ETV Bharat / sports

AUSW vs INDW: ಸರಣಿ ಕೈಚೆಲ್ಲಿದ ಮಿಥಾಲಿ ಪಡೆ; ನಿರ್ಣಾಯಕ ಘಟ್ಟದಲ್ಲಿ ಸೋಲಿಗೆ ಕಾರಣವಾದ 'No Ball'! - ಭಾರತ ಮಹಿಳಾ ಪಡೆ

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ವಿರೋಚಿತ ಸೋಲು ಕಾಣುವ ಮೂಲಕ ಮಿಥಾಲಿ ಪಡೆ ನಿರಾಸೆಗೊಳಗಾಗಿದ್ದು, ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಸೋತಿದೆ.

Australia Women vs India Women
Australia Women vs India Women
author img

By

Published : Sep 24, 2021, 8:09 PM IST

ಮೆಕಾಯ್(ಆಸ್ಟ್ರೇಲಿಯಾ)​: ಕೊನೆ ಓವರ್​ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 13ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ವೇಗಿ ಜೂಲನ್ ಗೋಸ್ವಾಮಿ ಎರಡು 'ನೋ ಬಾಲ್'​ ಎಸೆಯುವ ಮೂಲಕ ತಂಡಕ್ಕೆ ವಿಲನ್​​ ಆದರು. ಪರಿಣಾಮ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಮತ್ತೊಂದು ಸರಣಿ ಕೈಚೆಲ್ಲಿದೆ.

ಬೆತ್ ಮೂನಿ ಅಜೇಯ 125ರನ್
ಬೆತ್ ಮೂನಿ ಅಜೇಯ 125ರನ್

ಆಸ್ಟ್ರೇಲಿಯಾದ ಮೆಕಾಯ್​ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ವನತೆಯರ ತಂಡ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ 86ರನ್​ ಹಾಗೂ ರಿಚಾ ಘೋಷ್​ ಅವರ 44ರನ್​ಗಳ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 7 ವಿಕೆಟ್​​ನಷ್ಟಕ್ಕೆ 274ರನ್​ಗಳಿಕೆ ಮಾಡಿತು.

ಇದರ ಬೆನ್ನತ್ತಿದ್ದ ಆಸ್ಟ್ರೇಲಿಯಾ ಮೊದಲ ಓವರ್​​ನಲ್ಲಿ ಆರಂಭಿಕ ಬ್ಯಾಟರ್​ ಅಲಿಸಾ ಹೀಲಿ ಸೊನ್ನೆ ಸುತ್ತಿದರು. ಆದರೆ ಮತ್ತೋರ್ವ ಆಟಗಾರ್ತಿ ಬೆತ್ ಮೂನಿ ಅಜೇಯ 125ರನ್​​,ಮೆಗ್ರಾಥ್​ 74ರನ್​ಗಳಿಕೆ ಮಾಡಿ ತಂಡ ಗೆಲುವಿನ ದಡ ಸೇರುವಂತೆ ಮಾಡಿದರು. ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 275ರನ್​ಗಳಿಸಿ ಗೆಲುವಿನ ನಗೆ ಬೀರಿದೆ.

Australia Women team
ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಬ್ಯಾಟರ್​​

ಟೀಂ ಇಂಡಿಯಾ ಮೇಲಿಂದ ಮೇಲೆ ಎದುರಾಳಿ ತಂಡದ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೂ ಕೂಡ ಕೊನೆ ಓವರ್​ನಲ್ಲಿ ವೈಫಲ್ಯ ಕಂಡು ಸೋಲು ಕಾಣುವಂತಾಯಿತು. ತಂಡಕ್ಕೆ ಅಂತಿಮ ಓವರ್​ನಲ್ಲಿ 13ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಗೋಸ್ವಾಮಿ ಎರಡು ನೋ ಬಾಲ್​ ಎಸೆದು 13ರನ್​ ಬಿಟ್ಟುಕೊಟ್ಟ ಪರಿಣಾಮ ಭಾರತ ಸೋಲು ಕಾಣುವಂತಾಯಿತು.

Team India women
ಸತತ ಮೂರು ಏಕದಿನ ಸರಣಿ ಕೈಚೆಲ್ಲಿದ ಭಾರತ

3 ಏಕದಿನ ಸರಣಿ ಸೋತ ಭಾರತ

ಈ ಸೋಲಿನೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಕೈಚೆಲ್ಲಿದ್ದು, ಸತತವಾಗಿ ಮೂರು ಏಕದಿನ ಸರಣಿ ಸೋತಿರುವ ಕಳಪೆ ದಾಖಲೆಗೆ ಪಾತ್ರವಾಗಿದೆ. ಮಿಥಾಲಿ ಪಡೆ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ವಿರುದ್ಧ ಸರಣಿ ಸೋತಿದೆ.

ಸತತ 26 ಪಂದ್ಯ ಗೆದ್ದು ದಾಖಲೆ ಬರೆದ ಆಸ್ಟ್ರೇಲಿಯಾ

ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮಹಿಳಾ ಒಟ್ಟು 26 ಏಕದಿನ ಪಂದ್ಯಗಳನ್ನು ಗೆದ್ದುಕೊಂಡು ಹೊಸ ದಾಖಲೆ ಬರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.