ದುಬೈ : ಮೊದಲ ಬಾರಿಗೆ ಟಿ-20 ವಿಶ್ವಕಪ್ಗೆ ಮುತ್ತಿಕ್ಕಿರುವ ಆಸ್ಟ್ರೇಲಿಯಾ ಆಟಗಾರರು (Australia Celebration T-20) ದುಬೈ ಮೈದಾನದಲ್ಲಿ ವಿಜಯೋತ್ಸವ ಆಚರಿಸಿದರು. ಇವರ ಈ ವಿಭಿನ್ನ ಸಂಭ್ರಮಾಚರಣೆ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ. ಶೂಗಳಲ್ಲಿ ಕೂಲ್ ಡ್ರಿಂಕ್ (Cool Drink) ಸುರಿದುಕೊಂಡು ಸೇವಿಸಿದ ಆಟಗಾರರು ಅಚ್ಚರಿ ಮೂಡಿಸಿದ್ದಾರೆ.
- " class="align-text-top noRightClick twitterSection" data="
">
ಡ್ರೆಸ್ಸಿಂಗ್ ಕೋಣೆಯನ್ನು ಆಸ್ಟ್ರೇಲಿಯಾ ತಂಡದ ಆಟಗಾರರು (Australian men's team) ಸುತ್ತುವರೆದರು. ಈ ವೇಳೆ, ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಮತ್ತು ಆಲ್ರೌಂಡರ್ ಸ್ಟೊಯಿನಿಸ್ ಶೂಗೆ ತಂಪು ಪಾನೀಯವನ್ನು ಸುರಿದು ಕುಡಿಯುವ ಮೂಲಕ ಅಚ್ಚರಿಗೆ ಗುರಿಯಾದರು. ವಿಡಿಯೋ ಸಾಮಾಜಿಕ ಜಾಲತಾಣ (Social network) ದಲ್ಲಿ ವೈರಲ್ ಆಗುತ್ತಿದೆ.
ಕಿವೀಸ್ ನೀಡಿದ್ದ 173 ರನ್ಗಳ ಟಾರ್ಗೆಟ್ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ 18.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 173 ರನ್ ಸಿಡಿಸಿ ಪಂದ್ಯ ಗೆದ್ದುಕೊಂಡಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್ ಅನ್ನು ಎತ್ತಿ ಹಿಡಿದ ಆಸೀಸ್ ಆಟಗಾರರು ಈ ಸಂಭ್ರಮಾಚರಣೆಗೂ ಮುನ್ನ ಮೈದಾನದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ: India vs New Zealand: ಟೆಸ್ಟ್ ಸರಣಿಗೆ ಆಯ್ಕೆಯಾಗದ ಹನುಮ ವಿಹಾರಿ; ಕಾರಣ ತಿಳಿಸಿದ ಸುನಿಲ್ ಗವಾಸ್ಕರ್