ETV Bharat / sports

ಐಪಿಎಲ್​ನಲ್ಲಿ ಯುವ ಆಟಗಾರರ ದರ್ಬಾರ್​.. ಭೀತಿಯಿಲ್ಲದೆ ಬ್ಯಾಟ್ ಬೀಸುವ ಉದಯೋನ್ಮುಖ ಕ್ರಿಕೆಟಿಗರು..

ಆಯುಷ್ ಬದೋನಿ ಐಪಿಎಲ್​ಗೆ ಪದಾರ್ಪಣೆ ಮಾಡುವ ಮುನ್ನ ಟಿ20 ಕ್ರಿಕೆಟ್​​ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಅವರು 5ರೊಳಗೆ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಕೇವಲ 8 ರನ್​ಗಳಿಸಿದ್ದರು. ಆದರೆ, ಗೌತಮ್​ ಗಂಭೀರ್​ ಆತನ ಟ್ರಯಲ್ಸ್​ನಲ್ಲಿ ಮೆಚ್ಚಿ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದ್ದರು..

author img

By

Published : Apr 9, 2022, 5:07 PM IST

Tilak Varma and Ayush Badoni
Tilak Varma and Ayush Badoni

ಮುಂಬೈ : 15ನೇ ಆವೃತ್ತಿ ಈಗಾಗಲೇ ಭರ್ಜರಿಯಾಗಿ ಆರಂಭ ಕಂಡು ಮುನ್ನುಗ್ಗುತ್ತಿದೆ. ಎಂದಿನಂತೆ ಈ ಬಾರಿಯೂ ಕೆಲವು ಯುವ ಪ್ರತಿಭೆಗಗಳು ತಂಡದಲ್ಲಿ ಅವಕಾಶ ಪಡೆದಿದ್ದು, ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಹೊಸ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ತಂಡದ ಯುವ ಬ್ಯಾಟರ್​ ಆಯುಷ್ ಬದೋನಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಐಪಿಎಲ್​ 2022ರ ಆಕರ್ಷಣೆಯಾಗಿದ್ದಾರೆ.

ಆಯುಷ್ ಬದೋನಿ ಐಪಿಎಲ್​ಗೆ ಪದಾರ್ಪಣೆ ಮಾಡುವ ಮುನ್ನ ಟಿ20 ಕ್ರಿಕೆಟ್​​ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಅವರು 5ರೊಳಗೆ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಕೇವಲ 8 ರನ್​ಗಳಿಸಿದ್ದರು. ಆದರೆ, ಗೌತಮ್​ ಗಂಭೀರ್​ ಆತನ ಟ್ರಯಲ್ಸ್​ನಲ್ಲಿ ಮೆಚ್ಚಿ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದ್ದರು.

ಇದೀಗ ಬದೋನಿ ಆಡಿರುವ 4 ಪಂದ್ಯಗಳಲ್ಲಿ 157ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಕ್ರಮವಾಗಿ 54(41), 19(9), 19(12) ಮತ್ತು 10(3) ರನ್​ಗಳಿಸಿದ್ದಾರೆ. ಸಂದರ್ಭದಕ್ಕೆ ತಕ್ಕಂತೆ ಬ್ಯಾಟ್​ ಬೀಸುವ ಬದೋನಿ ಮೊದಲ ಪಂದ್ಯದಲ್ಲಿ ತಂಡ 4 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಿಡಿಸಿದರೆ, ಕಳೆದ ಪಂದ್ಯದಲ್ಲಿ ಕೊನೆಯ ಓವರ್​ನಲ್ಲಿ ಬೌಂಡರಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದ್ದರು.

ಬದೋನಿಯನ್ನು ಮಿನಿ ಎಬಿಡಿ ಎಂದು ಪ್ರಶಂಸಿಸಿರುವ ತಂಡದ ನಾಯಕ ಕೆಎಲ್ ರಾಹುಲ್ ಹಾಗೂ ಯುವ ಆಟಗಾರನನ್ನು ತಂಡಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಮೆಂಟರ್ ಗಂಭೀರ್​ ಮತ್ತಷ್ಟು ಪಂದ್ಯಗಳಲ್ಲಿ ಅವಕಾಶ ನೀಡುವುದಕ್ಕೆ ಉತ್ಸುಕರಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ ನಲ್ಲಿ ಉದಯಿಸಿರುವ ಮತ್ತೊಂದು ಪ್ರತಿಭೆಯೆಂದರೆ ಮುಂಬೈ ಇಂಡಿಯನ್ಸ್​​ನ ತಿಲಕ್ ವರ್ಮಾ. ಹೈದರಾಬಾದ್​ ತಂಡದ ಪರ ಆಡುವ 2020ರ ಅಂಡರ್ 19 ಸ್ಟಾರ್​, ಈ ಬಾರಿ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಆಡುತ್ತಿದ್ದಾರೆ.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆತ ಆಡಿರುವ 3 ಇನ್ನಿಂಗ್ಸ್​ಗಳಲ್ಲಿ 22(15), 61(33) ಮತ್ತು 38(27) ರನ್​ಗಳಿಸಿದ್ದಾರೆ. 4 ಮತ್ತು 5ನೇ ಕ್ರಮಾಂಕದಲ್ಲಿ ಯಾವುದಾದರೂ ಹೊಂದಿಕೊಳ್ಳುವ ಯುವ ಆಟಗಾರ ದೊಡ್ಡ ಹೊಡೆತಗಳನ್ನು ಬಾರಿಸುವುದರಲ್ಲಿ ಯಾವುದೇ ಸ್ಟಾರ್​ ಆಟಗಾರನಿಗೂ ಕಮ್ಮಿಯೇನಲ್ಲ. 164ರ ಸ್ಟ್ರೈಕ್​ ರೇಟ್​​ನಲ್ಲಿ ಬ್ಯಾಟ್​ ಬೀಸುತ್ತಿರುವ ಯುವ ಆಟಗಾರ ಈ ಬಾರಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಯ ರೇಸ್​ನಲ್ಲಿದ್ದಾರೆ.

ಇವರಲ್ಲದೆ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಾಡುತ್ತಿರುವ ದರ್ಶನ್ ನಾಲ್ಕಂಡೆ, ಜಿತೇಶ್ ಶರ್ಮಾ ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಐಪಿಎಲ್ ಕೇವಲ ಶ್ರೀಮಂತ ಕ್ರಿಕೆಟ್​ ಲೀಗ್​ ಮಾತ್ರವಲ್ಲ, ಪ್ರತಿಭೆಗಳನ್ನು ಹೊರ ತೆಗೆಯುವ ಒಂದು ಅದ್ಭುತ ಕ್ರಿಕೆಟ್​ ಲೀಗ್​ ಎನ್ನುವುದಕ್ಕೆ ಈ ಆಟಗಾರರು ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ:ಧೋನಿ ಸಾಧನೆಯನ್ನು ಸರಿಗಟ್ಟಿದ ತೆವಾಟಿಯಾ.. ಯಾವ ದಾಖಲೆ ಅದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.