ETV Bharat / sports

BCCI AGM: ಚರ್ಚೆಗೆ ಕಾರಣವಾದ ವಂಶಪಾರಂಪರ್ಯ ಮುಂದುವರಿಕೆ - ಈಟಿವಿ ಭಾರತ​ ಕರ್ನಾಟಕ

ಅಕ್ಟೋಬರ್ 18 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಭಾಗವಹಿಸಬಹುದು. ವೈಭವ್ ಅವರು ರಾಜಸ್ಥಾನದ ಸದಸ್ಯರಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

BCCI AGM
ಬಿಸಿಸಿಐ ಎಜಿಎಂ
author img

By

Published : Oct 8, 2022, 6:48 AM IST

ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಅಕ್ಟೋಬರ್ 18 ರಂದು ಮುಂಬೈನಲ್ಲಿ ನಡೆಯಲಿದೆ. ಈ ಬಗ್ಗೆ ಕ್ರಿಕೆಟ್ ಮಂಡಳಿ ಈಗಾಗಲೇ ಮಾಹಿತಿ ನೀಡಿದೆ. ಪರಿಚಿತ ಹೆಸರುಗಳಲ್ಲದೆ ಐವರು ಪ್ರಸಿದ್ಧ ವ್ಯಕ್ತಿಗಳ ಪುತ್ರರ ಹೆಸರುಗಳು ಸಹ ಈ ಬಾರಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬಿಸಿಸಿಐ ಮೂಲಗಳ ಪ್ರಕಾರ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಎಜಿಎಂಗೆ ಹಾಜರಾಗುವ ಸಾಧ್ಯತೆಯಿದೆ ಮತ್ತು ರಾಜಸ್ಥಾನದ ಸದಸ್ಯರಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಬಿಸಿಸಿಐನ ಮಾಜಿ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷ ನಿರಂಜನ್ ಶಾ ಅವರ ಪುತ್ರ ಜಯದೇವ್ ಶಾ ಸೌರಾಷ್ಟ್ರವನ್ನು ಪ್ರತಿನಿಧಿಸಲಿದ್ದು, ಮಾಜಿ ಬಿಸಿಸಿಐ ಮತ್ತು ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್ ಅವರ ಪುತ್ರ ಅದ್ವೈತ್ ಮನೋಹರ್ ವಿದರ್ಭ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸಲಿದ್ದಾರೆ. ಬರೋಡಾ ಕ್ರಿಕೆಟ್ ಸಂಸ್ಥೆಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಚಿರಾಯು ಅಮೀನ್ ಅವರ ಪುತ್ರ ಪ್ರಣವ್ ಅಮೀನ್ ಅವರನ್ನು ಆಯ್ಕೆ ಮಾಡಿದೆ. ಏತನ್ಮಧ್ಯೆ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಭ್ಯರ್ಥಿಯಾಗಿ ಎಜಿಎಂಗೆ ಹಾಜರಾಗಲು ಸಿದ್ಧರಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ್ ಮೆನನ್ ಬದಲಿಗೆ ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರನ್ನು ಕಳುಹಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಜೈ ಶಾ (ಗುಜರಾತ್ ಕ್ರಿಕೆಟ್ ಅಸೋಸಿಯೇಷನ್), ಅನಿರುದ್ಧ್ ಚೌಧರಿ (ಹರಿಯಾಣ ಕ್ರಿಕೆಟ್ ಅಸೋಸಿಯೇಷನ್), ಅರುಣ್ ಸಿಂಗ್ ಧುಮಾಲ್ (ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್) ಅವರಂತಹ ಪ್ರಸಿದ್ಧ ಮುಖಗಳು ತಮ್ಮ ತಮ್ಮ ರಾಜ್ಯ ಸಂಘಗಳನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 11 ಮತ್ತು 12 ರಂದು ನಾಮಪತ್ರ ಸಲ್ಲಿಸಲು ದಿನಾಂಕವಾಗಿದ್ದು, ಅಕ್ಟೋಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಮತ್ತು ಅಕ್ಟೋಬರ್ 14ರ ವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು.

ಇದನ್ನೂ ಓದಿ : ಟಿ20 ವಿಶ್ವಕಪ್: ಜಡೇಜಾ - ಬುಮ್ರಾ ಅನುಪಸ್ಥಿತಿ.. ಹೊಸ ಚಾಂಪಿಯನ್​ಗಳಿಗೆ ಅವಕಾಶ ಎಂದ ರವಿಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.