ್ತಿದೆ. ಸತತ 16 ವರ್ಷಗಳಿಂದ ಐಪಿಎಲ್ ಅನ್ನು ಬಿಸಿಸಿಐ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಪ್ರತೀ ವರ್ಷ ಲೀಗ್ ಕ್ರಿಕೆಟ್ಗೆ ಜನಪ್ರಿಯತೆ ಹೆಚ್ಚುತ್ತಿದೆ. ಎಲ್ಲಾ ದೇಶಗಳಲ್ಲೂ ಈಗ ಲೀಗ್ ಕ್ರಿಕೆಟ್ ನಡೆಸಲಾಗುತ್ತದೆ. ಆದರೆ ಐಪಿಎಲ್ನಷ್ಟು ಖ್ಯಾತಿ ಮತ್ತು ಹಣವನ್ನು ಯಾವುದೇ ಲೀಗ್ ಮಾಡಿಲ್ಲ.
ಬಿಸಿಸಿಐ ದೇಶೀಯ ಕ್ರಿಕೆಟ್ ಋತುವನ್ನು ಉತ್ತಮವಾಗಿ ಆಯೋಜಿಸಿಕೊಂಡು ಬರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಉತ್ತಮ ಆಟಗಾರರು ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಐಸಿಸಿ ನೀಡುವ ಶ್ರೇಯಾಂಕದಲ್ಲಿ ಭಾರತ ತಂಡ ಮೂರೂ ಮಾದರಿ ಕ್ರಿಕೆಟ್ನಲ್ಲಿ ನಂ.1 ಆಗಿದೆ. ಅಲ್ಲದೇ ಏಕದಿನ, ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕ್ರಮವಾಗಿ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ನಂ. 1 ಆದರೆ, ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ರವಿ ಬಿಷ್ಣೋಯ್ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್ ಬೌಲಿಂಗ್ನಲ್ಲಿ ರವಿ ಚಂದ್ರನ್ ಅಶ್ವಿನ್, ಆಲ್ರೌಂಡರ್ನಲ್ಲಿ ರವೀಂದ್ರ ಜಡೇಜಾ ಅಗ್ರ ಶ್ರೇಯಾಂಕಿತರಾಗಿದ್ದಾರೆ. ಹಣದ ಜೊತೆಗೆ ಬಿಸಿಸಿಐ ಉತ್ತಮ ಕ್ರಿಕೆಟ್ ಅನ್ನು ಆಡುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಐಪಿಎಲ್‌ನಿಂದ ನಿವೃತ್ತಿ ನಂತರ ಕ್ಯಾಪ್ಟನ್ ಕೂಲ್ ಈ ಲೀಗ್‌ನಲ್ಲಿ ಆಡ್ತಾರಾ?