ನವದೆಹಲಿ: ಗಾಯದ ಸಮಸ್ಯೆಯಿಂದ ಬಾರ್ಡರ್ - ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ '100% ಪಿಟ್' ಆಗಿದ್ದೇನೆ ಎಂದಿದ್ದಾರೆ. ಕ್ಯಾಮರೂನ್ ಗ್ರೀನ್ ಈಗ ಸೋಲಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಆಸಿಸ್ ತಂಡಕ್ಕೆ ಸಿಕ್ಕ ಹುಲ್ಲು ಕಡ್ಡಿಯ ಆಸರೆಯ ರೀತಿ ಆಗಿದ್ದಾರೆ.
-
Australia will be bolstered by the return of Cameron Green, who has declared himself fit for the third #INDvAUS Test 💪 #WTC23 | Details 👇 https://t.co/AcPuSDpj43
— ICC (@ICC) February 24, 2023 " class="align-text-top noRightClick twitterSection" data="
">Australia will be bolstered by the return of Cameron Green, who has declared himself fit for the third #INDvAUS Test 💪 #WTC23 | Details 👇 https://t.co/AcPuSDpj43
— ICC (@ICC) February 24, 2023Australia will be bolstered by the return of Cameron Green, who has declared himself fit for the third #INDvAUS Test 💪 #WTC23 | Details 👇 https://t.co/AcPuSDpj43
— ICC (@ICC) February 24, 2023
ತಾಯಿಯ ಅನಾರೋಗ್ಯದ ಹಿನ್ನೆಲೆ ಆಸ್ಟ್ರೇಲಿಯಾಕ್ಕೆ ಮರಳಿದ್ದ ಪ್ಯಾಟ್ ಕಮಿನ್ಸ್ ಮೂರನೇ ಪಂದ್ಯಕ್ಕೆ ತಂಡಕ್ಕೆ ಸೇರಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದರು. ತಾಯಿತ ಅನಾರೋಗ್ಯ ಉಲ್ಬಣ ಆಗಿರುವುದರಿಂದ ಈ ಸಮಯದಲ್ಲಿ ಕುಟುಂಬದ ಜೊತೆ ಇರುವುದು ಹೆಚ್ಚು ಅನಿವಾರ್ಯ ಎಂದು ತಿಳಿಸಿದ್ದರು. ಆಸಿಸ್ ತಂಡವನ್ನು ಮೂರನೇ ಪಂದ್ಯದಲ್ಲಿ ಸ್ಟೀವ್ ಸ್ಮಿಮ್ ಮುಂದುವರೆಸಲಿದ್ದಾರೆ ಎಂದು ತಿಳಿಸಿಲಾಗಿತ್ತು.
ಬಾರ್ಡರ್ - ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಮಾರ್ಚ್ 1 ರಿಂದ 5ರ ವರೆಗೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 9 ರಿಂದ 13 ವರೆಗೆ ಅಹಮದಾಬಾದ್ನ ಭಾರತದ ದೊಡ್ಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಲ್ಕನೇ ಪಂದ್ಯ ನಡೆಯಲಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಗ್ರೀನ್ ಬ್ಯಾಟಿಂಗ್ ಮಾಡುವಾಗ ಬೆರಳು ಮುರಿದಿತ್ತು. ಆಲ್ ರೌಂಡರ್ ಗ್ರೀನ್ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ವೇಳೆಗೆ ತಂಡ ಸೇರುವ ಸಾಧ್ಯತೆ ಇತ್ತು. ಆದರೆ, ಸಂಪೂರ್ಣ ಚೇತರಿಕೆ ನಂತರ ತಂಡದಲ್ಲಿ ಪಾಲುದಾರಿಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಿ ಹಿಂದೆ ಉಳಿದರು.
"ನಾನು ದೆಹಲಿಯ ಪಂದ್ಯದಲ್ಲೇ ತಂಡಕ್ಕೆ ಸೇರ್ಪಡೆ ಆಗುತ್ತಿದ್ದೆ, ಆದರೆ ಒಂದು ವಾರದ ಹೆಚ್ಚಿನ ವಿರಾಮದ ಅಗತ್ಯ ಇದ್ದ ಕಾರಣ ಹೊರಗುಳಿದೆ. ನಾನು ಈಗ 100 ಪ್ರತಿಶತ ಸಿದ್ಧನಿದ್ದೇನೆ. ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಆಯಿತು. ಕೈಗೆ ಬಾಲ್ ತಗುಲುವ ಭಯ ಕಾಡುತ್ತದೆ. ಬೌಲಿಂಗ್ ಮಾಡಲು ನಾನು ಸಂಪೂರ್ಣ ಸಿದ್ಧನಿದ್ದೇನೆ. ಬ್ಯಾಟಿಂಗ್ನಿಂದ ಕೊಂಚ ದೂರ ಇರಲಿದ್ದೇನೆ" ಎಂದು ತಿಳಿಸಿದ್ದಾರೆ.
ಗ್ರೀನ್‌ನಲ್ಲಿ ವೇಗದ ಬೌಲಿಂಗ್ ಪಡೆಗೆ ಸೇರಿಕೊಳ್ಳಲಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸ್ವಾಗತಿಸಿದೆ. ಆಲ್ ರೌಂಡರ್ ಗ್ರೀನ್ 35.04 ಸರಾಸರಿಯಲ್ಲಿ 806 ಟೆಸ್ಟ್ ರನ್ ಗಳಿಸಿದ್ದಾರೆ. ಆರು ಅರ್ಧ ಶತಕ ಗಳಿಸಿದ್ದಾರೆ. ಅವರು 29.78 ಸರಾಸರಿಯಲ್ಲಿ 23 ವಿಕೆಟ್‌ಗಳನ್ನು ಪಡೆದಿದ್ದು, ಒಂದು ಬಾರಿ ಐದು ವಿಕೆಟ್ ಕಬಳಿಸಿದ್ದಾರೆ. ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ವೇಗೆ ಗ್ರೀನ್ ಕೈಚಳಕ ಹೇಗೆ ಕೆಲಸ ಮಾಡುತ್ತದೆ ಎಂದು ಕಾದು ನೋಡಬೇಕಿದೆ.
ಆಸಿಸ್ಗೆ ಕಾಡಿದ ಗಾಯ ಸಮಸ್ಯೆ: ಭಾರತದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡಲು ಬಂದ ಆಸಿಸ್ ತಂಡಕ್ಕೆ ಗಾಯ ಸಮಸ್ಯೆ ಕಾಡಿತು. ಅನುಭವಿ ಬೌಲರ್ಗಳಾದ ಆಷ್ಟನ್ ಅಗರ್, ಜೋಶ್ ಹ್ಯಾಜಲ್‌ವುಡ್ ಮತ್ತು ಕ್ಯಾಮರೂನ್ ಗ್ರೀನ್ ತಂಡದಿಂದ ಹೊರಗಿದ್ದರು. ಸತತ ಗೆಲುವಿನ ಮೂಲಕ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಪಂದ್ಯದ ವೇಳೆ ಸಿರಾಜ್ ಬೌಲಿಂಗ್ನಲ್ಲಿ ಗಾಯಕ್ಕೆ ಒಳಗಾದ ವಾರ್ನರ್ ಕೂಡ ಆಸ್ಟ್ರೇಲಿಯಾಕ್ಕೆ ಮರಳಿದರು. ಈ ನಡುವೆ ನಾಯಕ ಕಮಿನ್ಸ್ ಅನುಪಸ್ಥಿತಿಯೂ ತಂಡಕ್ಕೆ ಬಾದಿಸಿದೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತವು 2-0 ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: 3ನೇ ಟೆಸ್ಟ್: ಸ್ಟೀವ್ ಸ್ಮಿತ್ ಹೆಗಲಿಗೆ ಆಸ್ಟ್ರೇಲಿಯಾ ನಾಯಕತ್ವ ಹೊಣೆ