ಢಾಕಾ : ಮುಶ್ಫೀಕರ್ ರಹೀಮ್ ಬ್ಯಾಟಿಂಗ್ ಮತ್ತು ಮೆಹಿದಿ ಹಸನ್ ಅದ್ಭುತ ಬೌಲಿಂಗ್ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 33 ರನ್ಗಳ ಜಯ ಸಾಧಿಸಿ 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದೆ.
ಢಾಕಾದ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ, ನಾಯಕ ತಮೀಮ್ ಇಕ್ಬಾಲ್(52) ಮುಶ್ಫೀಕರ್ ರಹೀಮ್ (84) ಮತ್ತು ಮೊಹ್ಮದುಲ್ಲಾ (54) ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 257 ರನ್ಗಳಿಸಿತ್ತು. ಹುಸೇನ್ ಕೊನೆಯಲ್ಲಿ ಅಬ್ಬರಿಸಿ 27 ರನ್ಗಳಿಸಿದ್ದರು.
258 ರನ್ಗಳ ಗುರಿ ಪಡೆದ ಶ್ರೀಲಂಕಾ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 48.1 ಓವರ್ಗಲ್ಲಿ 224 ರನ್ಗಳಿಗೆ ಸರ್ವಪತನ ಕಂಡು 33 ರನ್ಗಳಿಂದ ಸೋಲುಂಡಿತು.
ಏಕಾಂಗಿ ಹೋರಾಟ ನಡೆಸಿದ ಆಲ್ರೌಂಡರ್ ವನಿಂಡು ಹಸರಂಗ 60 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ 74 ರನ್ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.
ಮೆಹಿದಿ ಹಸನ್ ಮುಸ್ತಫಿಜುರ್ ರೆಹಮಾನ್ 34 ರನ್ ನೀಡಿ 3 ವಿಕೆಟ್ ಮತ್ತು ಸೈಫುದ್ದೀನ್ 49 ರನ್ ನೀಡಿ 2 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಇದನ್ನು ಓದಿ:ವರದಿಗಳ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ.. ಈ ವಾರವೇ ಮಹಿಳಾ ಕ್ರಿಕೆಟಿಗರಿಗೆ ಬಹುಮಾನದ ಮೊತ್ತ ವಿತರಣೆ!