ಲಖನೌ (ಉತ್ತರ ಪ್ರದೇಶ): ಆರಂಭಿಕ 125 ರನ್ನ ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಪೆರೇರಾ ಅವರ ಜೊತೆಯಾಟ ಬ್ರೇಕ್ ಆದ ನಂತರ ಶ್ರೀಲಂಕಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಸ್ಸಾಂಕ್, ಪೆರೇರಾ ಅರ್ಧಶತಕದ ಆಟ ಬಿಟ್ಟರೆ ಮತ್ತಾರು ಸಿಂಹಳೀಯರ ಪರವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆಸೀಸ್ನ ಸ್ಟಾರ್ ಸ್ಪಿನ್ನರ್ ಆಡಮ್ ಝಂಪಾ 4 ವಿಕೆಟ್ ಕಿತ್ತರೆ, ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಉರುಳಿಸಿದರು. ಇದರಿಂದ 43.3 ಓವರ್ಗೆ 209 ರನ್ ಗಳಸಿ ಶ್ರೀಲಂಕಾ ಸರ್ವಪತನ ಕಂಡಿತು.
ತಲಾ ಎರಡು ಪಂದ್ಯಗಳನ್ನು ಸೋತಿದ್ದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾಕ್ಕೆ ಇಲ್ಲಿನ ಏಕಾನಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಒತ್ತಡವಿತ್ತು. ಲಂಕಾದ ಆರಂಭಿಕ ಆಟಗಾರರು ವಿಶ್ವಕಪ್ನಲ್ಲಿ ಕಮ್ಬ್ಯಾಕ್ ಮಾಡುವ ಪ್ರದರ್ಶನವನ್ನು ನೀಡಿದರು.
-
Starc strikes 💥
— ICC Cricket World Cup (@cricketworldcup) October 16, 2023 " class="align-text-top noRightClick twitterSection" data="
This Mitchell Starc wicket is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/rfqkIfnB65
">Starc strikes 💥
— ICC Cricket World Cup (@cricketworldcup) October 16, 2023
This Mitchell Starc wicket is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/rfqkIfnB65Starc strikes 💥
— ICC Cricket World Cup (@cricketworldcup) October 16, 2023
This Mitchell Starc wicket is one of the moments that could be featured in your @0xFanCraze Crictos Collectible packs!
Visit https://t.co/2yiXAnq84l to own iconic moments from the #CWC23 pic.twitter.com/rfqkIfnB65
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಶ್ರೀಲಂಕಾ ಆರಂಭಿಕರಾದ ನಿಸ್ಸಾಂಕ, ಪೆರೇರಾ ಮೊದಲ ಪವರ್ ಪ್ಲೇ ವೇಳೆಗೆ ವಿಕೆಟ್ ನಷ್ಟವಿಲ್ಲದೇ 51 ರನ್ ಕೆಲೆಹಾಕಿದರು. ಮುಂದುವರೆದು ಬ್ಯಾಟಿಂಗ್ ಮಾಡಿದ ಅವರು ಕಾಂಗರೂ ಪಡೆಯ ಸ್ಪಿನ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ಶತಕದ ಜೊತೆಯಾಟ ಪೂರೈಸಿದರು. 125 ರನ್ಗಳ ಪಾಲುದಾರಿಕೆ ಮಾಡಿದ್ದ ಜೋಡಿಯನ್ನು ಆಸಿಸ್ ನಾಯಕ ಕಮಿನ್ಸ್ ಬೇರ್ಪಡಿಸಿದರು. 67 ಬಾಲಗಳನ್ನು ಎದುರುಸಿ 61 ರನ್ ಗಳಸಿದ್ದ ಪಾತುಮ್ ನಿಸ್ಸಾಂಕ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರೆ, ಅವರ ಬೆನ್ನಲ್ಲೇ 78 ರನ್ ಗಳಿಸಿದ್ದ ಕುಸಾಲ್ ಪೆರೇರಾ ಸಹ ಕಮಿನ್ಸ್ ಬಾಲ್ನಲ್ಲಿ ಬೌಲ್ಡ್ ಆದರು.
ಎರಡನೇ ವಿಕೆಟ್ ನಂತರ ಸಂಪೂರ್ಣ ಕುಸಿತ: ನಿಸ್ಸಾಂಕ, ಪೆರೇರಾ ಪಾಲುದಾರಿಕೆ ಅಂತ್ಯವಾದ ಕೂಡಲೇ ಲಂಕ ಆಘಾತಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳು ಪಿಚ್ಗೆ ಸೆಟ್ ಆಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕಾ ಎರಡಂಕಿಯ ಆಟ ಆಡಿದ್ದು, ಬಿಟ್ಟರೆ ಮತ್ತೆಲ್ಲರೂ ಒಂದಂಕಿ ದಾಟುವಲ್ಲಿ ವಿಫಲರಾದರು. ಎರಡನೇ ವಿಕೆಟ್ ಬಳಿಕ ಮೊಬೈಲ್ ನಂಬರ್ನ ರೀತಿ ರನ್ ಗಳಿಸಿ ವಿಕೆಟ್ ಕೊಟ್ಟರು.
ಬೌಲಿಂಗ್ನಲ್ಲಿ ಆಸಿಸ್ ಕಮ್ಬ್ಯಾಕ್: ಆಸ್ಟ್ರೇಲಿಯಾದ ಬೌಲರ್ಗಳು ಮೈದಾನಕ್ಕಿಳಿದ ಬ್ಯಾಟರ್ಗಳು 15ಕ್ಕೂ ಹೆಚ್ಚು ಬಾಲ್ ಎದುರಿಸುವ ಮುನ್ನವೇ ವಿಕೆಟ್ ಕಿತ್ತರು. ಆಸ್ಟ್ರೇಲಿಯಾ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಆಂಡಮ್ ಝಂಪಾ ಸ್ಪಿನ್ ಪಿಚ್ನ್ನು ಉತ್ತಮವಾಗಿ ಬಳಸಿಕೊಂಡರು. ಕುಸಲ್ ಮೆಂಡಿಸ್ (9), ಸದೀರ ಸಮರವಿಕ್ರಮ (8), ಚಮಿಕ ಕರುಣಾರತ್ನೆ (2) ಮತ್ತು ಮಹೇಶ್ ತೀಕ್ಷಣ (0) ಝಂಪಾಗೆ ಬಲಿಯಾದರು. ಆರಂಭಿಕರನ್ನು ನಾಯಕ ಕಮಿನ್ಸ್ ಪೆವಿಲಿಯನ್ಗೆ ಕಳುಹಿಸಿದರೆ, ಸ್ಟಾರ್ಕ್ ಧನಂಜಯ ಡಿ ಸಿಲ್ವಾ (7) ಮತ್ತು ಲಹಿರು ಕುಮಾರ (4) ವಿಕೆಟ್ ಎತ್ತಿದರು. ಮ್ಯಾಕ್ಸ್ವೆಲ್ ಕೊನೆಯದಾಗಿ ಚರಿತ್ ಅಸಲಂಕಾ (25) ವಿಕೆಟ್ ಪಡೆದು ಲಂಕಾ ದಹನ ಮಾಡಿದರು.
ಇದನ್ನೂ ಓದಿ: ಅಫ್ಘಾನಿಸ್ತಾನ ಬ್ಯಾಟಿಂಗ್, ಸ್ಪಿನ್ ಬೌಲಿಂಗ್ ಮೂಲಕ ಒತ್ತಡ ಹೇರಿತು: ಇಂಗ್ಲೆಂಡ್ ನಾಯಕ ಬಟ್ಲರ್