ಬ್ರಿಸ್ಬೇನ್: ಉತ್ತಮ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ಶಿಶು ಐರ್ಲೆಂಡ್ ಸೋಲನ್ನಪ್ಪಿದೆ. 42 ರನ್‌ಗಳ ಗೆಲುವು ಸಾಧಿಸಿದ ಬಲಿಷ್ಟ ಆಸ್ಟ್ರೇಲಿಯಾ ಗುಂಪು-1ರ ಅಂಕಪಟ್ಟಿಯಲ್ಲಿ ಸ್ಥಾನ ಬದಲಾವಣೆ ಮಾಡಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. 180 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ 137 ರನ್ ಗಳಿಸಿ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸಿತು.
-
Australia complete a fine win to keep semi-final hopes alive 💪#T20WorldCup | #AUSvIRE | 📝: https://t.co/CW4eQlDZGZ pic.twitter.com/WdUP4gLfZE
— ICC (@ICC) October 31, 2022 " class="align-text-top noRightClick twitterSection" data="
">Australia complete a fine win to keep semi-final hopes alive 💪#T20WorldCup | #AUSvIRE | 📝: https://t.co/CW4eQlDZGZ pic.twitter.com/WdUP4gLfZE
— ICC (@ICC) October 31, 2022Australia complete a fine win to keep semi-final hopes alive 💪#T20WorldCup | #AUSvIRE | 📝: https://t.co/CW4eQlDZGZ pic.twitter.com/WdUP4gLfZE
— ICC (@ICC) October 31, 2022
ಕೊನೆಯವರೆಗೂ ದಿಟ್ಟ ಹಾರಾಟ ನಡೆಸಿದ ಐರ್ಲೆಂಡ್ ಆಟಗಾರ ಲೋರ್ಕನ್ ಟಕರ್ 48 ಎಸೆತಳಲ್ಲಿ 71 ರನ್ ಗಳಿಸಿ ತಂಡದ ಗೌರವಕ್ಕೆ ಪಾತ್ರರಾದರು. ಇನ್ನುಳಿದಂತೆ, ಪಾಲ್ ಸ್ಟಿರ್ಲಿಂಗ್ 11, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 6, ಹ್ಯಾರಿ ಟೆಕ್ಟರ್ 6, ಗರೆಥ್ ಡೆಲಾನಿ 14, ಮಾರ್ಕ್ ಅಡೇರ್ 11, ಫಿಯಾನ್ ಹ್ಯಾಂಡ್ 6 ರನ್ಗಳಿಸಿದರೆ ಉಳಿದವರು ಸಣ್ಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಜಂಪಾ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 179 ರನ್ ಗಳಿಸಿತು. ನಾಯಕ ಆ್ಯರನ್ ಫಿಂಚ್ 44 ಎಸೆತಗಳಲ್ಲಿ 63 ರನ್ ಗಳಿಸಿದ ಉತ್ತಮ ತಳಪಾಯ ಹಾಕಿಕೊಟ್ಟರು. ಮಿಚೆಲ್ ಮಾರ್ಷ್ (28), ಗ್ಲೆನ್ ಮ್ಯಾಕ್ಸ್‌ವೆಲ್ (13), ಮಾರ್ಕಸ್ ಸ್ಟೊಯಿನಿಸ್ (35), ಟಿಮ್ ಡೇವಿಡ್ (15) ಮತ್ತು ಮ್ಯಾಥ್ಯೂ ವೇಡ್ (7) ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ 29 ರನ್‌ಗಳಿಗೆ 3, ಜೋಶುವಾ ಲಿಟಲ್ 21 ರನ್‌ಗಳಿಗೆ 2 ವಿಕೆಟ್ ಪಡೆದರು.
ಇದನ್ನೂ ಓದಿ: ಎಫ್ಐಎಚ್ ಪ್ರೊ ಲೀಗ್: ಭಾರತಕ್ಕೆ ಕೊನೆ ಕ್ಷಣದಲ್ಲಿ ಸ್ಪೇನ್ ಚಮಕ್.. 3-2 ರಲ್ಲಿ ಭಾರತೀಯರಿಗೆ ಸೋಲು