ETV Bharat / sports

22 ಬೌಂಡರಿ, 4 ಸಿಕ್ಸರ್ ಸಹಿತ​ 154 ರನ್​ ... ಬಿಬಿಎಲ್​ನಲ್ಲಿ ಮ್ಯಾಕ್ಸ್​ವೆಲ್ ದಾಖಲೆಗಳ ಸುರಿಮಳೆ

64 ಎಸೆತಗಳಲ್ಲಿ 154 ರನ್​ ಸಿಡಿಸಿದ ಮ್ಯಾಕ್ಸ್​ವೆಲ್​ 112 ರನ್​ಗಳನ್ನು ಬೌಂಡರಿ ಸಿಕ್ಸರ್​ಗಳ ಮೂಲಕವೇ ಸಿಡಿಸಿದರು. ಅವರು 22 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಸಿದ್ದರು. ಈ ಹಿಂದೆ ಸ್ಟೋಯ್ನಿಸ್​ 13 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ 100 ರನ್​ ಬಾರಿಸಿದ್ದದ್ದು ಬಿಬಿಎಲ್​ನಲ್ಲಿನ ದಾಖಲೆಯಾಗಿತ್ತು..

Glenn Maxwell breaks record for highest score in BBL history
ಗ್ಲೇನ್ ಮ್ಯಾಕ್ಸ್​ವೆಲ್ ಶತಕ
author img

By

Published : Jan 19, 2022, 4:38 PM IST

ಮೆಲ್ಬೋರ್ನ್​ : ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್​ ಬಿಗ್​​ಬ್ಯಾಶ್​ ಲೀಗ್​​ನ ತಮ್ಮ 100ನೇ ಪಂದ್ಯದಲ್ಲಿ 150 ರನ್​ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬಿಬಿಎಲ್​ನಲ್ಲಿ ವೈಯಕ್ತಿಕ ಗರಿಷ್ಠ ರನ್​ ದಾಖಲಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ದಾಖಲಾದರು.

ಮೆಲ್ಬೋರ್ನ್​ ಸ್ಟಾರ್ಸ್ ತಂಡ ಈಗಾಗಲೇ ನಿರಾಶದಾಯಕ ಪ್ರದರ್ಶನ ತೋರಿ ಟೂರ್ನಿಯಿಂದ ಹೊರ ಬಿದ್ದಿದೆ. ಆದರೆ, ಕೊನೆಯ ಪಂದ್ಯವನ್ನು ಗೆದ್ದ ಖುಷಿಯಲ್ಲಿ ಟೂರ್ನಿಯಲ್ಲಿ ಅಭಿಯಾನ ಮುಗಿಸುವ ಆಲೋಚನೆಯಲ್ಲಿ ಬ್ಯಾಟಿಂಗ್ ಇಳಿದು 20 ಓವರ್​ಗಳಲ್ಲಿ ಬರೋಬ್ಬರಿ 2 ವಿಕೆಟ್ ಕಳೆದುಕೊಂಡು 273 ರನ್​ಗಳಿಸಿತು.

​ಆರಂಭಿಕನಾಗಿ ಕಣಕ್ಕಿಳಿದಿದ್ದ ಮ್ಯಾಕ್ಸ್​ವೆಲ್ 41 ಎಸೆತಗಳಲ್ಲಿ ತಮ್ಮ 2ನೇ ಬಿಬಿಎಲ್ ಮತ್ತು ಲೀಗ್ ಇತಿಹಾಸದ 2ನೇ ವೇಗದ ಶತಕ ದಾಖಲಿಸಿದರು. ತಮ್ಮ 100ನೇ ಬಿಬಿಎಲ್​ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು ಒಟ್ಟಾರೆ 64 ಎಸೆತಗಳಲ್ಲಿ 22 ಬೌಂಡರಿ, 4 ಸಿಕ್ಸರ್​ಗಳ ಸಹಿತ ಅಜೇಯ 154 ರನ್​ ಚಚ್ಚಿದರು. ಇವರಿಗೆ ಸಾಥ್​ ನೀಡಿದ ಮಾರ್ಕಸ್ ಸ್ಟೋಯ್ನಿಸ್​ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ ಚಚ್ಚಿದರು.

ವೈಯಕ್ತಿಕ ಗರಿಷ್ಠ ರನ್ ದಾಖಲೆ : 154 ರನ್​ ದಾಖಲಿಸುವ ಮೂಲಕ ಮ್ಯಾಕ್ಸ್​ವೆಲ್ ಬಿಗ್​ಬ್ಯಾಶ್​ ಇತಿಹಾಸದಲ್ಲೇ ಗರಿಷ್ಠ ರನ್​ ಬಾರಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಇವರ ಜೊತೆಗಾರ ಸ್ಟೋಯ್ನಿಸ್​ ಸಿಡ್ನಿ ಸಿಕ್ಸರ್​ ವಿರುದ್ಧ 2020ರಲ್ಲಿ 79 ಎಸೆತಗಳಲ್ಲಿ 147 ರನ್​ ಸಿಡಿಸಿದ್ದು ಬಿಬಿಎಲ್ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಬಿಬಿಎಲ್​ನಲ್ಲಿ ಗರಿಷ್ಠ ಮೊತ್ತ ದಾಖಲು : ಮ್ಯಾಕ್ಸ್​ವೆಲ್(154) ಮತ್ತು ಸ್ಟೋಯ್ನಿಸ್​(75) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮೆಲ್ಬೋರ್ನ್​ ಸ್ಟಾರ್ಸ್​ 273 ರನ್​ ಸೂರೆಗೈದಿತು. ಇದು ಬಿಬಿಎಲ್​ ಇತಿಹಾಸದಲ್ಲೇ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಯಿತು. ಈ ಹಿಂದೆ 2021ರ ಜನವರಿ 22ರಂದು ಸಿಡ್ನಿ ಥಂಡರ್​ 232/5 ರನ್​ಗಳಿಸಿದ್ದ ಗರಿಷ್ಠ ಮೊತ್ತವಾಗಿತ್ತು.

ಬೌಂಡರಿಗಳ ಮೂಲಕವೇ ಶತಕ : 64 ಎಸೆತಗಳಲ್ಲಿ 154 ರನ್​ ಸಿಡಿಸಿದ ಮ್ಯಾಕ್ಸ್​ವೆಲ್​ 112 ರನ್​ಗಳನ್ನು ಬೌಂಡರಿ ಸಿಕ್ಸರ್​ಗಳ ಮೂಲಕವೇ ಸಿಡಿಸಿದರು. ಅವರು 22 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಸಿದ್ದರು. ಈ ಹಿಂದೆ ಸ್ಟೋಯ್ನಿಸ್​ 13 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ 100 ರನ್​ ಬಾರಿಸಿದ್ದದ್ದು ಬಿಬಿಎಲ್​ನಲ್ಲಿನ ದಾಖಲೆಯಾಗಿತ್ತು.

ಇದನ್ನೂ ಓದಿ:ಸೆಹ್ವಾಗ್, ಕೀರ್ಮಾನಿ ಜತೆಗೆ ವಿಶೇಷ ದಾಖಲೆಗೆ ಪಾತ್ರರಾದ ಕನ್ನಡಿಗ ಕೆಎಲ್ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.