ದುಬೈ(ಯುಎಇ): ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಾಳೆ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಬಹುನೀರೀಕ್ಷಿತ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಆಜಂ ಅವರ ಕುರಿತು ಗುಣಗಾನ ಮಾಡಿದ್ದಾರೆ.
2019ರ ವಿಶ್ವಕಪ್ ವೇಳೆ ಬಾಬರ್ ಆಜಂ ಅವರನ್ನು ತಾವು ಮೊದಲ ಸಲ ಭೇಟಿಯಾಗಿದ್ದಕ್ಕಾಗಿ ಕೊಹ್ಲಿ ಹೇಳಿಕೊಂಡಿದ್ದು, ಅವರು ಯಾವಾಗಲೂ ಗೌರವದಿಂದ ನಡೆದುಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಪ್ಲೇಯರ್ ಪ್ರಸ್ತುತ ಮೂರು ಫಾರ್ಮೆಟ್ನಲ್ಲಿ ವಿಶ್ವದ ಅಗ್ರ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.
-
Up close and personal with @imVkohli!
— BCCI (@BCCI) August 27, 2022 " class="align-text-top noRightClick twitterSection" data="
Coming back from a break, Virat Kohli speaks about the introspection, the realisation and his way forward! 👍
Full interview coming up on https://t.co/Z3MPyeKtDz 🎥
Watch this space for more ⌛️ #TeamIndia | #AsiaCup2022 | #AsiaCup pic.twitter.com/fzZS2XH1r1
">Up close and personal with @imVkohli!
— BCCI (@BCCI) August 27, 2022
Coming back from a break, Virat Kohli speaks about the introspection, the realisation and his way forward! 👍
Full interview coming up on https://t.co/Z3MPyeKtDz 🎥
Watch this space for more ⌛️ #TeamIndia | #AsiaCup2022 | #AsiaCup pic.twitter.com/fzZS2XH1r1Up close and personal with @imVkohli!
— BCCI (@BCCI) August 27, 2022
Coming back from a break, Virat Kohli speaks about the introspection, the realisation and his way forward! 👍
Full interview coming up on https://t.co/Z3MPyeKtDz 🎥
Watch this space for more ⌛️ #TeamIndia | #AsiaCup2022 | #AsiaCup pic.twitter.com/fzZS2XH1r1
ಇದನ್ನೂ ಓದಿ: Asia Cup 2022: ನಾಳೆ ಹೈವೋಲ್ಟೇಜ್ ಪಂದ್ಯ.. ಮಾತುಕತೆಯಲ್ಲಿ ಮಗ್ನರಾದ ಬಾಬರ್-ರೋಹಿತ್
ವಿಶ್ವ ಕ್ರಿಕೆಟ್ಗೆ ಅಗತ್ಯವಿರುವ ರೀತಿಯಲ್ಲೇ ಅವರು ಬ್ಯಾಟ್ ಮಾಡ್ತಿದ್ದು, 2019ರ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯದ ಬಳಿಕ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ನಾವಿಬ್ಬರು ಒಟ್ಟಿಗೆ ಕುಳಿತುಕೊಂಡು ಕ್ರಿಕೆಟ್ ಬಗ್ಗೆ ಮಾತನಾಡಿದ್ದೇವೆ. ಸಾಕಷ್ಟು ಗೌರವ ನೀಡುವುದನ್ನು ನಾನು ಕಂಡಿದ್ದೇನೆ. ಪ್ರಸ್ತುತ ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಅವರು ವಿಶ್ವದ ಅಗ್ರ ಬ್ಯಾಟರ್ ಆಗಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿ ನಾನು ಆನಂದಿಸಿದ್ದೇನೆ. ವಿಶ್ವದ ಅಗ್ರ ಬ್ಯಾಟರ್ ಆಗಿರುವ ಬಾಬರ್ ಆಜಂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆyನ್ನು ನಾನು ನೋಡಿಲ್ಲ. ಅವರ ಕ್ರಿಕೆಟ್ ಬುನಾದಿ ತುಂಬಾ ಗಟ್ಟಿಯಾಗಿದೆ. ಅದು ಬಹಳಷ್ಟು ಜನರಿಗೆ ಪ್ರೇರಕವಾಗಿದೆ ಎಂದು ಬಣ್ಣಿಸಿದರು.
ಏಷ್ಯಾಕಪ್ನಲ್ಲಿ ಭಾರತ- ಪಾಕಿಸ್ತಾನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿವೆ. ಕಳೆದ ಎರಡು ದಿನಗಳ ಹಿಂದೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಜಂ ಕೆಲಹೊತ್ತು ಮಾತುಕತೆ ನಡೆಸಿದ್ದರು.