ಕೈರ್ನ್ಸ್(ಆಸ್ಟ್ರೇಲಿಯಾ): ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ 113 ರನ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ತಂಡ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದುಕೊಂಡಿತು.
ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195 ರನ್ಗಳಿಸಿದರೆ, ನ್ಯೂಜಿಲ್ಯಾಂಡ್ 33 ಓವರ್ಗಳಲ್ಲಿ ಕೇವಲ 82 ರನ್ಗಳಿಗೆ ಆಲೌಟ್ ಆಯಿತು. ಲೆಗ್ಸ್ಪಿನ್ನರ್ ಜಂಪಾ ಕೈಚಳಕದ ಮುಂದೆ ಕಿವೀಸ್ ಆಟ ನಡೆಯಲಿಲ್ಲ.
-
Australia take an unassailable 2-0 series lead 💪
— ICC (@ICC) September 8, 2022 " class="align-text-top noRightClick twitterSection" data="
Watch the remainder of the #AUSvNZ series on https://t.co/CPDKNxoJ9v (in select regions) 📺#CWCSL | 📝 Scorecard: https://t.co/R2kr87CzER pic.twitter.com/A4CxMuxJI5
">Australia take an unassailable 2-0 series lead 💪
— ICC (@ICC) September 8, 2022
Watch the remainder of the #AUSvNZ series on https://t.co/CPDKNxoJ9v (in select regions) 📺#CWCSL | 📝 Scorecard: https://t.co/R2kr87CzER pic.twitter.com/A4CxMuxJI5Australia take an unassailable 2-0 series lead 💪
— ICC (@ICC) September 8, 2022
Watch the remainder of the #AUSvNZ series on https://t.co/CPDKNxoJ9v (in select regions) 📺#CWCSL | 📝 Scorecard: https://t.co/R2kr87CzER pic.twitter.com/A4CxMuxJI5
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ (61), ಸ್ಟಾರ್ಕ್ಸ್(38) ಹಾಗೂ ಹ್ಯಾಜಲ್ವುಡ್ (23) ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195 ರನ್ಗಳಿಕೆ ಮಾಡಿತ್ತು. ನ್ಯೂಜಿಲ್ಯಾಂಡ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಾರ್ನರ್ (5), ಫಿಂಚ್ (0), ಸ್ಟೋಯ್ನಿಸ್ (0),ಲಾಬುಶೇನ್(5), ಅಲೆಕ್ಸ್ ಕ್ಯಾರಿ(12) ವಿಕೆಟ್ ಒಪ್ಪಿಸಿದರು.
ಬೌಲಿಂಗ್ನಲ್ಲಿ ಮಿಂಚಿದ ಬೌಲ್ಟ್ 4 ವಿಕೆಟ್, ಮ್ಯಾಟ್ ಹೆನ್ರಿ 3, ಸೌಥಿ ಹಾಗೂ ಸ್ಯಾಟ್ನರ್ 1 ವಿಕೆಟ್ ಪಡೆದುಕೊಂಡರು.
196 ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ ಕಾಂಗರೂ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಹೀಗಾಗಿ, 33 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 82 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಲ್ವರು ಬ್ಯಾಟರ್ಗಳು ಮಾತ್ರ ಎರಡಂಕಿ ರನ್ಗಳಿಸಿದರೆ, ಉಳಿದಂತೆ ಯಾರೊಬ್ಬರೂ 10ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: 4 ಓವರ್, 1 ಮೇಡನ್, 4 ರನ್, 5 ವಿಕೆಟ್! ಬೌಲರ್ ಭುವನೇಶ್ವರ್ ಕುಮಾರ್ ಕಮಾಲ್
ಗಪ್ಟಿಲ್(2), ಕಾನ್ವೆ(5), ವಿಲಿಯಮ್ಸನ್(17), ಲಾಥಮ್(0), ಮಿಚೆಲ್(10), ಬ್ರಾಚೆಲ್(12), ನೀಶಮ್(2), ಸ್ಯಾಂಟ್ನರ್(16), ಸೌಥಿ(2), ಹೆನ್ರಿ (5) ಹಾಗೂ ಬೌಲ್ಟ್ (9) ರನ್ಗಳಿಸಿದರು.
ಆಸ್ಟ್ರೇಲಿಯಾ ತಂಡದ ಪರ ಮಿಂಚಿದ ಆ್ಯಂಡಂ ಜಂಪಾ 5 ವಿಕೆಟ್ ಪಡೆದುಕೊಂಡರೆ, ಸೇನ್ ಅಂಬಾರ್ಟ್,ಮಿಚೆಲ್ ಸ್ಟಾರ್ಕ್ 2 ವಿಕೆಟ್ ಹಾಗೂ ಸ್ಟೋಯ್ನಿಸ್ 1 ವಿಕೆಟ್ ಕಿತ್ತರು. ಮೊದಲ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದ ಆಸ್ಟ್ರೇಲಿಯಾ ಇದೀಗ ಎರಡನೇ ಪಂದ್ಯದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.