ETV Bharat / sports

ಬಾಬರ್​ 'ಅಧಿಕಾರವಿಲ್ಲದ ಕ್ಯಾಪ್ಟನ್' ಹೇಳಿಕೆ: ಶೋಯೆಬ್​ ಮಲಿಕ್​ ವಿರುದ್ಧ ವಾಗ್ದಾಳಿ

ತಾವೊಬ್ಬ ಅಧಿಕಾರವಿಲ್ಲದ ಕ್ಯಾಪ್ಟನ್​ ಎಂಬ ಹೇಳಿಕೆ ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಇದು ಇಲ್ಲಿಗೆ ಕೊನೆಗೊಳ್ಳಬೇಕು ಎಂದು ಪಾಕ್​ ಕ್ಯಾಪ್ಟನ್​ ಬಾಬರ್​ ಅಜಮ್ ಹೇಳಿದ್ದಾರೆ.

author img

By

Published : Apr 28, 2021, 8:35 PM IST

Babar Azam
Babar Azam

​ಕರಾಚಿ: ಪಾಕಿಸ್ತಾನದ ಕ್ಯಾಪ್ಟನ್​ ಬಾಬರ್​ ಅಜಮ್​ ಅಧಿಕಾರವಿಲ್ಲದ ನಾಯಕನಾಗಿದ್ದಾನೆಂದು ಇತ್ತೀಚೆಗೆ ಪಾಕ್​ ಮಾಜಿ ಕ್ಯಾಪ್ಟನ್​ ಶೋಯೆಬ್​ ಮಲಿಕ್​​ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಅವರ ಹೇಳಿಕೆಗೆ ಬಾಬರ್​​ ತಿರುಗೇಟು ನೀಡಿದ್ದಾರೆ.

ತಂಡ ಮತ್ತು ಆಯ್ಕೆ ವಿಷಯಗಳಲ್ಲಿ ತನಗೆ ಸಂಪೂರ್ಣ ನಿಯಂತ್ರಣವಿದೆ. ಮುಖ್ಯ ಕೋಚ್​​​ ಮಿಸ್ಬಾ -ಉಲ್​-ಹಕ್​ ಅವರಿಂದ ನಿರ್ದೇಶನ ಪಡೆದುಕೊಳ್ಳುತ್ತಿರುತ್ತೇನೆ ಎಂದಿದ್ದಾರೆ. ವರ್ಚುಯಲ್​ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಬಾಬರ್​, ನನಗೆ ಅರ್ಥವಾಗುತ್ತಿಲ್ಲ. ಸುದ್ದಿಗೋಷ್ಠಿ ವೇಳೆ ನನಗೆ ಅಧಿಕಾರವಿಲ್ಲ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಇದು ಕೊನೆಗೊಳ್ಳಬೇಕು ಎಂದರು.

ಇದನ್ನೂ ಓದಿ: ಚೆನ್ನೈ ವರ್ಸಸ್​ ಹೈದರಾಬಾದ್​: ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೇವಿಡ್​ ಪಡೆ

ನಾನು ತಂಡದ ಮೇಲೆ ನಿಯಂತ್ರಣ ಹೊಂದಿದ್ದೇನೆ. ತಂಡದ ಆಯ್ಕೆ ಹಾಗೂ ಇತರ ವಿಷಯಗಳಲ್ಲಿ ಮಾಹಿತಿ ನೀಡುತ್ತೇನೆ. ಮೈದಾನದಲ್ಲಿ ಎಲ್ಲವನ್ನೂ ನಿಭಾಯಿಸುತ್ತೇನೆ. ಆಡುವ 11ರ ಬಳಗದ ಬಗ್ಗೆ ನಾನೇ ಫೈನಲ್​​ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ನಾಯಕನಾಗಿ ನನ್ನ ಜವಾಬ್ದಾರಿಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ತಂಡದ ಮುಖ್ಯ ಕೋಚ್​​​ನೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ.

ಆಡಳಿತ ಮಂಡಳಿ ತಂಡದ ಪ್ರತಿಯೊಬ್ಬ ಆಟಗಾರನ ಬೆಂಬಲಕ್ಕಿದೆ. ಅದು ನನಗೆ ಸಂತೋಷ ನೀಡಿದೆ ಎಂದರು. ಗುರುವಾರದಿಂದ ಜಿಂಬಾಬ್ವೆ ವಿರುದ್ಧ ಟೆಸ್ಟ್​ ಸರಣಿ ಆರಂಭಗೊಳ್ಳುತ್ತಿದ್ದು, ತಂಡಕ್ಕೆ ಇದು ಸುಲಭ ಕೆಲಸವಲ್ಲ. ಉತ್ತಮ ಪ್ರದರ್ಶನ ನೀಡುವ ಇರಾದೆ ಇದೆ ಎಂದರು. ಟೆಸ್ಟ್​ ಶ್ರೇಯಾಂಕದಲ್ಲಿ ಜಿಂಬಾಬ್ವೆ ಕಡಿಮೆ ಅಂತರ ಹೊಂದಿರಬಹುದು. ಆದರೆ ಯಾವುದೇ ತಂಡವನ್ನ ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.