ETV Bharat / sports

ದೇಶಿ ಕ್ರಿಕೆಟ್: ದುಲೀಪ್, ​ದೇವಧರ್, ಸೈಯದ್ ಮುಷ್ತಾಕ್ ಅಲಿ, ರಣಜಿ ಟ್ರೋಫಿ ವೇಳಾ ಪಟ್ಟಿ ಇಂತಿದೆ.. - ETV Bharath Karnataka

ಅಂತಾರಾಷ್ಟ್ರೀಯ ಕ್ರಿಕೆಟ್​ನಷ್ಟೇ ದೇಶೀಯ ಕ್ರಿಕೆಟ್​ ಸಹ ಪ್ರಾಮುಖ್ಯತೆ ಪಡೆದುಕೊಂಡಿದೆ. 2023 -24ರ ದೇಶೀಯ ಕ್ರಿಕೆಟ್​ನ ವೇಳಾಪಟ್ಟಿ ಬಿಸಿಸಿಐ ಬಿಡುಗಡೆ ಮಾಡಿದ್ದು, ಈ ಕೆಳಗಿನಂತಿದೆ.

BCCI announces Indias domestic season for 2023-24
ದೇಶೀಯ ಕ್ರಿಕೆಟ್​ ವೇಳಾ ಪಟ್ಟಿ ಇಂತಿದೆ..
author img

By

Published : Apr 11, 2023, 4:09 PM IST

ಮುಂಬೈ (ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಂಗಳವಾರ 2023-24ರ ಭಾರತದ ದೇಶೀಯ ಕ್ರಿಕೆಟ್​​ನ ವರ್ಷದ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 2023 ರ ಕೊನೆಯ ವಾರ ಮತ್ತು ಮಾರ್ಚ್ 2024 ರ ನಡುವೆ ಒಟ್ಟು 1,846 ಪಂದ್ಯಗಳನ್ನು ಆಡಲಾಗುತ್ತದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೂರ್ಣ ಪ್ರಮಾಣದ ದೇಶೀಯ ಋತುವು ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗಲಿದೆ. ಪಂದ್ಯಾವಳಿಯನ್ನು ಜೂನ್ 28, 2023 ರಿಂದ ಜುಲೈ 16, 2023 ರವರೆಗೆ ಆಡಲಾಗುತ್ತದೆ. ಅದರ ನಂತರ ಪ್ರೊ. ದೇವಧರ್ ಟ್ರೋಫಿ ಜುಲೈ 24, 2023 ರಿಂದ ಆರಂಭವಾಗಿ ಆಗಸ್ಟ್ 3, 2023 ರವರೆಗೆ ನಡೆಯುತ್ತದೆ. ಈ ಎರಡೂ ಪಂದ್ಯಾವಳಿಗಳಲ್ಲಿ ಮಧ್ಯ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಒಟ್ಟು ಆರು ವಲಯಗಳಲ್ಲಿ ಆಡಲಾಗುತ್ತದೆ. 2022-23ರ ಇರಾನಿ ಕಪ್ ಅಕ್ಟೋಬರ್ 1 ರಿಂದ ಪ್ರಾರಂಭವಾಗಿ 5ಕ್ಕೆ ಮುಕ್ತಾಯವಾಗಲಿದೆ.

ದೇಶೀಯ ಟಿ-20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಕ್ಟೋಬರ್ 16, 2023 ರಿಂದ ಪ್ರಾರಂಭವಾಗಿ ನವೆಂಬರ್ 6, 2023 ರವರೆಗೆ ನಡೆಯಲಿದೆ. ವಿಜಯ್ ಹಜಾರೆ ಟ್ರೋಫಿ ನವೆಂಬರ್​ನ ಕೊನೆಯ ವಾರ ಅಂದರೆ 23ಕ್ಕೆ ಆರಂಭವಾಗಿ ಡಿಸೆಂಬರ್​ 15 ರವರೆಗೆ ನಡೆಯಲಿದೆ. ಎರಡೂ ವೈಟ್ - ಬಾಲ್ ಪಂದ್ಯಾವಳಿಯಲ್ಲಿ 38 ತಂಡಗಳು ಆಡಲಿವೆ. ಏಳು ತಂಡಗಳ ಎರಡು ಗುಂಪುಗಳು ಮತ್ತು ಎಂಟು ತಂಡಗಳ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ.

ಕ್ರಿಕೆಟ್ ಜಗತ್ತಿನ ಪ್ರಮುಖ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾದ ರಣಜಿ ಟ್ರೋಫಿ ಜನವರಿ 5, 2024 ರಿಂದ ಪ್ರಾರಂಭವಾಗಲಿದೆ ಮತ್ತು ಮಾರ್ಚ್ 14, 2024 ರವರೆಗೆ ನಡೆಯಲಿದೆ. 38 ತಂಡಗಳನ್ನು ಐದು ಗುಂಪುಗಳಾಗಿ ವಿಭಜಿಸಲಾಗಿದ್ದು, ಅಲ್ಲಿ ನಾಲ್ಕು ಎಲೈಟ್ ಗುಂಪುಗಳು ಇರುತ್ತವೆ. ತಲಾ 8 ತಂಡಗಳು ಮತ್ತು ಪ್ಲೇಟ್ ಗುಂಪು 6 ತಂಡಗಳನ್ನು ಒಳಗೊಂಡಿರುತ್ತದೆ. ಎಲೈಟ್ ಗುಂಪಿನಲ್ಲಿರುವ ತಂಡಗಳು ತಲಾ 7 ಲೀಗ್ ಹಂತದ ಪಂದ್ಯಗಳನ್ನು ಆಡಲಿವೆ ಮತ್ತು ಪ್ರತಿ ಗುಂಪಿನಿಂದ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲಿವೆ. ಪ್ಲೇಟ್ ಗ್ರೂಪ್‌ನಲ್ಲಿರುವ ಆರು ತಂಡಗಳು ತಲಾ ಐದು ಲೀಗ್ ಹಂತದ ಪಂದ್ಯಗಳನ್ನು ಆಡಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ಮಹಿಳೆಯರ ದೇಶೀಯ ಕ್ರಿಕೆಟ್: ಮಹಿಳೆಯರ ದೇಶೀಯ ಕ್ರಿಕೆಟ್ ವರ್ಷವು ಸೀನಿಯರ್ ಮಹಿಳಾ ಟಿ-20 ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ, ಇದು ಅಕ್ಟೋಬರ್ 19, 2023 ರಿಂದ ನವೆಂಬರ್ 9, 2023 ರವರೆಗೆ ನಡೆಯಲಿದೆ. ಇದರ ನಂತರ ಹಿರಿಯ ಮಹಿಳೆಯರ ಅಂತರ ವಲಯ ಟ್ರೋಫಿಯನ್ನು ನವೆಂಬರ್ 24, 2023 ರಿಂದ ಡಿಸೆಂಬರ್ 04, 2023 ರವರೆಗೆ ಆಯೋಜಿಸಲಾಗಿದೆ. ಸೀನಿಯರ್ ಮಹಿಳಾ ಏಕದಿನ ಟ್ರೋಫಿಯೊಂದಿಗೆ 2024ರ ವರ್ಷ ಆರಂಭವಾಗಲಿದೆ. ಜನವರಿ 4 ರಿಂದ ಪಂದ್ಯಗಳು ಪ್ರಾರಂಭವಾಗಲಿದ್ದು, ಫೈನಲ್ ಜನವರಿ 26ಕ್ಕೆ ನಡೆಯಲಿದೆ.

ಇದನ್ನೂ ಓದಿ: IPL 2023: ಮೊದಲ ಗೆಲುವಿಗಾಗಿ ಡೆಲ್ಲಿ - ಮುಂಬೈ ಫೈಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.