ನವದೆಹಲಿ: ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶ ಪಡೆದುಕೊಂಡಿದೆ. ವಿಶ್ವಕಪ್‌ನ ಅಂತಿಮ ಪಂದ್ಯ ಭಾನುವಾರ (ಫೆಬ್ರವರಿ 26) ಸಂಜೆ 6:30ಕ್ಕೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಂಗರೂ ಪಡೆ ಮತ್ತು ಹರಿಣಗಳ ನಡುವೆ ನಡೆಯಲಿದೆ.
ಐಸಿಸಿ ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿರುವ ಆಸಿಸ್ ವನಿತೆಯರು ಮತ್ತು ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಫೈಟ್ಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್ ಆಡಲಿದೆ. ಪುರುಷರ ತಂಡ ಸೆಮಿಸ್ನಲ್ಲಿ ಸತತವಾಗಿ ಎಡವುತ್ತಿರುವುದಕ್ಕೆ ಚೋಕರ್ಸ್ ಎಂಬ ಹಣೆ ಪಟ್ಟಿ ಹೊಂದಿದೆ. ಈಗ ಫೈನಲ್ಗೆ ಪ್ರವೇಶ ಪಡೆದಿರುವ ವನಿತೆಯರು ವಿಶ್ವಕಪ್ ಗೆದ್ದು ತಾವು ಚೋಕರ್ಸ್ ಅಲ್ಲ ಎಂಬುದನ್ನು ಸಾಬೀತು ಪಡಿಸ ಬೇಕಿದೆ.
ಮಹಿಳೆಯರ ಟಿ20 ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ತಂಡ ಗುಂಪು ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು, ಭಾರತವನ್ನು ಮಣಿಸಿ ಸೋಲನ್ನೇ ಕಾಣದೆ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಆಸಿಸ್ನ ಈ ಸೊಲಿಲ್ಲದ ಓಟಕ್ಕೆ ಹರಿಣಗಳ ಪಡೆ ಅಪಜಯ ಉಂಟು ಮಾಡುತ್ತಾ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. 5 ಬಾರಿ ಪ್ರಶಸ್ತಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ಮತ್ತೆ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಮೊದಲ 2009 ವಿಶ್ವಕಪ್ ಅನ್ನು ಇಂಗ್ಲೆಂಡ್ ಜಯಿಸಿದರೆ, 2010,2012,2014, 2018 ಮತ್ತು 2020 ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ವಶಪಡಿಸಿಕೊಂಡಿತ್ತು. 2020 ಕೊನೆ ವಿಶ್ವಕಪ್ ಸಹ ಆಸಿಸ್ ಗೆದ್ದಿರುವ ಕಾರಣ ಮಾಜಿ ಚಾಂಪಿಯನ್ಸ್ ಮತ್ತೆ ಗೆದ್ದು ಹಾಲಿ ಚಾಂಪಿಯನ್ಗಳಾಗುತ್ತಾರ ಕಾದುನೋಡಬೇಕಿದೆ. ನಡುವೆ 2016ರಲ್ಲಿ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಗೆದ್ದುಕೊಂಡಿತ್ತು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿ: ಹೆಡ್ ಟು ಹೆಡ್ ಸೌತ್ ಆಫ್ರಿಕಾ (AUS vs SA ಫೈನಲ್ ಪಂದ್ಯ) ವಿರುದ್ಧ ಆಡಿದ ಕೊನೆಯ ಐದು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಎಲ್ಲ ಐದು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ದಕ್ಷಿಣ ಆಫ್ರಿಕಾ ತಂಡ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಎರಡರಲ್ಲಿ ಸೋತು ಫೈನಲ್ಗೇರಿದೆ. ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮೂರು ರನ್‌ಗಳಿಂದ, ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳಿಂದ ಸೋಲನುಭವಿಸಿತ್ತು.
ದಕ್ಷಿಣ ಆಫ್ರಿಕಾ ತಂಡ: ಸುನೆ ಲೂಸ್ (ನಾಯಕಿ), ಕ್ಲೋಯ್ ಟ್ರಯೋನ್, ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಲಾರಾ ಗುಡಾಲ್, ಶಬ್ನಿಮ್ ಇಸ್ಮಾಯಿಲ್, ಸಿನಾಲೊ ಜಫ್ತಾ, ಮಾರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಸಾಟರ್ಡೆ ಕ್ಲಾಸ್, ಲಾರಾ ವೊಲ್ವಾರ್ಡ್ಟ್, ನಾನ್‌ಕುಲುಲೆಕೊ ಮ್ಲಾಬಾ, ಡೆಲ್ಮಿ ಟಕರ್ಸ್, ಆನ್ನೆರಿ
ಆಸ್ಟ್ರೇಲಿಯಾ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಡಾರ್ಸಿ ಬ್ರೌನ್, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಹೀದರ್ ಗ್ರಹಾಂ, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವಾರ್ಹ್ಯಾಮ್
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್ ಮಣಿಸಿ ಮೊದಲ ಬಾರಿಗೆ ಫೈನಲ್‌ಗೇರಿದ ದ.ಆಫ್ರಿಕಾ