ಮುಂಬೈ: ತಾರಾ ಜೋಡಿ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ ಅವರ ಮಗಳು ನಟಿ ಅಥಿಯಾ ಶೆಟ್ಟಿ ಅವರ ಮದುವೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ. ಮಾಹಿತಿಯ ಪ್ರಕಾರ, ಇಬ್ಬರ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ವೇಳೆ, ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆ ಎಂದರೆ ಅನುಷ್ಕಾ - ವಿರಾಟ್‌ರಂತೆ ವಿದೇಶದಲ್ಲಿ ಸಪ್ತಪದಿ ತುಳಿಯುತ್ತಾರ ಅಥವಾ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಅವರಂತೆ ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್ ಮಾಡಿಕೊಳ್ಳುತ್ತಾರಾ ಎಂಬುದು. ಈ ಪ್ರಶ್ನೆಗೆ ಸದ್ಯ ಉತ್ತರ ದೊರೆತಿದ್ದು, ಮುಂಬೈನ ಖಂಡಾಲಾದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಮಂಟಪವನ್ನು ಅಲಂಕರಿಸಲಾಗುತ್ತದೆ ಎನ್ನಲಾಗಿದೆ.
- " class="align-text-top noRightClick twitterSection" data="
">
ಸುನಿಲ್ ಶೆಟ್ಟಿ ಮನೆಯಲ್ಲೇ ವಿವಾಹ: ಕೆಎಲ್ ರಾಹುಲ್ ಮತ್ತು ಅಥಿಯಾ ಅವರ ಆಪ್ತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಮ್ಮುಖದಲ್ಲಿ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಖಂಡಾಲಾದ ತಮ್ಮ ಐಷಾರಾಮಿ ಬಂಗಲೆಯ ಅಂಗಳದಲ್ಲಿ ತಮ್ಮ ಪ್ರೀತಿಯ ಮಗಳು ಅಥಿಯಾಳನ್ನು ವಿವಾಹ ಮಾಡಿ ಕೊಡಲಿದ್ದಾರೆ.
- " class="align-text-top noRightClick twitterSection" data="
">
ಜನವರಿ 20ಕ್ಕೆ ವಿವಾಹ: ಕೆ ಎಲ್ ರಾಹುಲ್ ಮತ್ತು ಅಥಿಯಾ ಅವರ ಮನೆಯವರು ವಿವಾಹ ದಿನಾಂಕವನ್ನು ಎಲ್ಲೂ ದೃಢಪಡಿಸಿಲ್ಲವಾದರೂ, ಜನವರಿ 20 ರಂದು ತಾರಾ ಜೋಡಿ ಸಪ್ತಪದಿ ತುಳಿಯಲಿದ್ದಾರೆ ಎಂದು ಸಂಬಂಧಿಗಳ ಆಪ್ತ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ. ವಿವಾಹಕ್ಕೆ ಆಪ್ತರು ಮತ್ತು ಕೆಲ ತಾರೆಯರಿಗೆ ಮಾತ್ರ ಆಹ್ವಾನ ಇರಲಿದೆ ಎಂದು ಹೇಳಲಾಗಿದೆ.
ಅದ್ಧೂರಿ ಆರತಕ್ಷತೆ: ಮದುವೆಯು ಆತ್ಮೀಯ ಸಂಬಂಧದವರನ್ನು ಮಾತ್ರ ಕರೆಯಾಲಾಗುವುದು ಎಂದು ಹೇಳಲಾಗಿದೆ. ಆದರೆ, ಸುನಿಲ್ ಶೆಟ್ಟಿ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಅವರ ಕುಟುಂಬ ನಂತರ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಯೋಜಿಸಲಿದೆ ಎನ್ನಲಾಗಿದೆ. ಏಪ್ರಿಲ್‌ನಲ್ಲಿ ಅಥಿಯಾ ಮತ್ತು ರಾಹುಲ್ ಅವರ ಆರತಕ್ಷತೆ ಅದ್ಧೂರಿಯಾಗಿ ಮಾಡಲಾಗುವುದು ಈ ಕಾರ್ಯುಕ್ರಮಕ್ಕೆ ಕುಟುಂಬದ ಎಲ್ಲ ಸದಸ್ಯರು, ಸುನಿಲ್ ಶೆಟ್ಟಿ ಮತ್ತು ಅಥಿಯಾ ಅವರ ಸಿನಿ ಕ್ಷೇತ್ರದ ಗೆಳೆಯರು ಮತ್ತು ರಾಹುಲ್ ಅವರ ಕ್ರೀಡಾ ಕ್ಷೇತ್ರ ಸ್ನೇಹಿತರನ್ನು ಆಹ್ವಾನಿಸಲಾಗುವುದು ಎಂದು ಹೇಳಲಾಗಿದೆ.
- " class="align-text-top noRightClick twitterSection" data="
">
ಸುಮಾರು ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಜೋಡಿ : ಅಥಿಯಾ ಮತ್ತು ರಾಹುಲ್ ಈಗ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ಸಂಬಂಧವನ್ನು 2021 ರಲ್ಲಿ ಅಧಿಕೃತಗೊಳಿಸಿದರು. ಡೇಟಿಂಗ್ ವದಂತಿಗಳನ್ನು ದೃಢೀಕರಿಸಿ, ಕೆಎಲ್ ರಾಹುಲ್ ಅವರು ತಮ್ಮ ಜನ್ಮದಿನದಂದು ಅಥಿಯಾ ಅವರೊಂದಿಗೆ ಪ್ರೀತಿಯಲ್ಲಿ ಇರುವ ವಿಚಾರವನ್ನು ಹಂಚಿಕೊಂಡಿದ್ದರು. ಅಂದಿನಿಂದ ಇಬ್ಬರಿಗೂ ಅವಿನಾಭಾವ ಸಂಬಂಧ ಮುಂದುವರೆದಿದೆ.
ಅಥಿಯಾ ಅವರು ಟೀಮ್ ಇಂಡಿಯಾದ ಕೆಲವು ಪ್ರವಾಸಗಳಲ್ಲಿ ಕ್ರಿಕೆಟಿಗರೊಂದಿಗೆ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಗಾಯವಾಗಿ ಇಂಗ್ಲೆಂಡ್ ಟೂರ್ನಿಂದ ಕೆ ಎಲ್ ರಾಹುಲ್ ಹೊರಗುಳಿದ್ದಿದ್ದರು. ಜರ್ಮನಿಯಲ್ಲಿ ರಾಹುಲ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಅಥಿಯಾ ಕೂಡ ಜರ್ಮನಿ ತೆರಳಿದ್ದರು. ಅಲ್ಲದೇ ಬಿಡುವಿನ ದಿನಗಳಲ್ಲಿ ರಾಹುಲ್ ಮತ್ತು ಅಥಿಯಾ ಹೊರಗಡೆ ಸುತ್ತಾಡುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಅಥಿಯಾ ಅವರ ಮುಂದಿನ ಚಿತ್ರಗಳು: ಆಥಿಯಾ 2015 ರಲ್ಲಿ ಸೂರಜ್ ಪಾಂಚೋಲಿ ಜೊತೆಗೆ ಸಲ್ಮಾನ್ ಖಾನ್ ಅವರ ಹೀರೋ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. ಅವರು ನವಾಜುದ್ದೀನ್ ಸಿದ್ದಿಕಿ ಜೊತೆಗೆ ಮೋತಿಚೂರ್ ಚಕ್ನಾಚೂರ್ ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಇತ್ತೀಚೆಗೆ ಅಥಿಯಾ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸಿನಿಮಾ ಬಾಯ್ಕಾಟ್ ತಡೆಯಲು ಕ್ರಮ ಕೈಗೊಳ್ಳಿ: ಸಿಎಂ ಯೋಗಿಗೆ ಸುನೀಲ್ ಶೆಟ್ಟಿ ಮನವಿ