ETV Bharat / sports

ಶ್ರೀಲಂಕಾ ಮೇಲೆ ಕಾಂಗರೂ ಸವಾರಿ.. 2ನೇ ಟಿ-20 ಗೆದ್ದು ಸರಣಿ ಕೈವಶ ಮಾಡಿಕೊಂಡ ಫಿಂಚ್ ಪಡೆ - ಶ್ರೀಲಂಕಾ ವರ್ಸಸ್​​ ಆಸ್ಟ್ರೇಲಿಯಾ

ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಪಾರಮ್ಯ ಮೆರೆದ ಆಸ್ಟ್ರೇಲಿಯಾ ತಂಡ 3 ವಿಕೆಟ್​​​ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

Australia Defeat Sri Lanka To Seal Series

author img

By

Published : Jun 9, 2022, 10:59 AM IST

ಕೊಲಂಬೊ(ಶ್ರೀಲಂಕಾ): ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲೂ ಗೆಲುವಿನ ನಗೆ ಬೀರಿರುವ ಪ್ರವಾಸಿ ಆಸ್ಟ್ರೇಲಿಯಾ ಒಂದು ಪಂದ್ಯ ಬಾಕಿ ಇರುವಾಗಲೇ ಟಿ-20 ಸರಣಿ ವಶ ಮಾಡಿಕೊಂಡಿದೆ. ತವರಿನಲ್ಲೇ ನಡೆದ ಪಂದ್ಯದ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾದ ಶ್ರೀಲಂಕಾ ತಂಡ ಸೋತು ಮುಖಭಂಗಕ್ಕೊಳಗಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್​ನಷ್ಟಕ್ಕೆ ಕೇವಲ 124 ರನ್​​ಗಳಿಕೆ ಮಾಡಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಅಸಲಂಕಾ(39), ಕುಶಾಲ್ ಮೆಂಡಿಸ್​​(36) ರನ್​​ಗಳಿಕೆ ಮಾಡಿದರು. ಆಸ್ಟ್ರೇಲಿಯಾ ಪರ ಕೇನ್​​ ರಿಚರ್ಡ್ಸನ್​ 4 ವಿಕೆಟ್​, ಜಾಯ್​ ರಿಚರ್ಡ್ಸನ್​ 3 ವಿಕೆಟ್ ಪಡೆದರೆ, ಮ್ಯಾಕ್ಸವೆಲ್​ 2 ವಿಕೆಟ್ ಕಿತ್ತರು.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ ವಿರುದ್ಧ ಶತಕ ಸಿಡಿಸಿ ಅಬ್ಬರ, ಕಿಂಗ್​ ಕೊಹ್ಲಿ ದಾಖಲೆ ಮುರಿದ ಬಾಬರ್​ ಆಜಂ

125 ರನ್​​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆದುಕೊಂಡಿತು. ಕಣಕ್ಕಿಳಿದ ವಾರ್ನರ್​-ಫಿಂಚ್ ಜೋಡಿ ತಂಡಕ್ಕೆ 33ರನ್​​ಗಳ ಜೊತೆಯಾಟವಾಡಿದರು. ಈ ವೇಳೆ, 24ರನ್​​ಗಳಿಸಿದ್ದ ಫಿಂಚ್​ ವಿಕೆಟ್ ಒಪ್ಪಿಸಿದರು.

ಆದರೆ, ಇದಾದ ಬಳಿಕ ಬಂದ ಮಾರ್ಷ್​ (11), ಸ್ಮಿತ್​(5) ಸ್ಟೋಯ್ನಿಸ್​​(9) ವಿಕೆಟ್ ಒಪ್ಪಿಸಿ, ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ, ಮ್ಯಾಕ್ಸವೆಲ್​ ಹಾಗೂ ಮ್ಯಾಥ್ಯೂ ವೇಡ್​​(26)ರನ್​​ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಹೀಗಾಗಿ, ತಂಡ 17.5 ಓವರ್​​ಗಳಲ್ಲಿ 7 ವಿಕೆಟ್​ನಷ್ಟಕ್ಕೆ 126ರನ್​​ಗಳಿಸಿ, ಗೆಲುವು ಸಾಧಿಸಿತು.

ಶ್ರೀಲಂಕಾ ತಂಡದ ಪರ ವನಿಂದು ಹಸರಂಗ ನಾಲ್ಕು ವಿಕೆಟ್ ಪಡೆದುಕೊಂಡು ಮಾರಕವಾದ್ರೂ, ಪ್ರಯೋಜನವಾಗಲಿಲ್ಲ. ಹಿಂದತೆ ತುಸ್ಸಾರ್​, ಚಮೀರ್​ ತಲಾ 1 ವಿಕೆಟ್ ಪಡೆದುಕೊಂಡರು. ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 10 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.