ಕ್ಯಾನ್ಬೆರಾ: ಶ್ರೀಲಂಕಾ ವಿರುದ್ಧ 3ನೇ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನು 2 ಪಂದ್ಯಗಳಿರುವಂತೆ ಆತಿಥೇಯ ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ.
ಮಂಗಳವಾರ ಕ್ಯಾನ್ಬೆರಾದ ಮನುಕಾ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ಗಳ ಸುಲಭ ಜಯ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 121 ರನ್ಗಳಿಸಿತ್ತು. ನಾಯಕ ಶನಾಕ 38 ಎಸೆತಗಳಲ್ಲಿ 5 ಬೌಂಡರಿ ಸಹಿತ 39 ರನ್ ಗಳಿಸಿದ್ದು ಗರಿಷ್ಠ ರನ್ ಆದರೆ, ವಿಕೆಟ್ ಕೀಪರ್ 29 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ 25 ರನ್ಗಳಿಸಿದರು.
ಅನುಭವಿಗಳಾದ ಗುಣತಿಲಕ 9, ಕುಸಾಲ್ ಮೆಂಡಿಸ್ 4, ರನ್ಗಳಿಸಿದರೆ, ಆರಂಭಿಕ ಪತುಮ್ ನಿಸಂಕ 16, ಅಸಲಂಕಾ 6, ಕರುಣರತ್ನೆ 8 ರನ್ಗಳಿಸಿದರು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 21ಕ್ಕೆ 3, ಆಶ್ಟನ್ ಅಗರ್ 14ಕ್ಕೆ 1, ಮ್ಯಾಕ್ಸ್ವೆಲ್ 3ಕ್ಕೆ1 ಮತ್ತು ಹೇಜಲ್ವುಡ್ 31ಕ್ಕೆ1 ವಿಕೆಟ್ ಪಡೆದರು.
-
Australia win by 6 wickets and take an unassailable 3-0 lead in the five-match T20I series against Sri Lanka 👏#AUSvSL | https://t.co/BKrvBKEUXx pic.twitter.com/9jwFpU8yw0
— ICC (@ICC) February 15, 2022 " class="align-text-top noRightClick twitterSection" data="
">Australia win by 6 wickets and take an unassailable 3-0 lead in the five-match T20I series against Sri Lanka 👏#AUSvSL | https://t.co/BKrvBKEUXx pic.twitter.com/9jwFpU8yw0
— ICC (@ICC) February 15, 2022Australia win by 6 wickets and take an unassailable 3-0 lead in the five-match T20I series against Sri Lanka 👏#AUSvSL | https://t.co/BKrvBKEUXx pic.twitter.com/9jwFpU8yw0
— ICC (@ICC) February 15, 2022
ಇನ್ನು 122 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 16.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಆ್ಯರೋನ್ ಫಿಂಚ್ 35, ಮ್ಯಾಕ್ಸ್ವೆಲ್ 39, ಜೋಶ್ ಇಂಗ್ಲಿಷ್ ಅಜೇಯ 21, ಮಾರ್ಕಸ್ ಸ್ಟೋಯ್ನಿಸ್ ಅಜೇಯ 12 ರನ್ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು. ಸೋಲಿನ ಪಂದ್ಯದಲ್ಲಿ ಯುವ ಬೌಲರ್ ಮಹೀಶ್ ತೀಕ್ಷ್ಣ 24 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.