ದುಬೈ : ಟಿ20 ವಿಶ್ವಕಪ್ನಲ್ಲಿ ಅರ್ಧದಷ್ಟು ಪಂದ್ಯಗಳು ಮುಗಿದಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮೀಸ್ ರೇಸ್ನಲ್ಲಿ ಮುಂಚೂಣಿ ಸಾಧಿಸಿವೆ.
ಆದರೆ, ಮತ್ತೆರಡು ತಂಡಗಳಿಗೆ ಭಾರಿ ಪೈಪೋಟಿ ನಡೆಯುತ್ತಿದೆ. ಆಸೀಸ್ ಲೆಜೆಂಡರಿ ಬೌಲರ್ ಶೇನ್ ವಾರ್ನ್ ಭಾರತ ಮತ್ತು ಆಸ್ಟ್ರೇಲಿಯಾ ತಮ್ಮ ಗುಂಪಿನ 2ನೇ ತಂಡಗಳಾಗಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಗುಂಪು 1ರಲ್ಲಿ ಇಂಗ್ಲೆಂಡ್ ಆಡಿರುವ ಮೂರು ಪಂದ್ಯಗಳನ್ನು ಬೃಹತ್ ಅಂತರದಲ್ಲಿ ಭಾರಿ ರನ್ ರೇಟ್ ಪಡೆದುಕೊಂಡಿದೆ. 2ನೇ ಗುಂಪಿನಲ್ಲಿ ಪಾಕಿಸ್ತಾನ ತಾನಾಡಿರುವ 3 ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಭಾರತ, ನ್ಯೂಜಿಲ್ಯಾಂಡ್ ಮತ್ತು ಆಫ್ಘಾನಿಸ್ತಾನದೆದುರು ಜಯ ಸಾಧಿಸಿದೆ.
ಮುಂದಿನ ಪಂದ್ಯಗಳು ಕ್ರಿಕೆಟ್ ಶಿಶುಗಳಾದ ನಮೀಬಿಯಾ ಮತ್ತು ಸ್ಕಾಟ್ಲೆಂಡ್ಗಳ ಎದುರಾಗಿರುವುದರಿಂದ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ಸ್ ಪ್ರವೇಶಿಸುವ ಅತ್ಯುತ್ತಮ ಅವಕಾಶವನ್ನು ಹೊಂದಿದೆ.
-
I still believe the teams that will top each group & make it through will look like this, plus semi’s & final…
— Shane Warne (@ShaneWarne) October 30, 2021 " class="align-text-top noRightClick twitterSection" data="
1.England
2. Australia
1.Pakistan
2. India
Semi’s
Eng V India
Aust V Pak
So final will be either
India V Pak or
Aust V England @SkyCricket @FoxCricket
">I still believe the teams that will top each group & make it through will look like this, plus semi’s & final…
— Shane Warne (@ShaneWarne) October 30, 2021
1.England
2. Australia
1.Pakistan
2. India
Semi’s
Eng V India
Aust V Pak
So final will be either
India V Pak or
Aust V England @SkyCricket @FoxCricketI still believe the teams that will top each group & make it through will look like this, plus semi’s & final…
— Shane Warne (@ShaneWarne) October 30, 2021
1.England
2. Australia
1.Pakistan
2. India
Semi’s
Eng V India
Aust V Pak
So final will be either
India V Pak or
Aust V England @SkyCricket @FoxCricket
ಎರಡೂ ಗುಂಪಿನಲ್ಲೂ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲು ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳೂ ಪೈಪೋಟಿಯಲ್ಲಿವೆ. ಆದರೆ, ಶೇನ್ ವಾರ್ನ್ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಲಿವೆ ಎಂದು ಟ್ವೀಟ್ ಮಾಡುವ ಮೂಲಕ ಭವಿಷ್ಯ ನುಡಿದ್ದಾರೆ.
ಸೆಮಿಫೈನಲ್ಸ್ನಲ್ಲಿ ಭಾರತ vs ಇಂಗ್ಲೆಂಡ್ ಮತ್ತು ಪಾಕಿಸ್ತಾನ vs ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ ಎಂದಿರುವ ವಾರ್ನ್, ವಿಶ್ವಕಪ್ ಫೈನಲ್ಸ್ನಲ್ಲಿ ಭಾರತ vs ಪಾಕಿಸ್ತಾನ ಅಥವಾ ಇಂಗ್ಲೆಂಡ್ vs ಆಸ್ಟ್ರೇಲಿಯಾ ತಂಡಗಳು ಟ್ರೋಫಿಗಾಗಿ ಸೆಣಸಾಡಬಹುದು ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಷ್ಟೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಕದನ ಕೂಡ ಅಷ್ಟೇ ರೋಮಾಂಚನಕಾರಿಯಾಗಿರಲಿದೆ. ಭಾರತ ಇಂದಿನ ಪಂದ್ಯ ಗೆದ್ದರೆ ವಾರ್ನ್ ಭವಿಷ್ಯ ಬಹುತೇಕ ನಿಜವಾಗಲಿದೆ.
ಇದನ್ನು ಓದಿ:ನಾನು ಸ್ಮಿತ್ರನ್ನು ಇಷ್ಟಪಡುತ್ತೇನೆ, ಆದ್ರೆ ಆತ ಟಿ20 ಪ್ಲೇಯರ್ ಅಲ್ಲ ಎಂದ ಆಸೀಸ್ ದಿಗ್ಗಜ!