ETV Bharat / sports

ತವರಿನಲ್ಲೇ ನ್ಯೂಜಿಲ್ಯಾಂಡ್​ಗೆ ಮರ್ಮಾಘಾತ: ಕಿವೀಸ್​ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಗೆದ್ದ ಬಾಂಗ್ಲಾದೇಶ!

130 ರನ್​ಗಳ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದ್ದ ಕಿವೀಸ್ 4ನೇ ದಿನ 5 ವಿಕೆಟ್​ ಕಳೆದುಕೊಂಡು 147 ರನ್​ಗಳಿಸಿ 17 ರನ್​ಗಳ ಲೀಡ್ ಪಡೆದುಕೊಂಡಿತ್ತು. ಆದರೆ ಕೊನೆಯ ದಿನವಾದ ಇಂದು ನಿನ್ನೆಯ ಮೊತ್ತಕ್ಕೆ ಕೇವಲ 22 ರನ್​ಸೇರಿಸಿ 169ಕ್ಕೆ ಸರ್ವಪತನಕಂಡಿತು.

author img

By

Published : Jan 5, 2022, 5:55 AM IST

Bangladesh beat New Zealand by 8 wickets
ನ್ಯೂಜಿಲ್ಯಾಂಡ್​ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು

ಮೌಂಟ್​ ಮಾಂಗುನುಯಿ: ಕಳೆದ 5 ವರ್ಷಗಳಿಂದ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರದಾಡುತ್ತಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಬಾಂಗ್ಲಾದೇಶ ತಂಡ ಆಘಾತಕಾರಿ ಸೋಲುಣಿಸಿದೆ. ಶನಿವಾರ ಮೊದಲ ಟೆಸ್ಟ್​​ ಪಂದ್ಯವನ್ನು 8 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.

2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್​ 16 ಟೆಸ್ಟ್​ಗಳ ಬಳಿಕ ಮೊದಲ ಸೋಲು ಕಂಡಿದೆ. ಭಾರತ, ಪಾಕಿಸ್ತಾನ, ಮತ್ತು ಇಂಗ್ಲೆಂಡ್ ಅಂತಹ ಬಲಿಷ್ಠ ತಂಡಗಳ ವಿರುದ್ಧ ಏಕ ಪಕ್ಷೀಯ ಗೆಲುವು ಸಾಧಿಸಿದ್ದ ಕಿವೀಸ್​​ ತಂಡ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಮರೆಯಲಾಗದ ಸೋಲು ಕಂಡಿದೆ. ಇದು ನ್ಯೂಜಿಲ್ಯಾಂಡ್​ ನೆಲದಲ್ಲಿ ಬಾಂಗ್ಲಾದೇಶ ಸಾಧಿಸಿದ ಮೊದಲ ಅಂತಾರಾಷ್ಟ್ರೀಯ ಗೆಲುವಾಗಿದೆ.

ಕೇನ್​ ವಿಲಿಯಮ್ಸನ್​ ಅನುಪಸ್ಥಿತಿಯಲ್ಲಿ ಟಾಮ್​ ಲೇಥಮ್​ ಮುನ್ನಡೆಸಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್​ 328 ರನ್​ಗಳಿಸಿತ್ತು. ಡೆವೊನ್ ಕಾನ್ವೆ (122) ಶತಕ ಸಿಡಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

ಇನ್ನು 329 ರನ್​ಗಳನ್ನು ಹಿಂಬಾಲಿಸಿದ್ದ ಬಾಂಗ್ಲಾ ಟೈಗರ್ಸ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಹಸನ್​ ಜಾಯ್(78), ಶಂಟೋ(64),ಮೊಮಿನುಲ್ ಹಕ್​(88) ಮತ್ತು ಲಿಟನ್ ದಾಸ್​(86) ಅವರ ಅರ್ಧಶತಕದ ನೆರವಿನಿಂದ 458 ರನ್​ಗಳಿಸಿ 130 ರನ್​ಗಳ ಅಮೂಲ್ಯವಾದ ಮುನ್ನಡೆ ಪಡೆದುಕೊಂಡಿತ್ತು.

ಕಿವೀಸ್​ 169ಕ್ಕೆ ಆಲೌಟ್

130 ರನ್​ಗಳ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರಿಸಿದ್ದ ಕಿವೀಸ್ 4ನೇ ದಿನ 5 ವಿಕೆಟ್​ ಕಳೆದುಕೊಂಡು 147 ರನ್​ಗಳಿಸಿ 17 ರನ್​ಗಳ ಲೀಡ್ ಪಡೆದುಕೊಂಡಿತ್ತು. ಆದರೆ ಕೊನೆಯ ದಿನವಾದ ಇಂದು ನಿನ್ನೆಯ ಮೊತ್ತಕ್ಕೆ ಕೇವಲ 22 ರನ್​ಸೇರಿಸಿ 169 ಸರ್ವಪತನಕಂಡು, ಕೇವಲ 40 ರನ್​ಗಳ ಗುರಿ ನೀಡಿತ್ತು.

ವೇಗಿ ಎಬಾದತ್​ ಹುಸೇನ್ 46 ರನ್​ ನೀಡಿ 6 ವಿಕೆಟ್ ಪಡೆದು ಕಿವೀಸ್​ ಅಂತ್ಯಕ್ಕೆ ಕಾರಣರಾದರು. ಇವರಿಗೆ ಸಾಥ್ ನೀಡಿದ ತಸ್ಕಿನ್ ಅಹ್ಮದ್​ 36 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಇನ್ನು 40 ರನ್​ಗಳ ಸಾಧಾರಣ ಗಗುರಿ ಪಡೆದ ಬಾಂಗ್ಲಾದೇಶ ತಂಡ 16.5 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮೊಮಿನುಲ್ ಹಲ್​ ಅಜೇಯ 12 ರನ್​​ಗಳಿಸಿದರೆ, ನಜ್ಮುಲ್ ಹುಸೇನ್ ಶಂಟೊ 17 ರನ್​ಗಳಿಸಿದರು. 16 ಓವರ್​ಗಳಲ್ಲಿ ಗುರಿ ತಲುಪಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಜಯ ಸಾಧಿಸಿತು.

ಬಾಂಗ್ಲಾದೇಶ ಕಿವೀಸ್ ವಿರುದ್ಧ ಹಿಂದಿನ 15 ಟೆಸ್ಟ್​ ಪಂದ್ಯಗಳಲ್ಲಿ 12 ರಲ್ಲಿ ಸೋಲು ಮತ್ತು 3 ರಲ್ಲಿ ಡ್ರಾ ಸಾಧಿಸಿತ್ತು. ಇದೀಗ ಮೊದಲ ಬಾರಿಗೆ ನ್ಯೂಜಿಲ್ಯಾಂಡ್​ ತಂಡಕ್ಕೆ ಸೋಲುಣಿಸಿದೆ.

ಇದನ್ನೂ ಓದಿ:ಹರಿಣಗಳ ನಾಡಿನಲ್ಲಿ 7 ವಿಕೆಟ್​ ಪಡೆದ ಏಷ್ಯಾದ ಮೊದಲ ವೇಗಿ ಶಾರ್ದೂಲ್​ ಠಾಕೂರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.