ದುಬೈ: ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳು ಆರಂಭಗೊಳ್ಳಲಿದ್ದು, ಬಹುತೇಕ ಎಲ್ಲ ಪ್ಲೇಯರ್ಸ್ ಈಗಾಗಲೇ ದುಬೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಇಬ್ಬರು ವಿದೇಶಿ ಪ್ಲೇಯರ್ಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೈರ್ಸ್ಟೋವ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ ಡೇವಿಡ್ ಮಲನ್ ಐಪಿಎಲ್ನಿಂದ ಹೊರಗುಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ವೈಯಕ್ತಿಕ ಕಾರಣ ನೀಡಿ, ಉಳಿದ ಐಪಿಎಲ್ ಪಂದ್ಯಗಳಿಂದ ಹೊರಗೆ ಉಳಿಯುತ್ತಿರುವುದಾಗಿ ಇಬ್ಬರು ಪ್ಲೇಯರ್ಸ್ ಘೋಷಣೆ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಆಲ್ರೌಂಡರ್ ಕ್ರಿಸ್ ವೋಕ್ಸ್ ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಸರಿದಿದ್ದಾರೆ
ಇದನ್ನೂ ಓದಿರಿ: ಟೆಸ್ಟ್ ಪಂದ್ಯ ರದ್ದು ಬೆನ್ನಲ್ಲೇ ದುಬೈಗೆ ಬಂದಿಳಿದ ರೋಹಿತ್, ಜಸ್ಪ್ರೀತ್ ಬುಮ್ರಾ
ಈ ಇಬ್ಬರು ಪ್ಲೇಯರ್ಸ್ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಕಾರಣ, ಇಂದು ಮ್ಯಾಂಚೆಸ್ಟರ್ನಿಂದ ದುಬೈಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ, ವೈಯಕ್ತಿಕ ಕಾರಣ ನೀಡಿ, ಟೂರ್ನಿಯಿಂದ ಹೊರಗುಳಿಯುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದಿನಿಂದಲೂ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಬೈರ್ಸ್ಟೋವ್ ಹಾಗೂ ಕಳೆದ ಆವೃತ್ತಿಯಿಂದ ಪಂಜಾಬ್ ತಂಡ ಸೇರಿಕೊಂಡಿರುವ ಟಿ-20 ನಂಬರ್ 1 ಬ್ಯಾಟ್ಸ್ಮನ್ ಮಲನ್ ಇದೀಗ ದಿಢೀರ್ ಆಗಿ ಈ ನಿರ್ಧಾರ ಕೈಗೊಂಡಿದ್ದಾರೆ.
ಮರ್ಕ್ರಾಮ್ಗೆ ಚಾನ್ಸ್ ನೀಡಿದ ಪಂಜಾಬ್
ತಂಡದಿಂದ ಡೇವಿಡ್ ಮಲನ್ ಹೊರಗುಳಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮರ್ಕ್ರಾಮ್ಗೆ ಪಂಜಾಬ್ ತಂಡ ಮಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪಂಜಾಬ್ ಮಾಹಿತಿ ಹಂಚಿಕೊಂಡಿದೆ.