ETV Bharat / sports

ಮಹಿಳಾ ಆಯ್ಕೆ ಸಮಿತಿ, ಜೂನಿಯರ್ ಕ್ರಿಕೆಟ್ ಸಮಿತಿಗೆ ಬಿಸಿಸಿಐ ನೇಮಕಾತಿ - ETV Bharath Kannada news

ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರಾದ್ಯಂತ ಯುವ ಕ್ರಿಕೆಟಿಗರ ಆಕಾಂಕ್ಷೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ.

Selection Committee
Selection Committee
author img

By

Published : Jun 19, 2023, 6:48 PM IST

ಮಹಿಳಾ ಕ್ರಿಕೆಟ್ ಬಲಪಡಿಸುವ ಮತ್ತು ಯುವ ಪ್ರತಿಭೆಗಳನ್ನು ಪೋಷಿಸುವ ಮಹತ್ವದ ಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಆಯ್ಕೆ ಸಮಿತಿ ಮತ್ತು ಜೂನಿಯರ್ ಕ್ರಿಕೆಟ್ ಸಮಿತಿಯ ನೇಮಕಾತಿಗಳನ್ನು ಪ್ರಕಟಿಸಿದೆ. ಆಯ್ಕೆ ಪ್ರಕ್ರಿಯೆಯನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮೇಲ್ವಿಚಾರಣೆ ಮಾಡಿದೆ. ಇದರಲ್ಲಿ ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಇದ್ದರು. ಕ್ರಿಕೆಟ್ ಸಲಹಾ ಸಮಿತಿ ಶ್ಯಾಮ ಡೇ ಶಾ ಮತ್ತು ವಿ.ಎಸ್. ತಿಲಕ್ ನಾಯ್ಡು ಅವರನ್ನು ನೇರವಾಗಿ ಆಯ್ಕೆ ಮಾಡಿಕೊಂಡಿದೆ.

ಹೊಸದಾಗಿ ನೇಮಕಗೊಂಡ ಸಮಿತಿಗಳೊಂದಿಗೆ ಬಿಸಿಸಿಐ ಮಹಿಳಾ ಕ್ರಿಕೆಟ್ ಮತ್ತು ಜೂನಿಯರ್ ಕ್ರಿಕೆಟ್​ಗೆ ಸುವ್ಯವಸ್ಥಿತ ಆಯ್ಕೆ ಪ್ರಕ್ರಿಯೆಯ ಮಾಡಲು ಮುಂದಾಗಿದೆ. ಮಹಿಳಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೀತು ಡೇವಿಡ್, ರೇಣು ಮಾರ್ಗರೇಟ್, ಆರತಿ ವೈದ್ಯ, ಕಲ್ಪನಾ ವೆಂಕಟಾಚ ಮತ್ತು ಶ್ಯಾಮ ಡೇ ಶಾ ಇತರ ಸದಸ್ಯರಾಗಿರುತ್ತಾರೆ. ಜೂನಿಯರ್ ಕ್ರಿಕೆಟ್ ಸಮಿತಿಯನ್ನು ವಿ.ಎಸ್. ತಿಲಕ್ ನಾಯ್ಡು ನೇತೃತ್ವ ವಹಿಸಲಿದ್ದು ರಣದೇಬ್ ಬೋಸ್, ಹರ್ವಿಂದರ್ ಸಿಂಗ್ ಸೋಧಿ, ಪಥಿಕ್ ಪಟೇಲ್ ಮತ್ತು ಕ್ರಿಶೇನ್ ಮೋಹನ್ ಇತರ ಸದಸ್ಯರಾಗಿರುತ್ತಾರೆ.

  • 🚨 NEWS 🚨: BCCI announces Women’s Selection Committee & Junior Cricket Committee appointments.

    The CAC has unanimously recommended Ms Shyama Dey Shaw and Mr VS Thilak Naidu for the said positions.

    More Details 🔽https://t.co/EGKhomrBE1

    — BCCI (@BCCI) June 19, 2023 " class="align-text-top noRightClick twitterSection" data=" ">

ಶ್ಯಾಮ ಡೇ ಶಾ ಅವರು ಎಡಗೈ ಬ್ಯಾಟರ್ ಮತ್ತು ಮಧ್ಯಮ ವೇಗದ ಬೌಲರ್. ಮೂರು ಟೆಸ್ಟ್ ಮತ್ತು ಐದು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದೇಶಿ ಮಟ್ಟದಲ್ಲಿ ಅವರು ಆರಂಭದಲ್ಲಿ 1985 ರಿಂದ 1997 ರವರೆಗೆ ರೈಲ್ವೇಸ್‌ಗೆ ಸೇರುವ ಮೊದಲು 1998 ರಿಂದ 2002 ರವರೆಗೆ ಬೆಂಗಾಲ್‌ಗಾಗಿ ಆಡಿದರು. ಆಟದ ವೃತ್ತಿಜೀವನದ ನಂತರ ಶಾ ಎರಡು ಅವಧಿಗೆ ಬಂಗಾಳದ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ವಿ.ಎಸ್. ತಿಲಕ್ ನಾಯ್ಡು ಅವರು ಜೂನಿಯರ್ ಕ್ರಿಕೆಟ್ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಇವರು 1998-99 ರಿಂದ 2009-10 ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಾಯ್ಡು, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿಯಲ್ಲಿ ದಕ್ಷಿಣ ವಲಯಕ್ಕೆ ಸಹ ಆಡಿದ್ದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ 93 ಪ್ರಥಮ ದರ್ಜೆ ಪಂದ್ಯಗಳಲ್ಲಿ 4386 ರನ್‌ಗಳನ್ನು ಕಲೆಹಾಕಿದ್ದಾರೆ. 2013 ರಿಂದ 2016 ರವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮತ್ತು 2015-16 ಋತುವಿನಲ್ಲಿ ಕೆಎಸ್​ಸಿಎಯ ಹಿರಿಯ ಆಯ್ಕೆ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ನೇಮಕಾತಿಗಳು ಭಾರತದಲ್ಲಿನ ಕ್ರಿಕೆಟ್‌ನ ಹಿರಿಯ ಮತ್ತು ಕಿರಿಯ ಎರಡೂ ಹಂತಗಳಲ್ಲಿನ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಮುಖ ಗುರಿಯನ್ನು ಹೊಂದಿದೆ. ಶ್ಯಾಮ ಡೇ ಶಾ ಮತ್ತು ವಿಎಸ್ ತಿಲಕ್ ನಾಯ್ಡು ಅವರು ಹೊಂದಿರುವ ಪರಿಣತಿ ಮತ್ತು ಜ್ಞಾನ ಸಮಿತಿಗಳ ಸಾಮೂಹಿಕ ಬುದ್ಧಿವಂತಿಕೆಯೊಂದಿಗೆ, ದೇಶದಲ್ಲಿ ಮಹಿಳಾ ಕ್ರಿಕೆಟ್ ಮತ್ತು ಜೂನಿಯರ್ ಕ್ರಿಕೆಟ್‌ನ ಅಭಿವೃದ್ಧಿ, ಬೆಳವಣಿಗೆಗೆ ಗಣನೀಯ ಕೊಡುಗೆಯನ್ನು ನಿರೀಕ್ಷಿಸಲಾಗಿದೆ. ಬಿಸಿಸಿಐ ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರಾದ್ಯಂತ ಯುವ ಕ್ರಿಕೆಟಿಗರ ಆಕಾಂಕ್ಷೆಗಳನ್ನು ಪೋಷಿಸಲು ಬದ್ಧವಾಗಿದೆ.

ಇದನ್ನೂ ಓದಿ: Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್​.. ಕೊಹ್ಲಿ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಸಿಗುವ​ ಹಣವೆಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.