ಇಸ್ಲಾಮಾಬಾದ್(ಪಾಕಿಸ್ತಾನ): ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲು ಕೇವಲ ಐದು ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ತಂಡದಿಂದ ಹೊರಬಿದ್ದಿದ್ದ ವೇಗಿ ಶಾಹೀನ್ ಶಾ ಆಫ್ರಿದಿ ಸ್ಥಾನಕ್ಕೆ ಇದೀಗ ಹೊಸ ಪ್ಲೇಯರ್ ಆಯ್ಕೆ ಮಾಡುವಲ್ಲಿ ಪಾಕ್ ಕ್ರಿಕೆಟ್ ಬೋರ್ಡ್ ಯಶಸ್ವಿಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಬೌಲಿಂಗ್ ಮಾಡಿ, ಹೆಚ್ಚು ಚರ್ಚೆಯಲ್ಲಿರುವ ವೇಗಿಗೆ ಪಾಕ್ ಮಣೆ ಹಾಕಿದೆ.
ಗಾಯದಿಂದ ಹೊರಗುಳಿದಿರುವ ಶಾಹೀನ್ ಆಫ್ರಿದಿ ಸ್ಥಾನಕ್ಕೆ ವೇಗದ ಬೌಲರ್ 22 ವರ್ಷದ ಮೊಹಮ್ಮದ್ ಹಸ್ನೈನ್ ಆಯ್ಕೆಯಾಗಿದ್ದಾರೆ. ಈಗಾಗಲೇ ಪಾಕ್ ಪರ 18 ಟಿ20 ಪಂದ್ಯಗಳನ್ನಾಡಿರುವ ಈ ಪ್ಲೇಯರ್ 17 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ ಆಡುತ್ತಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನಲ್ಲಿ ಮೊಹಮ್ಮದ್ ಹಸ್ನೈನ್ ಆಯ್ಕೆಯಾಗಿದ್ದರು. ಆದರೆ, ಅನುಮಾನಾಸ್ಪದ ರೀತಿಯ ಬೌಲಿಂಗ್ನಿಂದಾಗಿ ಅವರ ಮೇಲೆ ನಿಷೇಧ ಹೇರಲಾಗಿತ್ತು. ಇದಾದ ಬಳಿಕ ಐಸಿಸಿಯಿಂದ ಟೆಸ್ಟ್ಗೊಳಗಾಗಿ, ತಮ್ಮ ಬೌಲಿಂಗ್ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದ್ದರು.
-
Hasnain to replace Shaheen in Asia Cup
— PCB Media (@TheRealPCBMedia) August 22, 2022 " class="align-text-top noRightClick twitterSection" data="
Read details here ⤵️https://t.co/1BSEfF6KMl
">Hasnain to replace Shaheen in Asia Cup
— PCB Media (@TheRealPCBMedia) August 22, 2022
Read details here ⤵️https://t.co/1BSEfF6KMlHasnain to replace Shaheen in Asia Cup
— PCB Media (@TheRealPCBMedia) August 22, 2022
Read details here ⤵️https://t.co/1BSEfF6KMl
ಇದನ್ನೂ ಓದಿ: ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ತಲೆನೋವಾಗಿದ್ದ ಆಫ್ರಿದಿ ಏಷ್ಯಾಕಪ್ನಿಂದ ಔಟ್
ಏಷ್ಯಾಕಪ್ಗೆ ಪಾಕ್ ತಂಡ: ಪಾಕಿಸ್ತಾನ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್,ಮೊಹಮ್ಮದ್ ಹಸ್ನೈನ್
ಆಗಸ್ಟ್ 27ರಿಂದ ಯುಎಇನಲ್ಲಿ ಏಷ್ಯಾಕಪ್ ಆರಂಭಗೊಳ್ಳಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ-ಪಾಕ್ ದುಬೈನಲ್ಲಿ ಆಗಸ್ಟ್ 28ರಂದು ಮುಖಾಮುಖಿಯಾಗಲಿವೆ. ಇಲ್ಲಿಯವರೆಗೆ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 7 ಹಾಗೂ ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆದ್ದಿದೆ. ಇಲ್ಲಿ ಭಾರತ ಹೆಚ್ಚಿನ ಲಾಭ ಪಡೆದುಕೊಂಡಿದೆ.
ಗಾಯದಿಂದ ಬಳಲುತ್ತಿರುವ ಶಾಹಿನ್ ಆಫ್ರಿದಿಗೆ ಮುಂದಿನ 4-6 ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ, ಆಗಸ್ಟ್ 27ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ನಲ್ಲಿ ಅವರು ಭಾಗಿಯಾಗುತ್ತಿಲ್ಲ. ಅವರ ಸ್ಥಾನಕ್ಕೆ ಯುವ ವೇಗಿಗೆ ಮಣೆ ಹಾಕಲಾಗಿದೆ.