ETV Bharat / sports

Asia Cup 2023: ಪಾಕ್​ನಲ್ಲಿ ಅಫ್ಘಾನ್​ vs ಬಾಂಗ್ಲಾ ಫೈಟ್​​.. ಟಾಸ್​ ಗೆದ್ದ ಶಕೀಬ್​ ಬ್ಯಾಟಿಂಗ್​ ಆಯ್ಕೆ

author img

By ETV Bharat Karnataka Team

Published : Sep 3, 2023, 2:59 PM IST

Updated : Sep 3, 2023, 4:20 PM IST

Bangladesh vs Afghanistan: ಏಷ್ಯಾಕಪ್​ನ ನಾಲ್ಕನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಶಕೀಬ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

BAN vs AFG
BAN vs AFG

ಲಾಹೋರ್​​ (ಪಾಕಿಸ್ತಾನ): ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಬಿ ಗುಂಪಿನ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್​ ಅಲ್​ ಹಸನ್​ ಮೊದಲು ಬ್ಯಾಟಿಂಗ್​ ನಿರ್ಧಾರ ಕೈಗೊಂಡಿದ್ದಾರೆ. ಈ ಪಂದ್ಯ ಪಾಕ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಅಫ್ಘಾನಿಸ್ತಾನ ಮೊದಲ ಬಾರಿಗೆ ಪಾಕಿಸ್ತಾನದ ಮೈದಾನದಲ್ಲಿ ಪಂದ್ಯವಾಡುತ್ತಿದೆ.

ಸೂಪರ್​ ಫೋರ್​ನಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯದಂತಾಗಿದೆ. ಆಗಸ್ಟ್​​ 31 ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಪಲ್ಲೆಕೆಲೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡು 164ಕ್ಕೆ ಆಲ್​ ಔಟ್​ ಆಗಿತ್ತು. ಈ ಸಂಕ್ಷಿಪ್ತ ಸ್ಕೋರ್​ನ್ನು ಶ್ರೀಲಂಕಾ 5 ವಿಕೆಟ್​ನಿಂದ ಗೆದ್ದುಕೊಂಡಿತ್ತು. ಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಬಾಂಗ್ಲಾ ಮೂರು ಬದಲಾವಣೆಯೊಂದಿಗೆ ಇಂದು ಮೈದಾನಕ್ಕಿಳಿದಿದೆ.

ಟಾಸ್ ಗೆದ್ದ ನಂತರ ಬಾಂಗ್ಲಾದೇಶದ ನಾಯಕ ಮಾತನಾಡಿ,"ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಉತ್ತಮ ವಿಕೆಟ್ ಮತ್ತು ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ. ತಂಡದಲ್ಲಿ ಮೂರು ಬದಲಾವಣೆಗಳಿವೆ. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಕಂಡು ಬರಲಿಲ್ಲ. ಇಂದು ಹೊಸ ದಿನ ವಿಕೆಟ್​ ಉತ್ತಮವಾಗಿದ್ದು, ಆಶಾದಾಯಕವಾಗಿದ್ದೇವೆ" ಎಂದಿದ್ದಾರೆ.

ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ," ಟಾಸ್​ ಗೆದ್ದಲ್ಲಿ ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು. ತುಂಬಾ ಉತ್ಸುಕರಾಗಿದ್ದೇವೆ. ನಮಗೆ ಇಲ್ಲಿ ಸಾಕಷ್ಟು ಪ್ರೇಕ್ಷಕರ ಬೆಂಬಲ ಇದೆ. ಉತ್ತಮ ತಯಾರಿ ನಡೆಸಿಕೊಂಡಿದ್ದೇವೆ. ಪಾಕಿಸ್ತಾನದ ವಿರುದ್ಧ ಇಲ್ಲಿ ಇತ್ತೀಚೆಗೆ ಪಂದ್ಯಗಳನ್ನು ಆಡಿದ್ದೇವೆ. ಅದು ಒಳ್ಳೆಯ ಅನುಭವವನ್ನು ನೀಡಿದೆ" ಎಂದಿದ್ದಾರೆ.

ಪಾಕಿಸ್ತಾನ ಪಿಚ್​ಗಳನ್ನು ಸಾಮಾನ್ಯವಾಗಿ ಡೆಡ್​ ಪಿಚ್​ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಹೆಚ್ಚು ಸ್ಕೋರ್ ಮಾಡುವ ಸ್ಥಳವಾಗಿದೆ. ಚೆಂಡು ಹಳೆಯದಾಗುತ್ತಿದ್ದಂತೆ ಮೇಲ್ಮೈ ನಿಧಾನವಾಗಬಹುದು. ಇದರಿಂದ ಅಫ್ಘಾನಿಸ್ತಾನವು ಮೂರು ಸ್ಪಿನ್ನರ್‌ಗಳನ್ನು ಹೊಂದಿದ್ದು ಅನುಕೂಲವಾಗಲಿದೆ.

ತಂಡಗಳು ಇಂತಿವೆ..ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್(ವಿಕೆಟ್​ ಕೀಪರ್​), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ(ನಾಯಕ), ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರಹಮಾನ್

ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್​ ಕೀಪರ್​​​), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮ್ಮದ್

ಇದನ್ನೂ ಓದಿ: ಏಷ್ಯಾಕಪ್​ 2023: ಭಾರತ - ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ.. ಸೂಪರ್​-4 ಹಂತಕ್ಕೆ ಬಾಬರ್​ ಪಡೆ

Last Updated : Sep 3, 2023, 4:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.