ETV Bharat / sports

ಇಂಗ್ಲೆಂಡ್ ವಿರುದ್ಧ ಸೋತ ಪಾಕ್‌ 'ಸಾಧಾರಣ ತಂಡ' ಎಂದು ಟೀಕಿಸಿದ ಅಖ್ತರ್​; ಬಾಬರ್ ಅಜಮ್ ತಿರುಗೇಟು - ಬಾಬರ್ ಅಜಮ್ vs ಶೋಯಬ್ ಅಖ್ತರ್

ಮಂಗಳವಾರ ನಡೆದ ಪಂದ್ಯದಲ್ಲಿ 331 ರನ್​ಗಳಿಸಿಯೂ ಇಂಗ್ಲೆಂಡ್ ದ್ವಿತೀಯ ದರ್ಜೆ ತಂಡದ ವಿರುದ್ಧ ಪಾಕಿಸ್ತಾನ ಸೋಲು ಕಂಡಿತು. ವೇಗದ ಬೌಲರ್​​ಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿ ತಂಡವೆನಿಸಿಕೊಂಡಿರುವ ಪಾಕಿಸ್ತಾನ ಬಿ ತಂಡದ ಬ್ಯಾಟ್ಸ್​ಮನ್​ಗಳ ವಿರುದ್ಧ ಕಳಪೆ ಪ್ರದರ್ಶನ ತೋರಿ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಶೋಯಬ್ ಅಖ್ತರ್
ಶೋಯಬ್ ಅಖ್ತರ್
author img

By

Published : Jul 14, 2021, 6:54 PM IST

ನವದೆಹಲಿ: ಪಾಕಿಸ್ತಾನ ತಂಡದಲ್ಲಿ ಸ್ಟಾರ್ ಆಟಗಾರರಿಲ್ಲ. ಅದೊಂದು 'ಸಾಧಾರಣ ತಂಡ' ಎಂದು ಟೀಕಿಸಿದ್ದ ಮಾಜಿ ವೇಗದ ಬೌಲರ್​ ಶೋಯಬ್ ಅಖ್ತರ್​ ಕಮೆಂಟ್​ಗೆ ಪ್ರತಿಕ್ರಿಯಿಸಿರುವ ನಾಯಕ ಬಾಬರ್ ಅಜಮ್, ಯಾರು ಸ್ಟಾರ್​ ಆಟಗಾರರು, ಯಾರು ಅಲ್ಲ ಎಂಬುದನ್ನು ಅವರ ಬಳಿ ನೀವೇ ಕೇಳಿ? ಎಂದು ತಿರುಗೇಟು ನೀಡಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ 331 ರನ್​ ಗಳಿಸಿಯೂ ಇಂಗ್ಲೆಂಡ್ ದ್ವಿತೀಯ ದರ್ಜೆ ತಂಡದ ವಿರುದ್ಧ ಪಾಕಿಸ್ತಾನ ಸೋಲು ಕಂಡಿದೆ. ವೇಗದ ಬೌಲರ್​​ಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿ ತಂಡವೆನಿಸಿಕೊಂಡಿರುವ ಪಾಕಿಸ್ತಾನ ಬಿ ತಂಡದ ಬ್ಯಾಟ್ಸ್​ಮನ್​ಗಳ ವಿರುದ್ಧ ಕಳಪೆ ಪ್ರದರ್ಶನ ತೋರಿ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ನಿನ್ನೆಯ ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದ ಅಖ್ತರ್​, ಇದು ಅವಮಾನಕರ ಪ್ರದರ್ಶನ, ನಮ್ಮದೊಂದು ಸಾಧಾರಣ ಮಂಡಳಿ, ಅದಕ್ಕೆ ಸಾಧಾರಣ ಜನರನ್ನೇ ಕರೆತರುತ್ತಿದೆ. ಹಾಗಾಗಿ ಸರಾಸರಿ ತಂಡವನ್ನು ಕಟ್ಟಿದೆ. ನೀವು ಇಂತಹ ಜನರಿಂದ ಅಸಾಧಾರಣ ಪ್ರದರ್ಶನವನ್ನು ನಿರೀಕ್ಷಿಸುವ ಹಾಗಿಲ್ಲ. ಈ ತಂಡದಲ್ಲಿ ಯಾವುದೇ ಸ್ಟಾರ್​ ಯುವ ಆಟಗಾರನಿಲ್ಲ ಎಂದು ಕಿಡಿಕಾರಿದ್ದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಬಾಬರ್, ಸ್ಟಾರ್ ಆಟಗಾರರೆಂದರೆ ಯಾರು ಹೇಳಿ. ನಮ್ಮ ತಂಡದಲ್ಲಿ ಎಲ್ಲಾ ಆಟಗಾರರು ಶೇ.100ರಷ್ಟು ಪ್ರಯತ್ನ ಮಾಡುತ್ತಾರೆ. ಹಾಗಾಗಿ ಸ್ಟಾರ್​ ಆಟಗಾರರೆಂದರೆ ಯಾರು ಅಥವಾ ಯಾರು ಅಲ್ಲ ಎನ್ನುವುದನ್ನು ನೀವು ಅವರನ್ನೇ ಕೇಳಿ, ನಾನು ಈ ಕುರಿತು ವಾದ ಅಥವಾ ಕಮೆಂಟ್ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಫ್ರಿದಿ ವಿರುದ್ಧ ಕಿಡಿ ಕಾರಿದ ದಾನಿಸ್ ಕನೇರಿಯಾ

ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಸ್ ಕನೇರಿಯಾ ಕೂಡ ಪಾಕಿಸ್ತಾನದ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ. ತಂಡದಲ್ಲಿ ಪ್ರಮುಖ ಬೌಲರ್ ಎಂದು ಕರೆಸಿಕೊಳ್ಳುವ ಶಹೀನ್ ಶಾ ಆಫ್ರಿದಿಯನ್ನು ಅವನೆಂತಹ ಏಸ್​ ಬೌಲರ್​, ಪೀಟರ್ ಸಾಲ್ಟ್​, ಗ್ರೆಗೊರಿ, ವಿನ್ಸ್​ ಯಾವ ರೀತಿ ಆತನನ್ನು ದಂಡಿಸಿದರು ನೋಡಿದ್ರಲ್ಲಾ. ಮೊದಲು ಆತ ತನ್ನ ನಡವಳಿಕೆಯನ್ನು ಸುಧಾರಿಸಿಕೊಳ್ಳಬೇಕು. ಹಿರಿಯರನ್ನು ಗೌರವಿಸದಿದ್ದಾಗ ಇಂತಹದ್ದೆಲ್ಲಾ ಸಂಭವಿಸುತ್ತದೆ ಎಂದು ಯುವ ವೇಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ ದಾಳಿಗೆ ಬೆದರಿದ ಪಾಕ್​... ಏಕದಿನ ಸರಣಿಯಲ್ಲಿ 3-0 ಅಂತರದಿಂದ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.