ETV Bharat / sports

ODI World Cup 2023 Schedule: ಮುಂದಿನ ವಾರವೇ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ? - ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್‌

ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗಳು ನಡೆಯಲಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಇನ್ನು ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಬಿಡಗಡೆ ಮಾಡಲಿದೆ. ಮುಂದಿನ ವಾರ ಮುಂಬೈನಲ್ಲಿ ಈ ಬಗ್ಗೆ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.

BCCI and ICC Conduct an Event in Mumbai to announce ODI World Cup 2023 Schedule

author img

By

Published : Jun 22, 2023, 2:29 PM IST

Updated : Jun 22, 2023, 2:38 PM IST

ನವದೆಹಲಿ: 2023ರ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಇದೇ ಜೂನ್ 27ರೊಳಗೆ ಪ್ರಕಟಿಸುವ ಸಾಧ್ಯತೆ ಇದೆ. ಮುಂದಿನ ವಾರ ಮುಂಬೈನಲ್ಲಿ ಈ ಬಗ್ಗೆ ಅದ್ಧೂರಿ ಈವೆಂಟ್ ಆಯೋಜಿಸುವ ಮೂಲಕ ಬಿಸಿಸಿಐ ಮತ್ತು ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಭಾರತದ ಆತಿಥ್ಯದಲ್ಲಿ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​ ನಡೆಯಲಿದೆ. ಇದಕ್ಕಾಗಿ ಎಲ್ಲ ತಯಾರಿ ಕೂಡ ನಡೆಯುತ್ತಿದೆ. ಪಂದ್ಯಾವಳಿ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಮುಂದಿನ ವಾರ ಮುಂಬೈನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ವಕಪ್ 2023ರ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿಯೂ ವೇಳಾಪಟ್ಟಿ ಬಗ್ಗೆ ಚರ್ಚೆಯಾಗುತ್ತಿದ್ದು ಕೆಲವು ವೈರಲ್ ಆದ ಟ್ವೀಟರ್​ಗಳಿಂದ ಈ ಮಾಹಿತಿ ಲಭ್ಯವಾಗಿದೆ.

  • BCCI & ICC is set to conduct an event in Mumbai to announce the schedule of World Cup 2023 next week. [Cricbuzz] pic.twitter.com/kgJH7UCk69

    — Johns. (@CricCrazyJohns) June 21, 2023 " class="align-text-top noRightClick twitterSection" data=" ">

ಕೆಲವು ಕಾರಣಾಂತಗಳಿಂದ ವಿಶ್ವಕಪ್ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿದೆ. ಏಕದಿನ ಕ್ರಿಕೆಟ್ ವಿಶ್ವಕಪ್​ನ ಕರಡು ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಆಡುವ ಎಲ್ಲ ದೇಶಗಳಿಗೂ ಈಗಾಗಲೇ ಕಳುಹಿಸಿ ಕೊಟ್ಟಿದ್ದು, ಆಕ್ಷೇಪಗಳಿದ್ದಲ್ಲಿ ತಿಳಿಸುವಂತೆಯೂ ಕೇಳಿಕೊಂಡಿದೆ. ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಒಪ್ಪಿಗೆ ಸೂಚಿಸಿದೆ. ಆದರೆ, ಈ ವಿಶ್ವಕಪ್​​ಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ನಿರಂತರವಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ. ಇದರಿಂದಾಗಿ ಆಡಳಿತ ಮಂಡಳಿ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಏಕದಿನ ವಿಶ್ವಕಪ್ ಆಡದಿರಲು ಪಾಕಿಸ್ತಾನದ ನಿರ್ಧಾರವು ವೇಳಾಪಟ್ಟಿ ಘೋಷಣೆಗೆ ವಿಳಂಬವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಇದಾಗಿದೆ.

ಈಗ ಅಂತಿಮ ವೇಳಾಪಟ್ಟಿಯ ಅಧಿಕೃತ ಘೋಷಣೆ ಮುಂದಿನ ವಾರದಲ್ಲಿ ಮಾಡಬಹುದು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ)ಗೆ ವೇಳಾಪಟ್ಟಿಯ ಬಗ್ಗೆ ತನ್ನ ಅನುಮೋದನೆಯನ್ನು ಕಳುಹಿಸಿಕೊಟ್ಟಿಲ್ಲ. ಅಧಿಕೃತ ಘೋಷಣೆಗೆ ಇನ್ನೂ ವಿಳಂಬವಾಗಲೂ ಬಹುದು ಎಂದು ಹೇಳಲಾಗುತ್ತಿದೆ.

ಟೂರ್ನಿಗಳು ಅಕ್ಟೋಬರ್‌ ಮತ್ತು ನವೆಂಬರ್‌ ಅವಧಿಯಲ್ಲಿ ನಡೆಯುವುದು ಖಚಿತ. ಆದರೆ, ಚೆನ್ನೈ ಹಾಗೂ ಬೆಂಗಳೂರು ಪಂದ್ಯಗಳನ್ನು ಬದಲಿಸುವಂತೆ ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮನವಿ ಮಾಡಿದ್ದರಿಂದ ವೇಳಾಪಟ್ಟಿ ಪ್ರಕಟಿಸಲು ತೊಡಕಾಗಿದೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವ ಕುರಿತು ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಅವರು ಹೇಳಿಕೆ ನೀಡಿದ್ದರು. ಸಿದ್ಧಗೊಂಡಿರುವ ವೇಳಾಪಟ್ಟಿಗೆ ಸಂಬಂಧಿಸಿದಂತೆ ನಾವು ಈಗಲೇ ಯಾವುದೇ ಅಭಿಪ್ರಾಯ ನೀಡಲು ಸಾಧ್ಯವಿಲ್ಲ. ನಮ್ಮ ತಂಡ ಪಾಕಿಸ್ತಾನ ಸರ್ಕಾರವನ್ನು ಅವಲಂಬಿಸಿದೆ. ಹಾಗಾಗಿ ಸದ್ಯಕ್ಕೆ ನಾವು ತಟಸ್ಥ ಎಂದಿದ್ದರು. ಇವರ ಹೇಳಿಕೆಯಿಂದ ಬಿಡಗಡೆಗೆ ಸಿದ್ಧಗೊಂಡಿದ್ದ ವೇಳಾಪಟ್ಟಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಭಾರತ ತಂಡ 2023ರ ಏಕದಿನ ವಿಶ್ವಕಪ್‌ಗೆ ಈಗಾಗಲೇ ಸಿದ್ಧತೆ ನಡೆಸಿದೆ. ಆತಿಥ್ಯ ವಹಿಸುವ ಕ್ರೀಡಾಂಗಣಗಳನ್ನು ಮಂಡಳಿಯಿಂದ ದುರಸ್ತಿ ಮಾಡಿಸಲಾಗುತ್ತಿದೆ. ಮೈದಾನಗಳನ್ನು ಮತ್ತಷ್ಟು ಸುಸಜ್ಜಿತಗೊಳಿವ ಮೂಲಕ ಈ ಬಾರಿಯ ವಿಶ್ವಕಪ್‌ ಅನ್ನು ಅದ್ಧೂರಿಯಾಗಿ ಆರಂಭಿಸಲಾಗುತ್ತದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ದುರಸ್ತಿ ಕಾರ್ಯ ನಡೆದಿದೆ. ಅಲ್ಲದೇ ವಾಂಖೆಡೆ ಸ್ಟೇಡಿಯಂನಲ್ಲಿ DMX ನಿಯಂತ್ರಣದೊಂದಿಗೆ LED ಫ್ಲಡ್‌ಲೈಟ್‌ಗಳನ್ನು ಸಹ ಅಳವಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕೆಲವು ಫೋಟೋ ವೈರಲ್​ ಆಗಿವೆ.

ಇದನ್ನೂ ಓದಿ: ODI World Cup: ಏಕದಿನ ವಿಶ್ವಕಪ್‌ ಕ್ರಿಕೆಟ್‌- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!

Last Updated : Jun 22, 2023, 2:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.