ಸೌತಾಂಪ್ಟನ್ : ನ್ಯೂಜಿಲ್ಯಾಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ಚಾಂಪಿಯನ್ಶಿಪ್ ಫೈನಲ್ಗಾಗಿ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆ ಎಲ್ ರಾಹುಲ್ರನ್ನು ತಂಡದಿಂದ ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ.
ಜೂನ್ 18ರಿಂದ 22ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಕಿವೀಸ್ ತನ್ನ ಫೈನಲ್ ತಂಡವನ್ನು ಪ್ರಕಟಿಸಿದೆ. ಇದೀಗ ಮಂಗಳವಾರ ಬಿಸಿಸಿಐ ಕೂಡ ಫೈನಲ್ ಹಣಾಹಣಿಗೆ ತಂಡದ ತಂಡವನ್ನು ಘೋಷಣೆ ಮಾಡಿಕೊಂಡಿದೆ.
ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಇವರಿಗೆ ಬ್ಯಾಕ್ಅಪ್ ಓಪನರ್ ಆಗಿ ಯಾರನ್ನು ಆಯ್ಕೆ ಮಾಡಿಕೊಂಡಿಲ್ಲ. ಉಳಿದಂತೆ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ ತಂಡದಲ್ಲಿದ್ದಾರೆ.
-
🗒️ #TeamIndia announce their 15-member squad for the #WTC21 Final 💪 👇 pic.twitter.com/ts9fK3j89t
— BCCI (@BCCI) June 15, 2021 " class="align-text-top noRightClick twitterSection" data="
">🗒️ #TeamIndia announce their 15-member squad for the #WTC21 Final 💪 👇 pic.twitter.com/ts9fK3j89t
— BCCI (@BCCI) June 15, 2021🗒️ #TeamIndia announce their 15-member squad for the #WTC21 Final 💪 👇 pic.twitter.com/ts9fK3j89t
— BCCI (@BCCI) June 15, 2021
2ನೇ ವಿಕೆಟ್ ಕೀಪರ್ ಆಗಿ ಸಹಾಗೆ ಅವಕಾಶ ನೀಡಲಾಗಿದೆ. ವೇಗಿಗಳ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆದರೆ, ರವಿ ಚಂದ್ರನ್ ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಕೋಟಾದಲ್ಲಿ ಅವಕಾಶ ಪಡೆದಿದ್ದಾರೆ.
WTCಗೆ ಭಾರತ ತಂಡ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೀ), ವೃದ್ಧಿಮಾನ್ ಸಹಾ (ವಿಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಇದನ್ನು ಓದಿ:ಪೂಜಾರರ ಅರ್ಧದಷ್ಟು ಸಾಧನೆ ಮಾಡದವರೂ ಆತನ ಬ್ಯಾಟಿಂಗ್ ಟೀಕಿಸುತ್ತಿದ್ದಾರೆ : ಸಚಿನ್ ಕಿಡಿ