ಅಡಿಲೇಡ್ (ಆಸ್ಟ್ರೇಲಿಯಾ): ಬಾಂಗ್ಲಾದೇಶದ ವಿಕೆಟ್ ಕೀಪರ್ ಕಂ ಬ್ಯಾಟರ್ ನುರುಲ್ ಹಸನ್ ಅವರು, ವಿರಾಟ್ ಕೊಹ್ಲಿ ನಕಲಿ ಫೀಲ್ಡಿಂಗ್ ಮಾಡಿರುವುದಾಗಿ ಆರೋಪಿಸಿದ್ದಾರೆ. ಇದು ಆನ್-ಫೀಲ್ಡ್ ಅಂಪೈಲ್ ಗಮನಕ್ಕೆ ಬಂದಿಲ್ಲ. ಈ ಮೂಲಕ ಪಂದ್ಯದ ಪ್ರಮುಖ 5 ರನ್‌ಗಳನ್ನು ಅವರು ಕಸಿದುಕೊಂಡರು ಎಂದು ತಿಳಿಸಿದ್ದಾರೆ.
ಪಂದ್ಯದ ನಡುವೆ ಮಳೆ ಸುರಿದಿದ್ದು, ಡಕ್ವರ್ಥ್ ಲೂಯಿಸ್ ನಿಯಮದಂತೆ ಬಾಂಗ್ಲಾ ತಂಡಕ್ಕೆ 16 ಓವರ್‌ಗಳಿಗೆ 151 ರನ್ ಗುರಿ ನಿಗದಿಪಡಿಸಲಾಗಿತ್ತು. ಈ ಟಾರ್ಗೆಟ್ ಬೆನ್ನತ್ತುವಲ್ಲಿ ಬಾಂಗ್ಲಾ ಎಡವಿತು. ನಂತರ ಮಾತನಾಡಿದ ನಾಯಕ ಶಕೀಬ್-ಅಲ್-ಹಸನ್, ನಾವು ಅಪರೂಪದ ಅವಕಾಶ ಕಳೆದುಕೊಂಡೆವು ಎಂದು ಹೇಳಿದರು.
ಪಂದ್ಯದಲ್ಲಿ ನುರುಲ್ ಕೊನೆಯ ಓವರ್‌ವರೆಗೂ ತಂಡವನ್ನು ಗೆಲುವಿನೆಡೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಅವರು ಕೊನೆಯ ಅರ್ಶದೀಪ್ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಗಳಿಸಲಷ್ಟೇ ಶಕ್ತರಾದರು.
ಏನಿದು ಫೇಕ್ ಫೀಲ್ಡಿಂಗ್: ನುರುಲ್ ಆರೋಪಿಸಿರುವ ಘಟನೆಯು ಪಂದ್ಯದ 7ನೇ ಓವರ್‌ನಲ್ಲಿ ಸಂಭವಿಸಿತು. ಅರ್ಶದೀಪ್ ಡೀಪ್‌ನಿಂದ ಚೆಂಡು ಎಸೆದರು. ಕೊಹ್ಲಿ ಚೆಂಡನ್ನು ನಾನ್-ಸ್ಟ್ರೈಕರ್ ತುದಿಗೆ ರಿಲೇ ಥ್ರೋ ಮಾಡುವ ಹಾಗೆ ನಟಿಸಿದ್ದಾರೆ. ರಿಲೇ ಥ್ರೋ ಎಂದರೆ ಬೌಂಡರಿ ತುದಿಯಿಂದ ಎಸೆದ ಚೆಂಡನ್ನು ಬೌಲಿಂಗ್ ಟ್ಯ್ರಾಕ್ ಬಳಿ ಇರುವ ಫೀಲ್ಡರ್ ಹಿಡಿದು ಸ್ಟಂಪ್ಸ್ ಗೆ ಎಸೆಯುವುದಾಗಿದೆ. ಆದರೆ, ಲಿಟನ್ ದಾಸ್ ಮತ್ತು ನಜ್ಮುಲ್ ಶಾಂಟೋ ಇಬ್ಬರು ಆಟಗಾರರು ಕೂಡಾ ಈ ಸಂದರ್ಭದಲ್ಲಿ ಕೊಹ್ಲಿಯನ್ನು ನೋಡಿರಲಿಲ್ಲ. ಹಾಗಾಗಿ, ನುರುಲ್ ಅವರ ವಾದ ಟೀಕೆಗೆ ಕಾರಣವಾಗಿದೆ.
ಇದನ್ನೂ ಓದಿ: ದಿನೇಶ್ ಕಾರ್ತಿಕ್ ವಿವಾದಿತ ರನೌಟ್.. ಕೊಹ್ಲಿ ವಿರುದ್ಧ ಅಭಿಮಾನಿಗಳ ಟೀಕೆ