ಸೆಂಚುರಿಯನ್: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿದ ಬಾಂಗ್ಲಾದೇಶ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 38 ರನ್ಗಳ ಜಯ ಸಾಧಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಬಾಂಗ್ಲಾದೇಶದ ಮೊದಲ ಜಯವಾಗಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 7 ವಿಕೆಟ್ ಕಳೆದುಕೊಂಡು 314 ರನ್ಗಳಿಸಿತ್ತು. ಶಕಿಬ್ ಅಲ್ ಹಸನ್ 64 ಎಸೆತಗಳಲ್ಲಿ 77, ಲಿಟನ್ ದಾಸ್ 67 ಎಸೆತಗಳಲ್ಲಿ 50, ತಮೀಮ್ ಇಕ್ಬಾಲ್ 67 ಎಸೆತಗಳಲ್ಲಿ 41, ಯಾಸಿರ್ ಅಲಿ 44 ಎಸೆತಗಳಲ್ಲಿ 50 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು.
-
That winning feeling 🙌
— ICC (@ICC) March 18, 2022 " class="align-text-top noRightClick twitterSection" data="
Bangladesh’s 38-run win in Centurion was their first ODI victory on South African soil.#SAvBAN | https://t.co/LBaOXJFA9B pic.twitter.com/WMcO4XGgfn
">That winning feeling 🙌
— ICC (@ICC) March 18, 2022
Bangladesh’s 38-run win in Centurion was their first ODI victory on South African soil.#SAvBAN | https://t.co/LBaOXJFA9B pic.twitter.com/WMcO4XGgfnThat winning feeling 🙌
— ICC (@ICC) March 18, 2022
Bangladesh’s 38-run win in Centurion was their first ODI victory on South African soil.#SAvBAN | https://t.co/LBaOXJFA9B pic.twitter.com/WMcO4XGgfn
ರಬಾಡ 57ಕ್ಕೆ 1, ಲುಂಗಿ ಎಂಗಿಡಿ 75ಕ್ಕೆ 1, ಮಾರ್ಕೊ ಜಾನ್ಸನ್ 57ಕ್ಕೆ 2, ಮಹರಾಜ್ 56ಕ್ಕೆ2 ಮತ್ತು ಪೆಹ್ಲುಕ್ವಾಯೋ 63ಕ್ಕೆ 1 ವಿಕೆಟ್ ಪಡೆದಿದ್ದರು. ಇನ್ನು 315 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ 79(57) ಮತ್ತು ರಾಸಿ ವ್ಯಾನ್ ಡರ್ ಡಸೆನ್ 86(98) ರನ್ಗಳ ಹೊರತಾಗಿಯೂ 48.5 ಓವರ್ಗಳಲ್ಲಿ 276ಕ್ಕೆ ಆಲೌಟ್ ಆಗುವ ಮೂಲಕ ಮೊದಲ ಪಂದ್ಯದಲ್ಲೆ ನಿರಾಶೆ ಅನುಭವಿಸಿತು.
ಮೆಹಿದಿ ಹಸನ್ 61ಕ್ಕೆ 4, ತಸ್ಕಿನ್ ಅಹ್ಮದ್ 36ಕ್ಕೆ3, ಶೋರಿಫುಲ್ ಹಕ್ 47ಕ್ಕೆ2, ಮಹ್ಮದುಲ್ಲಾ 24ಕ್ಕೆ1 ವಿಕೆಟ್ ಪಡೆದರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ಧೋನಿ ಬಗ್ಗೆ ಅಪಾರ ಗೌರವವಿದೆ, ಅವಶ್ಯಕತೆ ಬಂದಾಗ ಅವರ ಪಕ್ಕ ನಿಲ್ಲುವ ಮೊದಲ ವ್ಯಕ್ತಿ ನಾನು: ಗಂಭೀರ್