ETV Bharat / sports

ನ್ಯೂಜಿಲೆಂಡ್‌ಗೆ 5ನೇ T20 ಪಂದ್ಯ ಗೆದ್ದ ಸಮಾಧಾನ: ಬಾಂಗ್ಲಾ ತಂಡಕ್ಕೆ 3-2ರಿಂದ ಸರಣಿ ಗೆದ್ದ ಸಂಭ್ರಮ

author img

By

Published : Sep 10, 2021, 7:32 PM IST

ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಬಾಂಗ್ಲಾದೇಶ 3-2 ಅಂತರದಿಂದ ಸರಣಿ ಗೆದ್ದುಕೊಂಡಿತು.

Bangaladesh vs New Zealand
Bangaladesh vs New Zealand

ಢಾಕಾ(ಬಾಂಗ್ಲಾದೇಶ): ಶೇರ್​ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಟಿ-20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 27 ರನ್​ಗಳ ಅಂತರದ ಗೆಲುವು ಸಾಧಿಸಿದೆ.

ಐದು ಪಂದ್ಯಗಳ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿರುವ ಬಾಂಗ್ಲಾದೇಶ 3-2 ಅಂತರದಿಂದ ಸರಣಿ ಗೆಲುವು ದಾಖಲಿಸಿದೆ. ಇನ್ನೊಂದೆಡೆ, ಬಾಂಗ್ಲಾ ತಂಡಕ್ಕಿದು ಕಿವೀಸ್​ ವಿರುದ್ಧ ದೊರೆತ ಚೊಚ್ಚಲ ಟಿ-20 ಸರಣಿ ಗೆಲುವಾಗಿದೆ.​

ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ನ್ಯೂಜಿಲ್ಯಾಂಡ್ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 161ರನ್​ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಫಿನ್​ ಅಲೆನ್​​ ಸ್ಫೋಟಕ 41 ರನ್​ ಹಾಗೂ ಕ್ಯಾಪ್ಟನ್​​ ಲಾಥಮ್​​ ಅಜೇಯ 50 ರನ್​ಗಳಿಕೆ ಮಾಡಿದರು. ಇವರಿಗೆ ನಿಕೋಲಸ್ ​​​(20 ರನ್​) ಹಾಗೂ ರವೀಂದ್ರ (17) ರನ್​ ಗಳಿಸಿ ಉತ್ತಮ ಸಾಥ್ ನೀಡಿದರು.

Latham
ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಕ್ಯಾಪ್ಟನ್​​ ಲಾಥಮ್​​

162 ರನ್​ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಿಟನ್​ ದಾಸ್​​ 10 ರನ್​ಗಳಿಕೆ ಮಾಡಿದ್ರೆ, ಇದಾದ ಬಳಿಕ ಬಂದ ಸೌಮ್ಯ ಸರ್ಕಾರ್ 4 ರನ್​, ಮುಸ್ತಫಿಜುರ್​​ 3 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. 23 ರನ್​ಗಳಿಕೆ ಮಾಡಿದ್ದ ಮೊಹಮ್ಮದ್​ ನಯೀಮ್ ಕೂಡ ಬೆನ್​​​ ಸಿರ್ಸಾ ಓವರ್​​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒಂದಾದ ಹುಸೈನ್​​ (49 ರನ್​) ಹಾಗೂ ಕ್ಯಾಪ್ಟನ್ ಮುಹ್ಮದುಲ್ಲಾ (23 ರನ್​) ತಂಡಕ್ಕೆ ಆಸರೆಯಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.

ಇದನ್ನೂ ಓದಿ: ನಾಳೆ ಮ್ಯಾಂಚೆಸ್ಟರ್‌ನಿಂದ ದುಬೈಗೆ ಸಿಎಸ್‌ಕೆ ಆಟಗಾರರ ಪ್ರಯಾಣ?: ಸಿಇಒ ಹೇಳಿದ್ದೇನು..

ತಂಡ ಕೊನೆಯದಾಗಿ 8 ವಿಕೆಟ್​​ ನಷ್ಟಕ್ಕೆ 134 ರನ್​ ಗಳಿಕೆ ಮಾಡುವಲ್ಲಿ ಮಾತ್ರ ಶಕ್ತವಾಯಿತು. ಹೀಗಾಗಿ 27ರನ್​ಗಳ ಅಂತರದ ಸೋಲು ಕಂಡಿದೆ. ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದ್ದ ಕಾರಣ ಬಾಂಗ್ಲಾದೇಶ ಶಕೀಬ್​ ಅಲ್​ ಹಸನ್​, ಮುಸ್ತುಫಿಜುರ್​​ಗೆ ವಿಶ್ರಾಂತಿ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.