ಚೆನ್ನೈ (ತಮಿಳುನಾಡು): ಭಾರತ ತಂಡ ತನ್ನ ಆಕಾಶ ನೀಲಿ ಬಣ್ಣದ ಜರ್ಸಿಯಲ್ಲಿ ಆರಂಭದಿಂದಲೂ ಆಡುತ್ತಾ ಬಂದಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಜರ್ಸಿ ಬದಲಾವಣೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಅಕ್ಟೋಬರ್ 14 ರಂದು ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯಕ್ಕೆ ಭಾರತ ತಂಡ ಬೇರೆ ಜರ್ಸಿಯಲ್ಲಿ ಆಡಲಿದೆ ಎಂದು ಹೇಳಲಾಗುತ್ತಿದೆ.
ವಿಶ್ವಕಪ್ನ ಅಭ್ಯಾಸಕ್ಕೆ ಈ ಬಾರಿ ಹೊಸ ಕಿಟ್ ಕೊಡಲಾಗಿದ್ದು, ಅದರ ಬಣ್ಣ ಬೇರೆ ಇರುವುದು ಈ ಚರ್ಚೆಗೆ ಮೂಲ ಕಾರಣ ಎಂದು ಹೇಳಬಹುದು. ವಿಶ್ವಕಪ್ನ ನೆಟ್ ಪ್ರಾಕ್ಟೀಸ್ಗೆ ಕೇಸರಿ ಬಣ್ಣದ ಕಿಟ್ನ್ನು ಅಡಿಡಾಸ್ ನೀಡಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಇದೇ ಬಣ್ಣದ ಜರ್ಸಿಯಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳಲಿದೆ ಎಂಬುದು ಕೆಲ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ.
-
#TeamIndia Alternate Jersey for the #OneDay4Children match against England on 30th June 2019. #OrangeJersey #IndiaJersey pic.twitter.com/e6Mq5cU5Ja
— Akshay Anand (@TheAkshayAnand) June 20, 2019 " class="align-text-top noRightClick twitterSection" data="
">#TeamIndia Alternate Jersey for the #OneDay4Children match against England on 30th June 2019. #OrangeJersey #IndiaJersey pic.twitter.com/e6Mq5cU5Ja
— Akshay Anand (@TheAkshayAnand) June 20, 2019#TeamIndia Alternate Jersey for the #OneDay4Children match against England on 30th June 2019. #OrangeJersey #IndiaJersey pic.twitter.com/e6Mq5cU5Ja
— Akshay Anand (@TheAkshayAnand) June 20, 2019
ಆದರೆ ಈ ಊಹಾಪೋಹಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೌರವ ಖಜಾಂಚಿ ಆಶಿಶ್ ಶೆಲಾರ್ ತೆರೆ ಎಳೆದಿದ್ದಾರೆ. ಭಾರತವು ತಂಡ ಪರ್ಯಾಯ ಪಂದ್ಯದ ಕಿಟ್ ಅನ್ನು ಧರಿಸುವುದಿಲ್ಲ ಎಂದು ತಿಳಿಸಿದ್ದಾರೆ. "ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಯಾರೊಬ್ಬರ ಕಲ್ಪನೆ ಆಗಿದೆ. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೆನ್ ಇನ್ ಬ್ಲೂ ಭಾರತದ ಬಣ್ಣಗಳನ್ನು ಆಡುತ್ತಾರೆ" ಅವರು ತಿಳಿಸಿದ್ದಾರೆ.
ಭಾರತ ಬೇರೆ ಜರ್ಸಿಯಲ್ಲಿ ಈ ಹಿಂದೆ ಆಡಿತ್ತೇ?: ಟೀಮ್ ಇಂಡಿಯಾ ಈ ಹಿಂದೆ ಒಮ್ಮೆ ತನ್ನ ಜರ್ಸಿಯನ್ನು ಬದಲಾಯಿಸಿತ್ತು. ಆದರೆ ಅದರ ಹಿಂದೆ ಬಲವಾದ ಕಾರಣ ಇದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ಸಮಯದಲ್ಲಿ ಭಾರತವು ಪರ್ಯಾಯ ಕಿಟ್ ಅನ್ನು ಧರಿಸಿತ್ತು. ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ಎರಡೂ ನೀಲಿ ಬಣ್ಣಗಳನ್ನು ಧರಿಸಿದ್ದರಿಂದ, ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿತ್ತಳೆ ಬಣ್ಣದ ತೋಳುಗಳೊಂದಿಗೆ ನೀಲಿ ಬಣ್ಣದ ಜರ್ಸಿಯನ್ನು ತೊಟ್ಟು ಆಡಿತ್ತು.
ವಿಶ್ವಕಪ್ನ ಭಾರತದ ಪಂದ್ಯಗಳು:
ಭಾರತ vs ಆಸ್ಟ್ರೇಲಿಯಾ ಅ.8 ಚೆನ್ನೈ
ಭಾರತ vs ಅಫ್ಘಾನಿಸ್ತಾನ ಅ.11 ದೆಹಲಿ
ಭಾರತ vs ಪಾಕಿಸ್ತಾನ ಅ.14 ಅಹಮದಾಬಾದ್
ಭಾರತ vs ಬಾಂಗ್ಲಾದೇಶ ಅ.19 ಪುಣೆ
ಭಾರತ vs ನ್ಯೂಜಿಲೆಂಡ್ ಅ.22 ಧರ್ಮಶಾಲ
ಭಾರತ vs ಇಂಗ್ಲೆಂಡ್ ಅ. 29 ಲಕ್ನೋ
ಭಾರತ vs ಶ್ರೀಲಂಕಾ ನ.2 ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ ನ.5 ಕೋಲ್ಕತ್ತಾ
ಭಾರತ vs ನೆದರ್ಲ್ಯಾಂಡ್ ನ 12 ಬೆಂಗಳೂರು (ಎಎನ್ಐ)
ಇದನ್ನೂ ಓದಿ: Cricket World Cup 2023: ಅನಿಲ್ ಕುಂಬ್ಳೆ ದಾಖಲೆ ಮುರಿದ ಕಿಂಗ್ ಕೊಹ್ಲಿ.. ಸಚಿನ್ ದಾಖಲೆ ಮೇಲೆ ಕಣ್ಣು