ಕ್ವೀನ್ಸ್ಲ್ಯಾಂಡ್: ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರವ ಮೊದಲ ಟಿ-20 ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗುತ್ತಿದ್ದು, 15.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 131ರನ್ಗಳಿಸಿದೆ. ತುಂತುರು ಮಳೆ ಆರಂಭವಾಗಿರುವುದರಿಂದ ಪಂದ್ಯ ಸ್ಥಗಿತಗೊಂಡಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳೆಯರಿಗೆ ಪ್ರಬಲ ಹೋರಾಟ ನೀಡಿದ್ದ ಭಾರತೀಯ ಪಡೆ 1-2ರಲ್ಲಿ ಸರಣಿ ಕಳೆದುಕೊಂಡಿತ್ತು. ಇನ್ನು ಟೆಸ್ಟ್ ಪಂದ್ಯ ಡ್ರಾ ಗೊಂಡರೂ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತೀಯ ವನಿತೆಯರು ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಇದೀಗ ಟಿ-20ಯಲ್ಲಿ ಅದೇ ಉತ್ಸಾಹದಿಂದ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದೆ.
-
India have put up a score of 130/4 after 15 overs.
— ICC (@ICC) October 7, 2021 " class="align-text-top noRightClick twitterSection" data="
How many runs will they add to their total? 🤔
📺 Watch the match live on https://t.co/CPDKNxoJ9v in select regions!#AUSvIND | https://t.co/f3OvaYZ2K1 pic.twitter.com/pPt1ITh1K3
">India have put up a score of 130/4 after 15 overs.
— ICC (@ICC) October 7, 2021
How many runs will they add to their total? 🤔
📺 Watch the match live on https://t.co/CPDKNxoJ9v in select regions!#AUSvIND | https://t.co/f3OvaYZ2K1 pic.twitter.com/pPt1ITh1K3India have put up a score of 130/4 after 15 overs.
— ICC (@ICC) October 7, 2021
How many runs will they add to their total? 🤔
📺 Watch the match live on https://t.co/CPDKNxoJ9v in select regions!#AUSvIND | https://t.co/f3OvaYZ2K1 pic.twitter.com/pPt1ITh1K3
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೌರ್ ಪಡೆ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ಗೆ ಮುಂದಾಗಿ ಕೈ ಸುಟ್ಟುಕೊಂಡಿತು. ಸ್ಮೃತಿ ಮಂದಾನ 10 ಎಸೆತಗಳಲ್ಲಿ 17 ಮತ್ತು ಶೆಫಾಲಿ ವರ್ಮಾ 14 ಎಸೆತಗಳಲ್ಲಿ 3 ಸಿಕ್ಸರ್ಗಳ ಸಹಿತ 18 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇವರಿಬ್ಬರ ನಂತರ ಬಂದ ನಾಯಕಿ ಹರ್ಮನ್ಪ್ರೀತ್ ಕೌರ್(12) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, 4ನೇ ವಿಕೆಟ್ಗೆ ಜೊತೆಯಾದ ಯಸ್ತಿಕಾ ಭಾಟಿಯಾ ಮತ್ತು ಜಮೀಮಾ ರೋಡ್ರಿಗಸ್ 51 ರನ್ಗಳ ಜೊತೆಯಾಟ ನಡೆಸಿದರು. ಈ ಸಂದರ್ಭದಲ್ಲಿ ಜಾರ್ಜಿಯಾ ವೇರಮ್ ಭಾಟಿಯಾ(15) ವಿಕೆಟ್ ಪಡೆದು ಜೊತೆಯಾಟ ಬ್ರೇಕ್ ಮಾಡಿದರು.
ಪ್ರಸ್ತುತ ಭಾರತ ತಂಡ 15.2 ಓವರ್ಗಳಲ್ಲಿ 134 ರನ್ಗಳಿಸಿದೆ. ಜಮೀಮಾ 36 ಎಸೆಗಳಲ್ಲಿ 49 ರನ್ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ರಿಚಾ ಘೋಷ್ ಅಜೇಯ 17 ರನ್ಗಳಿಸಿದ್ದಾರೆ.