ನವದೆಹಲಿ: ಮಂಗಳವಾರ ಕೊರೊನಾದಿಂದ ಮುಂದೂಡಲ್ಪಟ್ಟಿದೆ. ಆದರೆ ದೆಹಲಿ ಫಿರೋಹ್ ಶಾ ಕೋಟ್ಲಾದಲ್ಲಿ ಬಾಲ್ ಟು ಬಾಲ್ ಬೆಟ್ಟಿಂಗ್ಗೆ ಸಹಾಯ ಮಾಡಲು ಪಿಚ್ ಸೈಡಿಂಗ್ ಮಾಡುವ ಸಲುವಾಗಿ ಬುಕ್ಕಿಗಳು ಕ್ಲೀನರ್ರನ್ನು ನೇಮಕ ಮಾಡಿಕೊಂಡಿದ್ದರೆಂಬ ಸ್ಫೋಟಕ ಮಾಹಿತಿಯನ್ನು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಶಬ್ಬೀರ್ ಹುಸೇನ್ ಶೇಖದಮ್ ಖಾಂಡ್ವಾಲಾ ಬಹಿರಂಗಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಐಪಿಎಲ್ ಪಂದ್ಯವೊಂದರಲ್ಲಿ ಬುಕ್ಕಿಗಳು ಗೊತ್ತುಪಡಿಸಿದ ಕ್ಲೀನರ್ ಮ್ಯಾಚ್ ಆ್ಯಕ್ಷನ್ ಮತ್ತು ಲೈವ್ ಟಿವಿ ಕವರೇಜ್ ನಡುವೆ ಸಮಯವನ್ನು ವಿಳಂಬ ಮಾಡಿ ಬಾಲ್ ಬೈ ಬಾಲ್ ಬೆಟ್ಟಿಂಗ್ಗೆ ಸಹಾಯ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಕ್ರೀಡಾಕೂಟಗಳ ಮಾಹಿತಿಯನ್ನು ಜೂಜಾಟ ಅಥವಾ ನೇರವಾದ ಪಂತಗಳ ಉದ್ದೇಶದಿಂದ ರವಾನಿಸುವುದಾಗಿದೆ. ಇದನ್ನು ಕೋರ್ಟ್ ಸೈಡಿಂಗ್ ಅಥವಾ ಪಿಷ್ ಸೈಡಿಂಗ್ ಎಂದೂ ಕರೆಯಲಾಗುತ್ತದೆ. ಮೊದಲು ಇದು ಟೆನಿಸ್ನಲ್ಲಿ ಕಂಡು ಬರುತ್ತಿತ್ತು. ಇದೀಗ ಕ್ರಿಕೆಟ್ನಲ್ಲಿ ಹೆಚ್ಚಾಗಿ ಬೇರೂರಿದೆ.
ನಮ್ಮ ಎಸಿಯು ಅಧಿಕಾರಿ ಒಬ್ಬ ವ್ಯಕ್ತಿಯನ್ನು ಹಿಡಿದು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಸ್ಥಳದಲ್ಲಿ ತನ್ನ ಎರಡು ಮೊಬೈಲ್ ಪೋನ್ಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಭ್ರಷ್ಟಾಚಾರ ನಿಗ್ರಹ ಘಟಕ ಈ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಿದೆ ಎಂದು ಅವರು ಬುಧವಾರ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಕೂಡ ಇಬ್ಬರನ್ನು ಬಂಧಿಸಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವುದರ ಕುರಿತು ಜುಲೈನಲ್ಲಿ ಅಂತಿಮ ನಿರ್ಧಾರ