ಸಿಡ್ನಿ: 2021ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನೆಟ್ ಬೌಲರ್ ಆಗಿದ್ದ ಭಾರತೀಯ ಮೂಲದ ನಿವೇತನ್ ರಾಧಾಕೃಷ್ಣನ್ ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ವೆಸ್ಟ್ ಇಂಡೀಸ್ನಲ್ಲಿ 2022ರಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ 15 ಆಟಗಾರರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಮುಂದಿನ ವರ್ಷ ಜನವರಿ 14ರಿಂದ ಕೆರಿಬಿಯನ್ ನಾಡಿನಲ್ಲಿ ಕಿರಿಯರ ವಿಶ್ವಕಪ್ ಜರುಗಲಿದೆ. ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 19 ವರ್ಷದ ರಾಧಕೃಷ್ಣನ್ 2021ರ ಐಪಿಎಲ್ನ ಮೊದಲ ಹಂತದಲ್ಲಿ ರಿಕಿ ಪಾಂಟಿಂಗ್ ಕೋಚ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದರು. ತಮ್ಮ ಸ್ಪಿನ್ ಕೌಶಲ್ಯದಿಂದ ನ್ಯೂ ಸೌತ್ ವೇಲ್ಸ್ ಮತ್ತು ತಾಸ್ಮೇನಿಯಾ ಕ್ರಿಕೆಟ್ ಮಂಡಳಿಗಳು ಒಪ್ಪಂದದ ಆಫರ್ ನೀಡಿದರೂ ರಾಧಾಕೃಷ್ಣನ್ ವಿಶ್ವಕಪ್ ಮುಗಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
2013ರಲ್ಲಿ ಭಾರತದಿಂದ ರಾಧಕೃಷ್ಣನ್ ಕುಟುಂಬ ಸಿಡ್ನಿಗೆ ವಲಸೆ ಹೋಗಿದ್ದರು. ನಂತರ ಅವರು ಆಸ್ಟ್ರೇಲಿಯಾ ಅಂಡರ್ 16 ತಂಡದಲ್ಲಿ ಆಡಿದ್ದ ಅವರು ತಂದೆಯ ಪ್ರೋತ್ಸಾಹದ ಮೇರೆಗೆ ಎರಡೂ ಕೈಗಳಲ್ಲಿ ಫಿಂಗರ್ ಸ್ಪಿನ್ ಮಾಡುವುದನ್ನು ಆರಂಭಿಸಿದ್ದರು. ಇನ್ನು ರಾಧಾಕೃಷ್ಣನ್ ಜೊತೆಗೆ ಭಾರತೀಯ ಮೂಲದ ಹರ್ಕಿರತ್ ಬಾಜ್ವಾ ಕೂಡ 15ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಆಸ್ಟ್ರೇಲಿಯಾ 2010ರಲ್ಲಿ ಮಿಚೆಲ್ ಮಾರ್ಷ್ ನಾಯಕತ್ವದಲ್ಲಿ ಕೊನೆಯ ಬಾರಿ ಕಿರಿಯರ ವಿಶ್ವಕಪ್ ಜಯಿಸಿತ್ತು. 2018ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಭಾರತದ ವಿರುದ್ಧ ಸೋಲುಕಂಡಿತ್ತು.
ಆಸ್ಟ್ರೇಲಿಯಾ ತಂಡ: ಹರ್ಕಿರತ್ ಬಾಜ್ವಾ, ಏಡನ್ ಕಾಹಿಲ್, ಕೂಪರ್ ಕೊನೊಲಿ, ಜೋಶುವಾ ಗಾರ್ನರ್, ಐಸಾಕ್ ಹಿಗ್ಗಿನ್ಸ್, ಕ್ಯಾಂಪ್‌ಬೆಲ್ ಕೆಲ್ಲವೇ, ಕೋರಿ ಮಿಲ್ಲರ್, ಜ್ಯಾಕ್ ನಿಸ್ಬೆಟ್, ನಿವೇತನ್ ರಾಧಾಕೃಷ್ಣನ್, ವಿಲಿಯಂ ಸಾಲ್ಜ್‌ಮನ್, ಲಾಚ್ಲಾನ್ ಶಾ, ಜಾಕ್ಸನ್ ಸಿನ್‌ಫೀಲ್ಡ್, ಟೋಬಿಯಾಸ್ ಸ್ನೆಲ್, ಟೋಮ್ಯಾ ವೆಲ್ಲಿ, ಟಾಮ್ಲಿ
ಇದನ್ನೂ ಓದಿ:ಒಂದೇ ಓವರ್ನಲ್ಲಿ 6 ವಿಕೆಟ್: ಪಾಕ್ ವಿರುದ್ಧ ಹೊಸ ಇತಿಹಾಸ ಬರೆದ ಭಾರತ ಮೂಲದ ಹರ್ಷಿತ್ ಸೇಠ್!