ETV Bharat / sports

ಭಾರತದಲ್ಲಿ ಕೋವಿಡ್​ ಹೆಚ್ಚಾದ್ರೆ ವಿಶ್ವಕಪ್​ಗಾಗಿ ಪ್ಲಾನ್ 'ಬಿ'.. ಈ ದೇಶದಲ್ಲಿ ಟೂರ್ನಿ!?

ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಭಾರತದಲ್ಲಿ ನಡೆಯಬೇಕಾದ ಟಿ-20 ವಿಶ್ವಕಪ್​ ಬೇರೆ ದೇಶದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ.

T20 World Cup
T20 World Cup
author img

By

Published : Apr 30, 2021, 6:53 PM IST

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಇದರ ಮಧ್ಯೆ ಐಸಿಸಿ ಟಿ-20 ವಿಶ್ವಕಪ್​ ಟೂರ್ನಿ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಆಯೋಜನೆಗೊಂಡಿದೆ. ಒಂದೇ ವೇಳೆ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಬೇರೆ ಕಡೆ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

ದೇಶದಲ್ಲಿ ಕೊರೊನಾ ಹೆಚ್ಚಳ ಮುಂದುವರಿದರೆ ಬಿಸಿಸಿಐ ಪ್ಲಾನ್​ ಬಿ ಸಿದ್ಧಪಡಿಸಿದ್ದು, ದುಬೈನಲ್ಲಿ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆ ಮಾಡಲು ಪ್ಲಾನ್​ ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಕೋವಿಡ್​ ವೈರಸ್ ಹೆಚ್ಚಾಗಿದ್ದ ಕಾರಣ ಇಂಡಿಯನ್​ ಪ್ರೀಮಿಯರ್ ಲೀಗ್​ ದುಬೈನಲ್ಲಿ ನಡೆಸಿ, ಅದರಲ್ಲಿ ಯಶಸ್ವಿಯಾಗಿದೆ. ಇದೀಗ ವಿಶ್ವಕಪ್ ಕೂಡ ಅಲ್ಲೇ ನಡೆಸಲು ಯೋಜನೆ ಹಾಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕೋವಿಡ್ ಹೋರಾಟಕ್ಕೆ ಐಪಿಎಲ್​ ಸಂಬಳದ ಶೇ.10ರಷ್ಟು ದೇಣಿಗೆ: ಉನಾದ್ಕತ್ ಘೋಷಣೆ

ಐಸಿಸಿ ಕೂಡ ಇದೇ ವಿಚಾರವಾಗಿ ಯುಎಇನಲ್ಲಿರುವ ಕ್ರೀಡಾಂಗಣ ವಿಶ್ವಕಪ್​ ಆಯೋಜನೆಗೋಸ್ಕರ ಸಿದ್ಧ ಇಡುವಂತೆ ಅಲ್ಲಿನ ಕ್ರಿಕೆಟ್ ಮಂಡಳಿ ಬಳಿ ಮನವಿ ಮಾಡಿದೆ ಎನ್ನಲಾಗಿದೆ. ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್ ಲೀಗ್ ನಡೆಯಲು ಆರು ತಿಂಗಳ ಕಾಲ ಬಾಕಿ ಉಳಿದಿದೆ. ಅಷ್ಟರೊಳಗೆ ಎಲ್ಲವೂ ಸರಿಯಾಗಬಹುದು ಎಂಬ ನಿರೀಕ್ಷೆ ಇದೆ. ಒಂದು ವೇಳೆ ಸಾಂಕ್ರಾಮಿಕ ರೋಗ ಇದೇ ರೀತಿ ಮುಂದುವರಿದರೆ ಯುಎಇನಲ್ಲಿ ವಿಶ್ವಕಪ್​ ಆಯೋಜನೆ ಮಾಡುವುದು ಬಹುತೇಕ ಖಚಿತವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.